ನಾಗಸಂದ್ರ ಟು ಯಲಚೇನಹಳ್ಳಿ ೪೫ ನಿಮಿಷದಲ್ಲಿ ಪ್ರಯಾಣ

14 Jun 2017 3:28 PM | Bengaluru
1153 Report

ಬೆಂಗಳೂರು: ‘ನಮ್ಮ ಮೆಟ್ರೋ’ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗಗಳ ನಡುವೆ ಕೇವಲ ೪೫ ನಿಮಿಷದಲ್ಲೇ ಸಂಪರ್ಕಿಸಲಿದೆ. ಬಸ್ಸು, ಕಾರು ಅಥವಾ ದ್ವಿಚಕ್ರ ವಾಹನಗಳ ಮೂಲಕ ಕನಿಷ್ಠವಂದರೂ ೩ ಗಂಟೆ ಪ್ರಯಾಣ ಮಾಡಬೇಕು. ಆದರೆ ಮೆಟ್ರೋ ರೈಲಿನಲ್ಲಿ೪೫ ನಿಮಿಷಗಳಲ್ಲಿ ಪೂರೈಸಬಹುದು.

ಮೆಟ್ರೋ ಹಸಿರು ಮಾರ್ಗದಲ್ಲಿ ಪೂರ್ಣ ಪ್ರಮಾಣದ ಪ್ರಯೋಗಾರ್ಥ ಸಂಚಾರವು ಇಂದು ರಾತ್ರಿಯಿಂದ ಆರಂಭಗೊಂಡಿದ್ದು, ರೈಲ್ವೇ ಸುರಕ್ಷತಾ ಆಯುಕ್ತರು ಪ್ರಯಾಣಿಕರ ಸಂಚಾರಕ್ಕೆ ಸುರಕ್ಷತಾ ಪ್ರಮಾಣಪತ್ರ ನೀಡಿದ ಬಳಿಕ ೩ ಕೋಚ್ ಬೋಗಿಗಳ ಹಸಿರು ಬಣ್ಣದ ರೈಲು ಮಂಗಳವಾರ ದಿನವಿಡೀ ಹಸಿರು ಮಾರ್ಗದುದ್ದಕ್ಕೂ ಪ್ರಯೋಗಾರ್ಥಿ ಸಂಚಾರ ನಡೆಸಿದೆ.

ಈ ವೇಳೆ ನಮ್ಮ ಮೆಟ್ರೋ ರೈಲು ಈ ಅಂತರವನ್ನು ೪೫ ನಿಮಿಷಗಳಲ್ಲಿ ಕ್ರಮಿಸಿದೆ. ಮಹತ್ವದ ಅಂಶವೆಂದರೆ, ಈ ಅವಧಿಯಲ್ಲಿ ಮಾರ್ಗಮಧ್ಯದ ೨೫ ನಿಲ್ದಾಣಗಳ ನಿಲುಗಡೆ ಯನ್ನು ಸಹ ಸೇರಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ನಡೆದ ಈ ಸಂಚಾರದಿಂದ ಮೆಟ್ರೋ ಹಸಿರು ಮಾರ್ಗವು ಬೆಂಗಳೂರಿನ ಉತ್ತರ ಭಾಗದ ನಾಗಸಂದ್ರ ಮತ್ತು ದಕ್ಷಿಣ ಭಾಗದ ಯಲಚೇನಹಳ್ಳಿಗಳ ನಡುವಿನ ೨೪.೨೦ ಕಿಮೀ ದೂರವನ್ನು ೧ ಗಂಟೆಯೊಳಗೆ ಪೂರೈಸುವುದಾಗಿ ಖಾತರಿಯಾದಂತಾಗಿದೆ.

Edited By

venki swamy

Reported By

Sudha Ujja

Comments