ಬೆಂಗಳೂರು ನಗರ ಈಗ ಗ್ರಾಫಿಕ್ಸ್ ಮತ್ತು ಆನಿಮೇಶನ್ಗಳ ಕೇಂದ್ರ

21 Jul 2017 11:22 AM | Bengaluru
1240 Report

ಬೆಂಗಳೂರು ನಗರವನ್ನು ಆನಿಮೇಶನ್, ಗ್ರಾಫಿಕ್ಸ್ ಮತ್ತು ವಿಷುವಲ್ ಎಫೆಕ್ಟ್ ಟೆಕ್ನಾಲಜಿಯ ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಮಾಡಲು ರಾಜ್ಯ ಸಚಿವ ಸಂಪುಟ ನಿನ್ನೆ ಕರ್ನಾಟಕ ಅನಿಮೇಶನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಅಂಡ್ ಕಾಮಿಕ್ಸ್ (ಎವಿಜಿಸಿ) ನೀತಿ 2017-22 ಕ್ಕೆ ಅನುಮೋದನೆ ನೀಡಿದೆ. ಆನಿಮೇಶನ್ ಗೆ ಪರಿಣತ ಕೇಂದ್ರ(ಸೆಂಟರ್ ಆಫ್ ಎಕ್ಸೆಲೆನ್ಸ್) ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ.

2022ರವರೆಗೆ ಯೋಜನೆಯಿಟ್ಟುಕೊಂಡು ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಆನಿಮೇಶನ್, ಗ್ರಾಫಿಕ್ಸ್, ವಿಷುವಲ್ ಎಫೆಕ್ಟ್ ಗಳಲ್ಲಿ ಕೌಶಲ್ಯಾಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲು ಒತ್ತು ನೀಡಲಿದೆ. ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಉದ್ಯೋಗಾವಕಾಶ ಹೆಚ್ಚಿಸಲು ಈ ನೀತಿ ಅನುವು ಮಾಡಿಕೊಡಲಿದೆ.

''ಹೊಸ ನೀತಿ ಸುಮಾರು 20,000 ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 20 ಕೋಟಿ ರೂಪಾಯಿ ವೆಚ್ಚದಲ್ಲಿ ಆನಿಮೇಶನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್ ನಿಧಿ ಸ್ಥಾಪಿಸಿದೆ ಎಂದು ಹೇಳಿದ ಸಚಿವ ಪ್ರಿಯಾಂಕ ಖರ್ಗೆ.

Edited By

Suhas Test

Reported By

Suhas Test

Comments