ನಿಮ್ಮ ಹೆಸರು R ಅಕ್ಷರದಿಂದ ಪ್ರಾರಂಭವಾಗುತ್ತಾ..? ಹಾಗಾದ್ರೆ ಇದನ್ನೊಮ್ಮೆ ಓದಿ…

30 Apr 2019 1:07 PM | General
561 Report

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಹೆಸರು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಕೆಲವರು ತಮ್ಮ ತಮ್ಮ ಮಕ್ಕಳಿಗೆ ಹೆಸರನ್ನು ತುಂಬಾ ಮಾಡ್ರನ್ ಆಗಿ ಇಡುತ್ತಾರೆ.. ಇನ್ನೂ ಕೆಲವರು ತಮ್ಮ ತಮ್ಮ ತಾತ ಅಜ್ಜಿಯ ನೆನಪಿಗೋಸ್ಕರ ಅವರವರ ಸಂಬಂಧಿಕರ ಹೆಸರನ್ನು ಇಡುತ್ತಾರೆ. ಇನ್ನೂ ಕೆಲವರು ಅವರ ಪ್ರೀತಿ ಪಾತ್ರ ಹೆಸರನ್ನು ಇಡುತ್ತಾರೆ.. ಕೆಲವೊಮ್ಮೆ ಆ ಹೆಸರು ನಿಮ್ಮ ನಿಮ್ಮ ಉನ್ನತಿಗೂ ಕೂಡ ಕಾರಣವಾಗಬಹುದು. ಆಕಸ್ಮಾತ್ ನಿಮ್ಮ ಹೆಸರು ಏನಾದ್ರೂ ಆರ್ ಅಕ್ಷರದಿಂದ ಪ್ರಾರಂಭವಾಗಿದ್ರೆ ಈ ಸುದ್ದಿಯನ್ನು ಒಮ್ಮೆ ಓದಿ.

ಆರ್ ಅಕ್ಷರದಿಂದ ಪ್ರಾರಂಭವಾಗುವವರು ತುಂಬಾ ಪಾಸಿಟಿವ್ ಆಗಿ ಇರುತ್ತಾರೆ.ಹಾಗೂ ಅಷ್ಟೆ ಶಾಂತತೆಯಿಂದ ಕೂಡಿರುತ್ತಾರಂತೆ.. ಇವರು ಆದಷ್ಟು ಮೀಡಿಯಾ, ಮಾಡೆಲಿಂಗ್  ಈ ರೀತಿಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗೂ ಬಹಳಷ್ಟು ಕಲಾತ್ಮಕ ರೀತಿಯಲ್ಲಿ ಅವರ ಯೋಚನೆ ಇರೋದರಿಂದ ಅವರಿಗೆ ಮೇಲೆ ತಿಳಿಸಿದ ಕ್ಷೇತ್ರಗಳು ಉತ್ತಮ ಎಂದು ಕೂಡ ಹೇಳಬಹದು... ತಮ್ಮ ಕೆರಿಯರ್ ಬಗ್ಗೆ ತಾವು ಈ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಗಮನ ಕೊಟ್ಟರೆ ನೀವು ಬಹಳಷ್ಟು ಎತ್ತರದ ಮಟ್ಟಕ್ಕೆ ಹೋಗುತ್ತೀರ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ…  ಇನ್ನು ಆರ್ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹಳಷ್ಟು ನಿಷ್ಟಾವಂತರೂ ಬುದ್ಧಿವಂತರು ಸಾಹನುಭೂತಿಗಳು ಅಂತನೇ ಹೇಳಬಹುದು.. ಇದನ್ನು ನೀವು ತಿಳಿದುಕೊಂಡು ಆರ್ ಅಕ್ಷರದಿಂದ ಶುರುವಾಗುವ ಸ್ನೇಹಿತರಿಗೂ ಕೂಡ ತಿಳಿಸಿ.

Edited By

Manjula M

Reported By

Manjula M

Comments