ಲಾಲೂ ಪುತ್ರಿ ನಿವಾಸದ ಮೇಲೆ ಇಡಿ ದಾಳಿ

08 Jul 2017 12:21 PM | Crime
471 Report

ನವದೆಹಲಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಶನಿವಾರ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ 

ಪುತ್ರಿ ಮೀಸಾ ಭಾರತಿ ಅವರ ದಿಲ್ಲಿಯ ಸೈನಿಕ ಫಾರ್ಮ್ ನಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಪ್ರಕರಣದ 

ಸಂಬಂಧವಾಗಿ ದಾಳಿ ನಡೆಸಿರುವ ಅಧಿಕಾರಿಗಳು, ಜಾರಿ ನಿರ್ದೇಶನಾಲಯದವರು ಈ ಹಿಂದೆ ಮೀಸಾ ಭಾರ್ತಿ ಅವರ ಚಾರ್ಟರ್ಡ್ 

ಅಕೌಂಟೆಂಡ್ ಅನ್ನು ಬಂಧಿಸಿದ್ದರು. 

ಕಪ್ಪು ಹಣ ತೊಡಗಿಸಿಕೊಂಡ ಆರೋಪದ ಮೇರೆಗೆ ರಾಜೇಶ್ ಅಗ್ರವಾಲ್ ಎಂಬುವರನ್ನು ದಿಲ್ಲಿಯಲ್ಲಿ ಕಳೆದ ಸೋಮವಾರ 

ಬಂಧಿಸಲಾಗಿತ್ತು.ಅಗ್ರವಾಲ್ ಅವರು ಜೈನ್ ಬ್ರದರ್ಸ್ ಎಂದೇ ತಿಳಿಯಲ್ಪಟ್ಟಿರುವ ಸುರೇಂದ್ರ ಅಗ್ರವಾಲ್ ಎಂಬುವರನ್ನು ದೆಹಲಿಯಲ್ಲಿ 

ಕಳೆದ ಸೋಮವಾರ ಬಂಧಿಸಲಾಗಿತ್ತು.  

ಅಗ್ರವಾಲ್ ಅವರು ಜೈನ್ ಬ್ರದರ್ಸ್ ಎಂದೇ ತಿಳಿಯಲ್ಪಟ್ಟಿರುವ ಸುರೇಂದ್ರ ಕುಮಾರ ಜೈನ್ ಮೂಲವಾಗಿ ಪರಿವರ್ತಿಸಿರುವ 

ಆರೋಪ ಅಗ್ರವಾಲ್ ಮೇಲಿದೆ. ಜಾರಿ ನಿರ್ದೇಶನಾಲಯದವರು ಕಳೆದ ಮಾರ್ಚ್ 20ರಂದು ಜೈನ್ ಸಹೋದರರನ್ನು ಬಂಧಿಸಿದ್ದರು. 

ನಿನ್ನೆ ಶುಕ್ರವಾರವಷ್ಟೇ ಸಿಬಿಐ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ 

ಅವರಿಗೆ ಸೇರಿದ ನಾಲ್ಕು ನಗರಗಳಲ್ಲಿನ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿತ್ತು ಆ ಮೂಲಕ ಲಾಲುಗೆ ಶಾಕ್ ನೀಡಿತ್ತು. 

Edited By

venki swamy

Reported By

Sudha Ujja

Comments