ನೇತಾಜಿ ಕುಟುಂಬಕ್ಕೆ ಬೆದರಿಕೆ, 6ಮಂದಿ ಬಂಧನ

04 Jul 2017 3:11 PM | Crime
409 Report

ಕೋಲ್ಕತ್ತಾ: ನೇತಾಜಿ ಸುಭಾಷ್ಚಂದ್ರಬೋಸ್ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಲ್ಲಿನ ಶರತ್ಬೋಸ್ರಸ್ತೆಯಲ್ಲಿರುವ ನೇತಾಜಿ ಸಂಬಂಧಿ ಡಾ.ಸಿ ಶಿರ್ಬೋಸ್ನಿವಾಸಕ್ಕೆ ನುಗ್ಗಿದ 8 ಮಂದಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ಸಿಶಿರ್ಬೋಸ್ತಮ್ಮ ಮನೆ ಹಾಳಾಗಿದ್ದು, ರಿಪೇರಿಗೆ ಮುಂದಾಗಿದ್ದರು. ಮಧ್ಯಾಹ್ನದ ಹೊತ್ತಿಗೆ ನಾಲ್ಕು ಬೈಕ್ಗಳಲ್ಲಿ ಬಂದ 8 ಮಂದಿ ಗೂಂಡಾ ವ್ಯಕ್ತಿಗಳು ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ತಮ್ಮ ಬಳಿಯೇ ಖರೀದಿಸಬೇಕು, ನಮ್ಮಲ್ಲಿ ಯಾಕೆ ಕಟ್ಟಡ ಸಾಮಾಗ್ರಿ ಖರೀದಿಸಿಲ್ಲ, ನಮ್ಮಲ್ಲಿ ಖರೀದಿಸಿಲ್ಲ ಎಂದರೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ನೇತಾಜಿ ಕುಟುಂಬದ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಈ ವೇಳೆ ನೇತಾಜಿ ಅವರ ಸಂಬಂಧಿಗಳಾದ ಹಾಲಿ ಸಂಸದ ಸುಗತಬೋಸ್, ಡಾ.ಸಿಶಿರ್ಬೋಸ್, ಮತ್ತವರ ಪತ್ನಿ ಟಿಎಂಸಿಯ ಮಾಜಿ ಸಂಸದೆ ಕೃಷ್ಣಾಬೋಸ್, ಮತ್ತಿವರ ಮಗ ಇದ್ದರು ಎಂದು ತಿಳಿದುಬಂದಿದೆ.

ಬೆದರಿಕೆ ಹಿನ್ನೆಲೆ ನೇತಾಜಿ ಕುಟುಂಬ ಪೊಲೀಸರಿಗೆ ದೂರು ಸಲ್ಲಿಸಿದ್ದು, 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Edited By

venki swamy

Reported By

Sudha Ujja

Comments