ಶಶಿಕಲಾ ಜೈಲಿನಿಂದ ಹೋರಗಡೆ ಹೋಗಿ ಒಳಗೆ ಬರುತ್ತಿರುವುದು ನಿಜವಾ?

21 Aug 2017 6:50 PM | Crime
277 Report

ಬೆಂಗಳೂರು: ಪರಪ್ಪನ ಅಗ್ರಹಾರ ಶಶಿಕಲಾಗೆ ಜೈಲಿನಲ್ಲಿ ಸಕಲ ಸೌಕರ್ಯ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಎದುರಾಗಿದೆ. ಈಗಾಗ್ಲೇ ಜೈಲಿನಲ್ಲಿರುವ ಶಶಿಕಲಾ ಜೈಲಿನಿಂದ ಹೊರ ಹೋಗಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ದೊರೆತಿದ್ದು, ಶಶಿಕಲಾ ಜೈಲಿನಿಂದ ಹೊರಗಿನಿಂದ ಒಳಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಶಶಿಕಲಾ ಜೈಲಿನಿಂದ ಹೋರಗಡೆ ಇಂದ ಒಳಗೆ ಬರುತ್ತಿರುವುದು ನಿಜವಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಈ ದೃಶ್ಯಾವಳಿಗಳಲ್ಲಿ ಮೊದಲು ಅಧೀಕ್ಷಕಿ ಅನಿತಾ ಜೈಲಿನ ಒಳಗೆ ಬರುತ್ತಿದ್ದು, ಅವರ ಹಿಂದೆ ಶಶಿಕಲಾ ಆಗಮಿಸಿದ್ದಾರೆ. ಜೈಲಿನ ಕೈದಿಗಳಿಗಿಂತ ಇವರಿಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೊಂದು ಸಾಕ್ಷಿ ದೊರೆತಿದೆ.

Edited By

venki swamy

Reported By

Sudha Ujja

Comments