ಪತ್ರಕರ್ತರ ಜತೆ 'ದಿಪಾವಳಿ ಮಿಲನ್' ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪಿಎಂ ಮೋದಿ

27 Oct 2017 11:13 PM | Politics
431 Report

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರಕರ್ತರನ್ನು ಭೇಟಿಯಾಗುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದಾರೆ. ಬಿಜೆಪಿ ಮುಖ್ಯ ಕಚೇರಿ 9 ಅಶೋಕ ರೋಡ್ ಗೆ ಆಗಮಿಸಲಿರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮೀಡಿಯಾದವರನ್ನು ಭೇಟಿ ಯಾಗಲಿದ್ದಾರೆ.

'ದೀಪಾವಳಿ ಮಿಲನ್' ಎಂಬ ಕಾರ್ಯಕ್ರಮದಲ್ಲಿ ಪರ್ತಕರ್ತರ ಜತೆಗೆ ಚರ್ಚೆ, ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಹಲವು ಪತ್ರಕರ್ತರು ಭಾಗಿಯಾಗುತ್ತಿದ್ದಾರೆ. ಮೋದಿ ಪ್ರತಿ ಪತ್ರಕರ್ತರ ಹತ್ತಿರ ತೆರಳಿ ದೀಪಾವಳಿ ಹಬ್ಬದ ಶುಭಾಷಯ ಕೋರಲಿದ್ದಾರೆ.

ಪ್ರಧಾನಿ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ನಡೆಯಲಿದೆ. 1 ಗಂಟೆಗಿಂತ ಅಧಿಕ ಸಮಯದವರೆಗೂ ಈ ಕಾರ್ಯಕ್ರಮ ನಡೆಯಲಿದ್ದು, ನಾಳೆ ಶನಿವಾರದಂದು ಈ ಕಾರ್ಯಕ್ರಮವಿದೆ. 11 ಗಂಟೆಗೆ ಬಿಜೆಪಿಯ ಮುಖ್ಯಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Edited By

Shruthi G

Reported By

Sudha Ujja

Comments