ಸೌದಿ ಪೊಲೀಸರಿಗೆ ಸವಾಲಾದ ಮಿನಿ ಸ್ಕರ್ಟ್ ಹುಡುಗಿ

19 Jul 2017 4:21 PM | Crime
529 Report

ಸೌದಿ ಅರೇಬಿಯಾ ಐತಿಹಾಸಿಕ ಕೋಟೆಯೊಂದರಲ್ಲಿ ಮಿನಿ ಸ್ಕರ್ಟ್ ಧರಿಸಿರುವ ಮಾಡೆಲ್ ಓಡಾಡುತ್ತಿರುವ ವಿಡಿಯೋ ಸ್ನಾಪ್ ಚಾಟ್ ಮೂಲಕ ಬಹಿರಂಗವಾಗಿ ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದ್ದಿಗೆ ಗ್ರಾಸವಾಗಿದೆ. ಅಲ್ಲದೇ ನಿಯಮ ಮೀರಿ ಐತಿಹಾಸಿಕ ಕೋಟೆಯೊಳಗೆ ಪ್ರವೇಶ ಮಾಡಿದ ಮಾಡೆಲ್ ಮೇಲೆ ಸೌದಿಯ ಹಲವು ಜನರಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಈಕೆ ಸೌದಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮಾಡೆಲ್ ಖುಲೂದ್ ಎಂಬುವವರ ಸ್ನಾಪ್ ಚಾಟ್ ಖಾತೆಯಲ್ಲಿ ಸರಣಿ ವಿಡಿಯೋಗಳು ಪೋಸ್ಟ್ ಆಗಿವೆ. ತುಂಡು ಲಂಗ ಧರಿಸಿರುವ ಯುವತಿ ಉಶೈಖರ್ ಪೋರ್ಟ್ ಒಳಗೆ ಓಡಾಡುತ್ತಿರುವ ದೃಶ್ಯ ಇದರಲ್ಲಿದೆ. ಮರಳಲ್ಲಿ ಆಟವಾಡುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾಳೆ. 

ಯೂಟ್ಯೂಬ್`ಗೂ ವಿಡಿಯೋ ಪೋಸ್ಟ್ ಆಗಿದ್ದು, ಹಲವರು ಟ್ವೀಟ್ ಮಾಡಿದ್ದಾರೆ. ರಿಯಾದ್ ಸ್ಥಳೀಯ ಸರ್ಕಾರ ಈ ಬಗ್ಗೆ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಅಸಭ್ಯ ಉಡುಪು ತೊಟ್ಟು ಐತಿಹಾಸಿಕ ಸ್ಥಳದಲ್ಲಿ ನಡೆದಾಡಿರುವ ಯುವತಿಯನ್ನ ಪತ್ತೆ ಹಚ್ಚುವಂತೆ ಆದೇಶಿಸಿದೆ. ಸೌದಿ ನಿಯಮಗಳ ಪ್ರಕಾರ, ಮಹಿಳೆಯರು ತುಂಡುಡುಗೆ ತೊಟ್ಟು ಓಡಾಡುವುದು ಕಾನೂನು ಬಾಹಿರವಾಗಿದೆ.

Edited By

venki swamy

Reported By

Sudha Ujja

Comments