'ನಮ್ಮ ಮೆಟ್ರೋ' ಇಂದು ರಾಷ್ಟ್ರಪತಿಗಳಿಂದ ಉದ್ಘಾಟನೆ,

17 Jun 2017 11:11 AM | Bengaluru
604 Report

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಸಂತಸದ ಸುದ್ದಿ. ೧೦ ವರ್ಷಗಳ ಬಳಿಕ ‘ನಮ್ಮ ಮೆಟ್ರೋ ಸಂಚಾರದ ಸೌಲಭ್ಯ ದೊರೆಯಲಿದೆ. ಬೆಂಗಳೂರಿನ ನಮ್ಮ ಮೆಟ್ರೋ ಇಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಸಿಟಿ ಮಧ್ಯೆ ರೈಲು ಓಡಾಡಲಿದ್ದು, ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ೩೦ ನಿಮಿಷದಲ್ಲೇ ಪ್ರಯಾಣ ಮಾಡಬಹುದಾಗಿದೆ.

ದಕ್ಷಿಣ ಭಾರತದ ಮೊದಲ ಹಂತದ ಮೆಟ್ರೋವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟನೆ ಮಾಡಲಿದ್ದು, ನಾಳೆಯಿಂದ ಸಾರ್ವಜನಿಕರ ಓಡಾಟಕ್ಕೆ ಮೊದಲ ಹಂತದ ‘ನಮ್ಮ ಮೆಟ್ರೋ’ ಮಾರ್ಗ ಮುಕ್ತವಾಗಲಿದೆ.

 ಮೆಟ್ರೋ ರೈಲುಗಳ ಓಡಾಟದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಸೋಮವಾರದಿಂದ ಹೊಸ  ವೇಳಾಪಟ್ಟಿ ಅನ್ವಯವಾಗಲಿದೆ. ಈಗಿರುವ 6 ಗಂಟೆಯ ಬದಲು ಬೆಳಿಗ್ಗೆ 5 ಗಂಟೆಯಿಂಜ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ರಾತ್ರಿ 10 ಗಂಟೆ ಬದಲು 11 ಗಂಟೆಯವರೆಗೂ ಸಂಚಾರ ಇರಲಿದೆ. ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ಟರ್ಮಿನಲ್ ನಿಲ್ದಾಣಗಳ ಕಡೆಗೆ ರಾತ್ರಿ 11.25ಕ್ಕೆ ಕಡೆಯ ರೈಲು ಸಂಚರಿಸಲಿದೆ.

ನಾಗಸಂದ್ರ ಟರ್ಮಿನಲ್ ಗೆ ರಾತ್ರಿ 10.50ಕ್ಕೆ ಕೊನೆಯ ರೈಲು, ಯಲೇಚನಹಳ್ಳಿ ಟರ್ಮಿನಲ್ ಗೆ 11 ಗಂಟೆಗೆ. ಮೈಸೂರು ರಸ್ತೆಗೆ ೧11.05 ಕ್ಕೆ ಕೊನೆಯ ರೈಲು ಹೊರಡಲಿದೆ.  ಅದರಂತೆ ಭಾನುವಾರ ಒಂದು ದಿನ ಮಾತ್ರ ಬೆಳಿಗ್ಗೆ 5.30ಕ್ಕೆ ರೈಲುಗಳ ಓಡಾಟ ಆರಂಭವಾಗಲಿದೆ. ಇನ್ನು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ರೈಲುಗಳ ಓಡಾಟ ಇರಲಿದೆ.

ನಮ್ಮ ಮೆಟ್ರೋ ಎಲ್ಲಿಂದ ಎಲ್ಲಿಗೆ ಸಂಚಾರ ಮಾಡುತ್ತೆ?

ಬೈಯಪ್ಪನಹಳ್ಳಿ ಟು ನಾಯಂಡಹಳ್ಳಿ

ಯಲೇಚನಹಳ್ಳಿ ಟು ನಾಗಸಂದ್ರ

ಸುರಂಗ ಮಾರ್ಗದ ಒಟ್ಟು ದೂರ 8.8 ಕಿ.ಮೀ

ಮೆಟ್ರೋ ಸಂಚಾರದ ಒಟ್ಟು ದೂರ : 42.3 ಕಿ.ಮೀ

ಎತ್ತರಿಸಿದ ಮಾರ್ಗದ ಒಟ್ಟು ದೂರ 33.42 ಕಿ.ಮೀ

ಒಟ್ಟು ನಿಲ್ದಾಣ- ೪೦

Edited By

venki swamy

Reported By

Sudha Ujja

Comments