ಮಂಡ್ಯದಲ್ಲಿ ಸುಮಲತಾ ಅವರ ಗೆಲುವ ಖಚಿತ ಎಂದ ಸ್ಟಾರ್ ನಟ..!!

16 Mar 2019 2:49 PM | General
3442 Report

ಈಗಾಗಲೇ ಲೋಕ ಸಮರ ಎದುರಿಸಲು ಎಲ್ಲಾ ಪಕ್ಷದವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.. ಮೊನ್ನೆ ಮೊನ್ನೆಯಷ್ಟೆ ಮಂಡ್ಯದ ಅಭ್ಯರ್ಥಿಯಾಗಿ ನಿಖಿಲ್ ಹೆಸರನ್ನು ಘೋಷಣೆ ಮಾಡಲಾಗಿದೆ.. ಇದರಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲ್ಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.  ಬಿ.ಎಸ್ ಯಡಿಯೂರಪ್ಪನವರ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ ನಟ ಜಗ್ಗೇಶ್ ಇದೀಗ ಮಂಡ್ಯದ ಅಖಾಡದ ಬಗ್ಗೆ ಮಾತನಾಡಿದ್ದಾರೆ. ಹೈ ವೊಲ್ಟೇಜ್ ಕಣವಾಗಿರುವ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ .

ದೇವೇಗೌಡರು ಹಾಗು ಅವರ ಕೊಡುಗೆ ಅವಶ್ಯಕತೆ ಇನ್ನು ಕರ್ನಾಟಕ್ಕೆ ಇಲ್ಲ. ಅವರ ಇಷ್ಟು ವರ್ಷದ ಕೊಡುಗೆ ಹೇಳಿಕೊಳ್ಳುವಂತ್ತದ್ದೇನಲ್ಲ. ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರ ಗೆಲುವ ಖಚಿತ ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಜಗ್ಗೇಶ್ ಹಗುರವಾಗಿ ಮಾತನಾಡಿದ್ದರು.. ಈ ಹಿಂದೆಯು ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗಿತ್ತು….. 

ನೆನ್ನೆ ಮೊನ್ನೆ ರಾಜಕೀಯಕ್ಕೆ ಕಾಲಿಟ್ಟು ಹಣದ ಆಸೆಗೆ ಪಕ್ಷ ಬದಲಾಯಿಸಿದ ನಿಮಗೆ ಗೌಡರ ಬಗ್ಗೆ ಮಾತನಾಡುವ ಅರ್ಹತೆ ಕೂಡ ಇಲ್ಲ ಎಂದು ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು…ಈಗಲೂ ಆ ರೀತಿಯೇ ಪ್ರಸಂಗ ಎದುರಾಗುವ ರೀತಿ ಇದೆ.. ಮಂಡ್ಯದಲ್ಲಿ ಸುಮಲತ ಗೆಲುವು ಖಚಿತ ಎಂದು ಎಂದು ಜಗ್ಗೆಶ್ ತಿಳಿಸಿದ್ದಾರೆ.. ರಮ್ಯಾ ಬಗ್ಗೆಯೂ ಕೂಡ ನಟ ಜಗ್ಗೇಶ್ ಟ್ವೀಟ್ ಗಳನ್ನು ಮಾಡುತ್ತಲೆ ಇರುತ್ತಾರೆ.. ಒಟ್ಟಾರೆಯಾಗಿ ರಾಜಕೀಯದಲ್ಲಿ ಯಾರು ಯಾವಾಗ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ಕಷ್ಟವಾಗಿ ಬಿಟ್ಟಿರುತ್ತದೆ.

Edited By

Manjula M

Reported By

Manjula M

Comments