ಬೆಂಗಳೂರು ಕೆಐಎ ದೇಶದ ಪ್ರಥಮ ಆಧಾರ್ ಸಶಕ್ತ ವಿಮಾನ ನಿಲ್ದಾಣ..!!

09 Oct 2017 5:54 PM | General
440 Report

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2018 ರ ಅಂತ್ಯದ ವೇಳೆಗೆ ದೇಶದ ಮೊದಲ ಸಕ್ರಿಯ ಆಧಾರ್ ವಿಮಾನ ನಿಲ್ದಾಣ ಎನಿಸಲಿದೆ.

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಲಿಂಕ್ ಮಾಡಿಸುವುದಲ್ಲದೆ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ಮಾಡಲು ಉದ್ದೇಶಿಸಿದೆ.ಈ ಉಪಕ್ರಮವು ಪ್ರಯಾಣಿಕರ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲು ಸಹಕಾರಿಯಾಗಲಿದೆ, ಪ್ರಸ್ತುತ ಪ್ರಯಾಣಿಕರ ಪರಿಶೀಲನೆ ಪ್ರಕ್ರಿಯೆಯು ಸರಾಸರಿ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಬಿಐಎಎಲ್ ಈಗಿರುವ 25 ನಿಮಿಷಗಳ ಅವಧಿಯನ್ನು 10 ನಿಮಿಷಗಳಿಗೆ ಕಡಿತಗೊಳಿಸಲು ಯೋಜಿಸಿದೆ. ಈ ನೂತನ ಮಾದರಿಯಿಂದ, ಪ್ರತಿ ಚೆಕ್ ಪಾಯಿಂಟ್ ನಲ್ಲಿ 5 ಸೆಕೆಂಡುಗಳಲ್ಲಿ ಓರ್ವ ಪ್ರಯಾಣಿಕರನ್ನು ಪರಿಶೀಲಿಸಬಹುದು.ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಸಂಪರ್ಕಿಸಿಅಲು ಬಿಐಎಎಲ್ ಡಿಸೆಂಬರ್ 2018 ನ್ನು ಗಡುವು ಎಂದು ನಿರ್ಧರಿಸಿದೆ.

ಮಾದ್ಯಮ ವರದಿಯ ಪ್ರಕಾರ, ಬಿಐಎಎಲ್  ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಹರಿ ಮಾರಾರ್ "ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ, ಅವರ ತ್ವರಿತ ಆಗಮನ, ನಿರ್ಗಮನಕ್ಕಾಗಿ ಆಧಾರ್ ಸಂಪರ್ಕ ಯೋಜನೆ ಪ್ರಾರಂಭಿಸಲಾಗುತ್ತಿದೆ."

 

Edited By

Shruthi G

Reported By

Shruthi G

Comments