ನಿಮ್ಮ ಬಳಿ 2 ರೂ ನಾಣ್ಯ ಇದೆಯಾ..! ನೀವೂ ಲಕ್ಷಾಧಿಪತಿಳಾಗಬಹುದು..!! ಹೇಗೆ ಅಂತೀರಾ..!!!

28 Mar 2019 11:22 AM | General
1292 Report

ಇತ್ತಿಚಿಗೆ ಹಳೆಯ ವಸ್ತುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.. ಓಲ್ಡ್ ಇಸ್ ಗೋಲ್ಡ್ ಎನ್ನುವ ರೀತಿಯಲ್ಲಿ ಹಳೆಯ ಕಾಲದ ವಸ್ತುಗಳು ಚಾಲ್ತಿಯಲ್ಲಿವೆ.. ನಾವೆಲ್ಲರೂ ನಮ್ಮ ಬಾಲ್ಯದ ನೆನಪನ್ನು ನೆನಪಿಸಿಕೊಂಡರೆ ಒಂದಿಷ್ಟು ನೆನಪುಗಳು ನೆನಪಿಗೆ ಬರುತ್ತವೆ.. ನಾವು ಶಾಲೆಗೆ ಸಾಮಾನ್ಯಾವಾಗಿ ನಮ್ಮ ನಮ್ಮ ಪೋಷಕರು 1 ರೂ ಅಥವಾ 2 ರೂ ನಾಣ್ಯಗಳನ್ನು ಕೊಡುತ್ತಿದ್ದರು.. ಆಗಿನ ಕಾಲಕ್ಕೆ ಅವುಗಳಿಗೆ ಹೆಚ್ಚು ಮೌಲ್ಯವಿತ್ತು.. ಆದರೆ ಕಾಲ ಬದಲಾದಂತೆ ಎಲ್ಲವೂ ಕೂಡ ಬದಲಾಗುತ್ತಿದೆ.. ಇದೀಗ 2 ರೂ ಗೆ ಮೌಲ್ಯವೇ ಇಲ್ಲದಂತೆ ಆಗಿಬಿಟ್ಟಿದೆ.. ಆದರೆ ಈ 2 ರೂ ನಾಣ್ಯದಿಂದ ನೀವೂ ಲಕ್ಷಾಧಿಪತಿ ಆಗಬಹುದು ಹೇಗೆ ಅಂತೀರಾ.. ಮುಂದೆ ಓದಿ..

ಈಗಾಗಲೇ ಭಾರತದ ಹಳೆಯ ನಾಣ್ಯ ಹಾಗು ಅನೇಕ ಪುರಾತನ ವಸ್ತುಗಳಿಗೆ ಎಷ್ಟು ಬೇಡಿಕೆ ಇವೆ ಅಂತ ನಿಮಗೆಲ್ಲಾ ತಿಳಿದೇ ಇದೆ.. ಅದೇ ರೀತಿ ಹಳೆಯ ನಾಣ್ಯಗಳು ನಿಮ್ಮನ್ನ ಲಕ್ಷಾಧಿಪತಿ ಕೂಡ ಮಾಡಬಹುದು.. ವಾಸ್ತವವಾಗಿ ನೋಡುವುದಾದರೆ ಆಂಧ್ರಪ್ರದೇಶದ ಉದ್ಯಮಿ ಬಹಳಷ್ಟು ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ, ಈ ಉದ್ಯಮಿಯು ಹಳೆಯ ರಾಜ್ಯದ ನಾಣ್ಯಗಳನ್ನು ಸಂಗ್ರಹಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಅಂಗಡಿಗಳನ್ನು ವ್ಯವಸ್ಥೆ ಮಾಡಿ ಕೊಂಡಿದ್ದಾರೆ. ಅವರು ಲಕ್ಷಕ್ಕೂ ಹೆಚ್ಚು ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ ಅಷ್ಟೆ ಅಲ್ಲದೆ ದುಬಾರಿ ಬೆಲೆಗೆ ಈ ಹಳೆಯ ನಾಣ್ಯಗಳನ್ನು ಮಾರಾಟವನ್ನು ಸಹ ಮಾಡುತ್ತಾರೆ. ಆ ನಾಣ್ಯಗಳು ಮೂರು ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ಹೇಗೆ ಸಂಪಾದಿಸುತ್ತವೆ ಎಂಬ ಯೋಚನೆ ನಿಮಗೂ ಬರಬಹುದು…

ಎರಡು ರೂಪಾಯಿ ಈ ವಿಶಿಷ್ಟ ನಾಣ್ಯಗಳಿಗೆ ಈಗ ಬಹಳ ಜನಪ್ರಿಯವಾಗಿದ್ದು ಈಗ ಅವಕ್ಕೆ ಬಹಳ ಬೇಡಿಕೆ ಬಂದಿದೆ, ಇತ್ತೀಚಿಗೆ 2 ರೂಪಾಯಿ ಹಳೆಯ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಗಿತ್ತು. ಹಳೆಯ ವಸ್ತುಗಳ ಹರಾಜಿನಲ್ಲಿ ನಾಣ್ಯ ಖರೀದಿದಾರರು ಬರುತ್ತಾರೆ, ಆನ್ಲೈನ್ ನಲ್ಲಿ ಕೂಡ ಈ ಹಳೆ ನಾಣ್ಯಗಳ ಖರೀದಿ ನಡೆಯುತ್ತದೆ. OLX ಮತ್ತು Quickr ನಂತಹ ಉಚಿತ ವೆಬ್ ಸೈಟ್ ಗಳಲ್ಲೂ ಕೂಡ ಡೈಮಂಡ್ ಮಾರ್ಕ್ ಇರುವ ಎರಡು ರೂಪಾಯಿಗಳ ಹಳೆ ನಾಣ್ಯಗಳ ಖರೀದಿಯನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಿಮ್ಮ ಮನೆಯಲ್ಲಿ 2 ರೂ ನಾಣ್ಯ ಇದ್ದರೆ ಬೇಗ ತೆಗೆದಿಕೊಳ್ಳಿ… ನಿಮ್ಮ 2 ರೂ ನಾಣ್ಯದಿಂದ ನೀವೂ ಲಕ್ಷಾಧಿಪತಿ ಆದರೂ ಕೂಡ ಚಿಂತೆ ಮಾಡಬೇಕಿಲ್ಲ..

Edited By

Manjula M

Reported By

Manjula M

Comments