ಭಾರತದಲ್ಲಿ ಮೊಬೈಲ್ ಉತ್ಪಾದನೆ: 5 ಲಕ್ಷ ಉದ್ಯೋಗ ಸೃಷ್ಟಿ..!

27 Jan 2018 10:59 AM | General
400 Report

ಭಾರತದ ಸರಕಾರ ದೇಶದಲ್ಲಿ ಉತ್ಪಾದಿಸಿ ಎನ್ನುವ ಕಾರ್ಯಕ್ಕೆ ಜಾಗತಿಕ ಮೊಬೈಲ್ ತಯಾರಕ ಕಂಪನಿಗಳು ಮುಂದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ ಬೇಡಿಕೆಯೂ ಹೆಚ್ಚಾಗಿದೆ ಎನ್ನುವುದು ಇದಕ್ಕೆ ಕಾರಣವಾಗಿದೆ.

 ಈ ಹಿನ್ನಲೆಯಲ್ಲಿ ಎಲ್ಲಾ ಸ್ಮಾರ್ಟ್ಫೋನ್ ತಯಾರಕರು ಭಾರತದಲ್ಲಿಯೇ ತಮ್ಮ ಸ್ಮಾರ್ಟ್ಫೋನ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಲು ಮುಂದಾಗಿವೆ. ಈಗಾಗಲೇ ಇದೇ ಮಾದರಿಯಲ್ಲಿ ಶಿಯೋಮಿ ಭಾರತದಲ್ಲಿ ತನ್ನ ಹಾಂಡ್ ಸೆಟ್ ತಯಾರಕ ಘಟಕವನ್ನು ಕಾರ್ಯಾರಂಭವನ್ನು ಮಾಡಿದೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆ ಹೆಚ್ಚಾಗಲಿದ್ದು, ಈ ವಿಭಾಗವು ಮುಂದಿನ ವರ್ಷಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ದೇಶದಲ್ಲಿ ಸೃಷ್ಟಿಸಲಿವೆ ಎಂದು ವರದಿಯಾಗಿದೆ. ಈಗಾಗಲೇ ದೇಶದಲ್ಲಿ ಸುಮಾರು 1.5 ಲಕ್ಷ ಉದ್ಯೋಗಗಳನ್ನು ಮೊಬೈಲ್ ಹ್ಯಾಂಡ್ಸೆಟ್ ಉತ್ಪಾದಕ ಕಂಪನಿಗಳು ಸೃಷ್ಟಿಸಿವೆ ಎಂದು ವರದಿಯೊಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಗಲಿದೆ.

Edited By

Suresh M

Reported By

Suresh M

Comments