'ಶಾ' ಗೂ ಮಹದಾಯಿಗೂ ಸಂಬಂಧ?

28 Nov 2017 8:08 PM | Politics
202 Report

ಬೆಂಗಳೂರು: ಉತ್ತರ ಕರ್ನಾಟಕದ ಭಾಗದಲ್ಲಿ ಬಹಳ ದಿನಗಳಿಂದಲೂ ಮಹದಾಯಿ ವಿವಾದ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನು ಲಾಭ ಪಡೆಯಲು ಹಲವು ಪಕ್ಷಗಳು ತುದಿಗಾಲಲ್ಲಿ ನಿಂತು ಕಾಯುತ್ತಿವೆ.

ಬೆಂಗಳೂರು: ಉತ್ತರ ಕರ್ನಾಟಕದ ಭಾಗದಲ್ಲಿ ಬಹಳ ದಿನಗಳಿಂದಲೂ ಮಹದಾಯಿ ವಿವಾದ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನು ಲಾಭ ಪಡೆಯಲು ಹಲವು ಪಕ್ಷಗಳು ತುದಿಗಾಲಲ್ಲಿ ನಿಂತು ಕಾಯುತ್ತಿವೆ. 2018ರ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ಬಿಜೆಪಿ ಮಹದಾಯಿ ವಿವಾದವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಅಮಿತ್ ಶಾ ಅವರ ಹೆಸರು ಕೇಳಿ ಬಂದಿದೆ. ಮಹಾದಾಯಿ ಬಗ್ಗೆ ಶಾ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರಂತೆ.

ಒಂದು ಕಡೆಗೆ ನೋಡಿದರೆ ಅಮಿತ್ ಶಾ ಅವರು ಮಹದಾಯಿ ವಿವಾದ ಬಗೆಹರಿಸಲು ಖುದ್ದು ಅವರು ಮುಂದಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅಮಿತ್ ಶಾ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆಗೆ ದೂರವಾಣಿ ಮೂಲಕ ಮಾತನಾಡಿ , ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಾತುಕತೆಗೆ ಒಪ್ಪಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಮಹಾರಾಷ್ಟ್ರ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ರೆ, ಇತ್ತ ಗೋವಾ ಸಿಎಂ ಮನೋಹರ್ ಪರಿಕ್ಕರ್ ಕರ್ನಾಟಕ್ಕೆ ನೀರು ಬಿಟ್ರೆ, ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುತ್ತದೆಂಬ ಆತಂಕ ವ್ಯಕ್ತಪಡಿಸ್ದದಾರಂತೆ.

ರಾಜ್ಯದಲ್ಲಿ ಚುನಾವಣೆ ಆಗಮಿಸುವುದರಿಂದ ಬಿಜೆಪಿ ಮಾತುಕತೆಯ ಮೂಲಕವೇ ಪರಿಹಾರದ ಪ್ರಯತ್ನಕ್ಕೆ ಕೈ ಹಾಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

Edited By

venki swamy

Reported By

Sudha Ujja

Comments