ಸೆಲ್ಫಿ ಕ್ರೇಜ್ ಜಾಸ್ತಿಯಾಗೋಕೆ ಕಾರಣ ಏನ್ ಗೊತ್ತಾ…?

05 Oct 2018 3:55 PM | General
266 Report

ಎಲ್ಲರಿಗೂ ಕೂಡ ಇತ್ತಿಚಿಗೆ ಸೆಲ್ಫಿ ಖಯಾಲಿಗೆ ಬಿದ್ದಿರುತ್ತಾರೆ. ಇತ್ತೀಚೆಗೆ, ಸ್ಮಾರ್ಟ್ ಫೋನ್ ಬಂದಿದ್ದೇ ಬಂದಿದ್ದು, ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಯ್ತು. ಕಂಡ ಕಂಡಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗ ಖಯಾಲಿಯಾಗಿಬಿಟ್ಟಿದೆ. ಹೀಗೆ ಸೆಲ್ಫಿ ಕ್ರೇಜ್ ಹೆಚ್ಚಾಗಲು ಕಾರಣವೇನು ಎಂಬುದನ್ನು ಅಧ್ಯಯನವೊಂದರ ಮೂಲಕ ಕಂಡುಕೊಳ್ಳಲಾಗಿದೆ. ಹೌದಾ..? ಹಾಗಾದ್ರೆ ಇದಕ್ಕೆ ಕಾರಣ ಏನು ಅಂತೀರಾ..?

ಸಾಮಾನ್ಯವಾಗಿ, ಸಿಕ್ಕಾಪಟ್ಟೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆಂದರೆ ಅವರು ಲವ್ವಲ್ಲಿ ಬಿದ್ದಿರಬಹುದು, ಇಲ್ಲವೇ, ತಮ್ಮನ್ನು ಎಲ್ಲರೂ ನೋಡಲಿ ಎಂಬ ಮನೋಭಾವ ಹೊಂದಿರಬಹುದು ಎಂಬುದು ಅಧ್ಯಯನ‍‍ವೊಂದರ ಸಂದರ್ಭದಲ್ಲಿ ತಿಳಿದುಬಂದಿದೆ. 18 ರಿಂದ 60 ವರ್ಷ ವಯಸ್ಸಿನವರನ್ನು ಇದಕ್ಕಾಗಿ ಸಂದರ್ಶಿಸಿದಾಗ ಕೆಲವರು ಸೆಲ್ಫಿಯಲ್ಲಿ ಚೆನ್ನಾಗಿ ಕಾಣಿಸುತ್ತೇವೆ ಎಂದು ಭಾವಿಸಿ ಹೆಚ್ಚೆಚ್ಚು ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಾರೆ. ಇದರಿಂದ ಕೆಲವೊಂದು ಸಂದರ್ಭಗಳಲ್ಲಿ ಸಂಬಂಧ ಹಾಳಾಗುವ ಸಾಧ್ಯತೆ ಕೂಡ ಇದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಈ ಹುಚ್ಚು ಸೆಲ್ಫಿಯಿಂದ ಅನೇಕರ ಜೀವ ಮತ್ತು ಜೀವನ ಎರಡೂ ಅಳಿವಿನಂಚಿಗೆ ಬಂದುಬಿಡುತ್ತಿದೆ. ಯಾವುದನ್ನ ಎಷ್ಟರ ಮಟ್ಟಿಗೆ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕೋ ಅಷ್ಟಿದ್ದರೆ ಸಾಕು ಅನ್ನಿಸುತ್ತದೆ.

Edited By

Manjula M

Reported By

Manjula M

Comments