ನಿಮಗಿದು ಗೊತ್ತಾ? ಸಾವಿಗೆ ಕಾರಣವಾಗುತ್ತದ ‘ಚೂಯಿಂಗ್ ಗಮ್’

ನವದೆಹಲಿ: ಕೆಲವರು ಚೂಯಿಂಗ್ ಗಮ್ ತಿನ್ನುವುದು ಸ್ಟೈಲಿಶ್ ಎಂದು ಕೊಂಡಿರುತ್ತಾರೆ. ತುಂಬಾ ಜನರಿಗೆ ಚೂಯಿಂಗ್ ಗಮ್ ತಿನ್ನುವುದು ಆಸಕ್ತಿದಾಯಕ ಹವ್ಯಾಸಗಳಲ್ಲಿ ಒಂದು. ಮಕ್ಕಳು, ಹಿರಿಯರು, ಎಂಬ ಭೇದ ಭಾವವಿಲ್ಲ. ಕ್ರಿಕೆಟ್ ಅಂಗಳದಲ್ಲಿ ಆಡುವ ವಿಶ್ವಖ್ಯಾತರಿಂದ ಹಿಡಿದು ಶಾಲೆಗೆ, ಕಾಲೇಜಿಗೆ ಹೋಗುವ ಮಕ್ಕಳಿಗೆ ಚೂಯಿಂಗ್ ಗಮ್ ಬೇಕು.
ಆದ್ರೆ ನಿಮಗಿದು ಗೊತ್ತಾ! ಚೂಯಿಂಗ್ ಗಮ್ ತಿನ್ನುವುದು ಎಷ್ಟು ಹಾನಿಕಾರಕ ಎಂದು. ಇದರಿಂದ ಹಲವಾರು ರೀತಿಯ ಅಡ್ಡ ಪರಿಣಾಮಗಳು ಆಗುತ್ತವೆ. ಇದು ನಿಮ್ಮ ಸಾವಿಗೂ ಕಾರಣವಾಗಬಹುದು.
ಇತ್ತೀಚೆಗೆ ನಡೆಸಿದೆ ಅಧ್ಯಯನದ ಪ್ರಕಾರ ,ಚೂಯಿಂಗ್ ನಲ್ಲಿರುವ ಜಿಗಿಯುವ ಅಂಶ ಸಮಯದಲ್ಲಿ ಸಾವು ತರಬಹುದು. ಇದು ಕರುಳಿನ ಕ್ಯಾನ್ಸರ್ ಗೂ ಕಾರಣವಾಗಬಹುದೆಂದು ವರದಿ ಹೇಳಿದೆ.
‘ಜರ್ನಲ್ ನ್ಯಾನೋ ಇಂಪ್ಯಾಕ್ಟ್ ಆಫ್’ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಚೂಯಿಂಗ್ ಗಮ್ ನಲ್ಲಿ ಟೈಟಾನಿಕ್ ಡೈಆಕ್ಸೈಡ್ ಅಂಶ ವಿದ್ದು, ಇದು ಕರುಳಿನಲ್ಲಿ ಜೋಡಿಸಲಾಗಿರುವ ಜೀವಕೋಶಗಳನ್ನು ಒಡೆಯುತ್ತದೆ, ಜೀರ್ಣಕಾರಿ ಜೀವಕೋಶಗಳನ್ನು ಇದು ದುರ್ಬಲಗೊಳಿಸುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಯನ್ನು ಇದು ಹೆಚ್ಚಿಸುತ್ತದೆ ಎನ್ನಲಾಗಿದೆ.
ಆದ್ದರಿಂದ ಚೂಯಿಂಗ್ ಗಮ್ ತಿನ್ನುವ ಮೊದಲು ಒಮ್ಮೆ ಯೋಚಿಸಿದರೆ ಒಳ್ಳೆಯದು.
Comments