3 ವರ್ಷಗಳ ಕಾರ್ಯಾಚರಣೆ ಅಂತ್ಯ!

10 Jul 2017 11:13 AM | Crime
391 Report

ಉಗ್ರರ ವಿರುದ್ಧ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಸೈನಿಕರಿಗೆ, ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ

ಮೊಸುಲ್ : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್ ) ಉಗ್ರರ ಹಿಡಿತದಲ್ಲಿರುವ ಮೊಸುಲ್ ನಲ್ಲಿ ಇರಾಕ್ ಸೇನೆ 

ಗೆಲುವು ಸಾಧಿಸಿದೆ ಎಂದು ಇರಾಕ್ ಪ್ರಧಾನಿ ಹೈದರ್ ಅಲ್ ಅಬಾಡಿ ಘೋಷಣೆ ಮಾಡಿದ್ದಾರೆ.  ಉಗ್ರರ ವಿರುದ್ಧ ಹೋರಾಡಿ 

ಐತಿಹಾಸಿಕ ಗೆಲುವು ಸಾಧಿಸಿದ ಸೈನಿಕರಿಗೆ, ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.  

3 ವರ್ಷಗಳಿಂದ ಇಸಿಸ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ಮೊಸೂಲ್ ನಲ್ಲಿ ಇರಾಕ್ ಸೇನೆ ಮತ್ತು ಇಸಿಸ್ ಮಧ್ಯೆ ಯುದ್ಧ ನಡೆದಿತ್ತು. 

ಮೊಸುಲ್ ಪಟ್ಟಣದಲ್ಲಿ ವಶಪಡಿಸಿಕೊಂಡಿರುವ ಚಿತ್ರವೊಂದನ್ನು ಅಬಾಡಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.  

2014 ರಲ್ಲಿ ಇಸಿಸ್ ಸಂಘಟನೆ ಮೊದಲ ಬಾರಿಗೆ ಮೊಸುಲ್ ನಗರವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ನಂತರ ಈ ಭಾಗದಲ್ಲಿ 

ಖಲೀಫ್ ಸಾಮ್ರಾಜ್ಯ ಸ್ಥಾಪನೆಯ ಘೋಷಣೆ ಮಾಡಿತ್ತು. ಆದರೆ ಅಮೆರಿಕ ನೇತೃತ್ವದ ಒಕ್ಕೂಟ ದಾಳಿ ಆರಂಭಿಸಿದ 

ನಂತರದಲ್ಲಿ ಇಸಿಸ್ ತನ್ನ ಹಿಡಿತದಲ್ಲಿ ಕೊಂಡಿದ್ದ ಪ್ರದೇಶಗಳನ್ನು ಕಳೆದುಕೊಂಡಿದ್ದು ಇತಿಹಾಸವಾಗಿದೆ.  

ಉಗ್ರರ ಕರಿಮುಷ್ಠಿಯಲ್ಲಿದ್ದ ಮೊಸುಲ್ ನ್ನು ವಿಮೋಚನೆ ಗೊಳಿಸುವ ಉದ್ದೇಶದಿಂದ 2016ರ ಸೆಪ್ಟೆಂಬರ್ 23ರಲ್ಲಿ ಸೇನಾ 

ಸಹಕಾರದೊಂದಿಗೆ ಒಪ್ಪಂದಗಳು ಏರ್ಪಟ್ಟಿತ್ತು. ಇದರ ಅನ್ವಯ ಅಮೆರಿಕಾ ಮತ್ತು ಮೈತ್ರಿ ರಾಷ್ಟ್ರಗಳ ಇರಾಕ್ ಸೇನಾ ಪಡೆಗಳಿಗೆ 

ತರಬೇತಿ ನೀಡಿದ್ದವು. 

Edited By

venki swamy

Reported By

Sudha Ujja

Comments