ಬೆತ್ತಲೆಯಾಗಿ ರಸ್ತೆಯಲ್ಲಿ ಈ ನಟಿ ಓಡಿದ್ದೇಕೆ..? ಪ್ರೀತಿಗಾಗಿ ಹೀಗೆ ಮಾಡಿದ್ಯಾಕೆ..!!!

22 Jan 2019 4:13 PM | General
440 Report

ಲವ್ ಇಸ್ ಬ್ಲೈಂಡ್ ಅಂತಾರೆ.. ಪ್ರೀತಿ ಸಂಪಾದನೆ ಮಾಡಬೇಕು ಅಂದರೆ ಏನೆಲ್ಲ ಮಾಡ್ತಾರೆ.. ಪ್ರೀತಿಗಾಗಿ ಜೀವ ಕಳೆದುಕೊಳ್ಳುತ್ತಾರೆ, ಕೈ ಕಾಲು ಕೂಯ್ದು ಕೊಂಡು ರಕ್ತದಲ್ಲಿ ಪತ್ರ ಬರೆಯುತ್ತಾರೆ… ಇನ್ನೂ ಏನೇನೋ ಮಾಡುತ್ತಾರೆ.. ಆದರೆ ಅವರಿಗೆ ಪ್ರೀತಿ ಸಂಪಾದನೆ ಅಷ್ಟೆ ಮುಖ್ಯ.. ಪ್ರೀತಿ ಸಂಪಾದನೆಗಾಗಿ ಜನ ಏನ್ ಬೇಕಾದ್ರೂ ಮಾಡಲು ಸಿದ್ದರಿರುತ್ತಾರೆ… 80ನೇ ದಶಕದಲ್ಲಿ ಬಾಲಿವುಡ್ ನಟಿ ಪರ್ವೀನ್ ಬಾಬಿ ಕೂಡ ಇದನ್ನೇ ಮಾಡಿದ್ದಳು. ಪರ್ವೀನ್ ಬಾಬಿ ಜೊತೆ ಅನೇಕ ಬಾಲಿವುಡ್ ನಟರ ಹೆಸರು ಥಳುಕು ಹಾಕಿಕೊಂಡಿತ್ತು. ಆದ್ರೆ ಪರ್ವೀನ್ ಬಾಬಿ, ನಿರ್ದೇಶಕ ಮಹೇಶ್ ಭಟ್ ರನ್ನು ಪ್ರೀತಿ ಮಾಡ್ತಿದ್ದರಂತೆ ಅನ್ನೋದು ಸುದ್ದಿ..

ಕಬೀರ್ ಬೇಡಿ ಜೊತೆ ಸಂಬಂಧ ಕಳಚಿ ಬಿದ್ದ ಮೇಲೆ ಪರ್ವೀನ್, ಮಹೇಶ್ ಭಟ್ ಹಿಂದೆ ಬಿದ್ದಿದ್ದರಂತೆ. ಮಹೇಶ್ ಭಟ್ ಗೆ ಮೊದಲೆ ಮದುವೆಯಾಗಿತ್ತು. ಆದ್ರೂ ಮಹೇಶ್ ಭಟ್ ಪ್ರೀತಿ ಪಡೆಯುವುದು ಪರ್ವೀನ್ ಉದ್ದೇಶವಾಗಿತ್ತಂತೆ.ಒಂದು ದಿನ ಯಾವುದೋ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಮಹೇಶ್ ಭಟ್ ಕೋಪಗೊಂಡು ಹೊರಟಿದ್ದಾರೆ. ವೇಳೆ ಮಹೇಶ್ ಭಟ್ ಹಿಂದೆ ಪರ್ವೀನ್ ಓಡಿದ್ದರಂತೆ. ನೈಟಿ ತೊಟ್ಟಿದ್ದ ಪರ್ವೀನ್ ಜೋರಾಗಿ ಓಡಿದ್ದರಿಂದ ನೈಟಿ ಬಿಚ್ಚಿದೆ. ಆದ್ರೆ ಅದು ಪರ್ವೀನ್ ಗೆ ಗೊತ್ತಾಗಲಿಲ್ಲವಂತೆ. ಮಹೇಶ್ ಭಟ್ ಪ್ರೀತಿಯಲ್ಲಿ ಸಿಕ್ಕಿಬಿದ್ದಿದ್ದ ಪರ್ವೀನ್ ಮಾನಸಿಕ ರೋಗಕ್ಕೆ ತುತ್ತಾಗಿದ್ದರು. 1983ರಲ್ಲಿ ಬಾಲಿವುಡ್ ಬಿಟ್ಟ ಪರ್ವೀನ್ ಕೆಲ ಸಮಯ ಬೆಂಗಳೂರಿನಲ್ಲಿದ್ದರು. ನಂತ್ರ ಅಮೆರಿಕಾಕ್ಕೆ ತೆರಳಿದ್ದರು. ಆದ್ರೆ ಮಾನಸಿಕ ರೋಗ ಗುಣವಾಗಿರಲಿಲ್ಲ. 1989ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದ ಪರ್ವೀನ್ 2005ರಲ್ಲಿ ಬಾರದ ಲೋಕಕ್ಕೆ ಪಯಣ ಬೆಳಸಿದ್ದರು.. ಒಟ್ಟಾರೆ ಪ್ರೀತಿಯಲ್ಲಿ ಸಿಲುಕಿದವರು ಮೈ ಮರೆಯುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ.

Edited By

Manjula M

Reported By

Manjula M

Comments