ಆಘಾತಕಾರಿ ವರದಿ,.ಇಲ್ಲಿ ಮಕ್ಕಳೇ ಟಾರ್ಗೆಟ್,. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಡ್ಡ ದಾರಿ?

14 Jul 2017 5:10 PM | Crime
603 Report

ದೇಶದೆಲ್ಲೆಡೆ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಮಾಹಿತಿ ಬಹಿರಂಗಗೊಂಡಿದೆ. ಡ್ರಗ್ಸ್ ದುಶ್ಟಟಕ್ಕೆ ಒಳಗಾದವರಲ್ಲಿ ವಯಸ್ಕರಿಗಿಂತ ಚಿಕ್ಕ ಮಕ್ಕಳೇ ಹೆಚ್ಚು ಎಂಬುದು ಮಾಹಿತಿಯಿಂದ ಬಹಿರಂಗವಾಗಿದೆ.

 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡ್ರಗ್ಸ್ ಚಟಕ್ಕೆ ಮಕ್ಕಳು ದಾಸರಾಗುತ್ತಿದ್ದಾರೆ. ಇಲ್ಲಿ  25, 000 ಸಾವಿರ ಮಕ್ಕಳು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರಂತೆ. ಅವರಲ್ಲಿ 6 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಎಂಬದೇ ಆಘಾತಕಾರಿ ಮೂಡಿಸಿದೆ.

ದೆಹಲಿಯಲ್ಲಿ ಡ್ರಗ್ಸ್  ನ್ನು 'ಸಾಮಾನ್ 'ಅಥವಾ 'ಪುಡಿಯಾ' ಎನ್ನುವ 'ಕೋಡ್ ವರ್ಡ್ಸ್' ಬಳಸಲಾಗುತ್ತದೆಯಂತೆ. ವರದಿಯಿಂದ ತಿಳಿದು ಬಂದ ಅಂಶವೆನೆಂದರೆ,ಡ್ರಗ್ಸ್ ಮಾರಾಟ ದಂಧೆಯಲ್ಲಿ ಸಿಲುಕುವರು ಹೆಚ್ಚು ಮಕ್ಕಳೇ , ಆದ್ದರಿಂದ ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತದೆ. ಡ್ರಗ್ಸ್ ದಂಧೆಯಲ್ಲಿ ವ್ಯಾಪಾರಿಗಳು ಮಕ್ಕಳನ್ನೇ ಟಾರ್ಗೆಟ್  ಮಾಡುತ್ತಿದ್ದಾರೆ. ಇದುವರೆಗೂ ಉತ್ತರ ಹಾಗೂ ಪೂರ್ವ ದೆಹಲಿಯಲ್ಲಿ 25 ಸಾವಿರ ಮಕ್ಕಳು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆ. ದೆಹಲಿಯಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವರಿಲ್ಲ ಎಂಬತಾಗಿದೆ. ಈ ಕುರಿತು ಪೊಲೀಸರ ಗಮನಕ್ಕೆ ಬಂದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪವಿದೆ. ಇನ್ನು ಡ್ರಗ್ಸ್ ವ್ಯಾಪಾರಿಗಳು ಎಚ್ಚರಿಕೆಯಿಂದ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Edited By

venki swamy

Reported By

Sudha Ujja

Comments