ಹೈಕೋರ್ಟ್ ನಲ್ಲಿ ನೌಕರರಾಗಿದ್ದೀರಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್..!

04 Apr 2018 9:33 AM | General
1559 Report

ಬೆಂಗಳೂರು:- ಸಾಕಷ್ಟು ಕಂಪನಿಗಳಲ್ಲಿ ವೇತನ ತಾರತಮ್ಯ ಇದ್ದೆ ಇರುತ್ತದೆ. ಕೆಲವರಿಗೆ ಹೆಚ್ಚು, ಇನ್ನೂ ಕೆಲವರಿಗೆ ಕಡಿಮೆ.. ಆದರೂ ಅವರವರ ಅನುಭವದ ಮೇಲೆ ವೇತನವನ್ನು ನಿರ್ಧರಿಸುತ್ತಾರೆ. ಆದರೆ ಇದೀಗ ರಾಜ್ಯ ಸರ್ಕಾರವು ಕೂಡ ಒಂದು ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.

ಹೌದು, ರಾಜ್ಯ ಸರ್ಕಾರವು ಹೈಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಮನಾದ ವೇತನವನ್ನು ನೀಡಲು ಮುಂದಾಗಿದೆ.ಸರ್ಕಾರದ ಪರವಾಗಿ ಹೈಕೋರ್ಟ್ ನಲ್ಲಿ ಅಡ್ವೋಕೇಟ್ ಆಗಿರುವ ಜನರಲ್ ಮಧುಸೂದನ್ ನಾಯಕ್ ಹೇಳಿಕೆಯನ್ನು ನೀಡಿದ್ದಾರೆ. ಹೈಕೋರ್ಟ್ ನೌಕರರಿಗೆ ಮತ್ತು ಸಿಬ್ಬಂದಿಗೆ ವೇತನ ಪರಿಷ್ಕರಣೆ  ಹಾಗೂ ಬಾಕಿ ಬಿಡುಗಡೆಗೆ ಅಗತ್ಯವಿರುವ ಅನುದಾನವನ್ನು ಒದಗಿಸುವ ಒಪ್ಪಿಗೆ ನೀಡಿರುವುದಾಗಿ ಹೈಕೋರ್ಟ್ ಗೆ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ನೌಕರರ ಕಲ್ಯಾನ ಸಂಘವು ಮತ್ತು ನಿಜಗುಣಿ ಎಂ. ಕರಡಿಗುಡ್ಡ ಸಲ್ಲಿಸಿದಂತಹ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆವು ಬಿ.ಎಸ್ ಪಾಟೀಲ್, ಬಿ.ವಿ ಅವರ ವಿಭಾಗೀಯ ಪೀಠದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಅವರು  ಈಗಾಗಲೇ ಹಣಕಾಸು ಇಲಾಖೆ ಒಪ್ಪಿಗೆ  ನೀಡಿರುವುದನ್ನು ತಿಳಿಸಿದ್ದಾರೆ.

Edited By

Shruthi G

Reported By

Manjula M

Comments