ಮೆಟ್ರೋ ಗೆ ಬರಲಿದೆ ಹೈಟೆಕ್ ಮಷಿನ್

17 Jul 2017 12:32 PM | Bengaluru
556 Report

ಬೆಂಗಳೂರು: ಇದೀಗ ನಮ್ಮ ಮೆಟ್ರೋ ಹೈಟೆಕ್ ಆಗಲಿದೆ. ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ನೆರವಾಗುವ ದೃಷ್ಟಿಯಿಂದ ಚಿಲ್ಲರೆ ಸಹಿತ ಟಿಕೇಟ್ ನೀಡುವ ಹೊಸ ಮಷಿನ್ ಖರೀದಿಗೆ ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ. ಸಿಂಗಾಪುರ ಸೇರಿದಂತೆ ಹೊರ ದೇಶದಲ್ಲಿ ಈ ರೀತಿಯ ಯಂತ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಆದರೆ ನಮ್ಮ ಮೆಟ್ರೋದಲ್ಲಿ ಸ್ವಯಂ ಚಾಲಿತ ಟಿಕೆಟ್ ಯಂತ್ರ ಇಡಲಾಗಿದೆ.

ಆದರೆ ಈ ಯಂತ್ರ ಈಗ ಸೂಕ್ತ ಪ್ರಮಾಣದ ಹಣ ಹಾಕಿದರೆ ಮಾತ್ರ ಟಿಕೆಟ್ ನೀಡುತ್ತದೆ. ಆದರೆ ಚಿಲ್ಲರೆ ನೀಡುತ್ತಿಲ್ಲ. ಹೀಗಾಗಿ ಎಂ.ಜಿ.ರಸ್ತೆ ಬೈಯ್ಯಪ್ಪನಹಳ್ಳಿ , ಇಂದಿರಾ ನಗರದಲ್ಲಿ ಈ ಸ್ವಯಂ ಚಾಲಿತ ಯಂತ್ರ ಇಡಲಾಗಿದೆ. ಆದರೆ ಈ ಯಂತ್ರ ಈಗ ಸೂಕ್ತ ಪ್ರಮಾಣದ ಹಣ ಹಾಕಿದರೆ ಮಾತ್ರ ಟಿಕೆಟ್ ನೀಡುತ್ತದೆ. ಆದರೆ ಚಿಲ್ಲರೆ ನೀಡುವುದಿಲ್ಲ.

 ಹೀಗಾಗಿ ಎಂ.ಜಿ ರಸ್ತೆ ಬೈಯ್ಯಪ್ಪನಹಳ್ಳಿ ಇಂದಿರಾ ನಗರದಲ್ಲಿ ಈ ಸ್ವಯಂ ಚಾಲಿತ ಯಂತ್ರ ಇಡಲಾಗಿದ್ದರೂ ಜನರು ಟಿಕೆಟ್ ಖರೀದಿಸಲು ಆಸಕ್ತಿ ವಹಿಸುವುದಿಲ್ಲ. ಹೀಗಾಗಿ ಸಿಂಗಾಪುರ ಬಿಎಂಆರ್ ಸಿಎಲ್ ಆಸಕ್ತಿ ವಹಿಸಿದೆ. ಇದರಲ್ಲಿ ಟಿಕೆಟ್ ಮೊತ್ತಕ್ಕಿಂತ ಹೆಚ್ಚಿನ ಹಣ ಅಥವಾ ನೋಟ್ ಹಾಕಿದರೂ ಕೂಡ ಚಿಲ್ಲರೆ ವಾಪಸ್ ನೀಡುತ್ತದೆ. ಇನ್ನು ಈ ಯಂತ್ರವನ್ನು ಬಿಎಂಆರ್ ಸಿಎಲ್ ಖರೀದಿಸಿದ್ದರೆ ಭಾರತದಲ್ಲೇ ಮೊದಲ ಪ್ರಯತ್ನವಾಗಲಿದೆ. ಇದರ ಜೊತೆಗೆ ಮೆಟ್ರೋದಲ್ಲಿ ಕಿರಿ-ಕಿರಿಗೆ ಕಾರಣವಾಗಿದ್ದ ಚಿಲ್ಲರೆ ಸಮಸ್ಯೆಗೆ ಪರಿಹಾರ ದೊರಯಲಿದೆ.

 

Edited By

venki swamy

Reported By

Sudha Ujja

Comments