ಸ್ಯಾಂಡಲ್ವುಡ್​​​ಗೆ ಬಂದ್ಲು ಕೋಟಿ ಆಸ್ತಿ ಒಡತಿ..! ಯಾರವಳು..?

23 May 2019 11:53 AM | Entertainment
1189 Report

ಪರಭಾಷೆಯಿಂದ ಬಂದು ಸ್ಯಾಂಡಲ್ ವುಡ್ ನಲ್ಲಿ ನೆಲೆಕಂಡುಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ.. ಆದರೆ ಯಜಮಾನ ನ ಬಸಣ್ಣಿ ಮಾತ್ರ ಪರಭಾಷೆಯಿಂದ ಬಂದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.. ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿದ ತಾನ್ಯ ಹೋಪ್ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿದ್ದಾರೆ… ಈಕೆ ಮಾದಕ ಚೆಲುವೆ, ಬಳುಕೋ ಮೈ ಮಾಟ…ಈಕೆ ಇದೀಗ ಪಡ್ಡೆಹುಡುಗರ ಹಾಟ್ ಫೇವರಿಟ್ ಆಗಿ ಬಿಟ್ಟಿದ್ದಾಳೆ.. ಈಕೆಯ ಹಿನ್ನಲೆಯನ್ನು ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ… ತಾನ್ಯಾ ಸಿನಿಮಾರಂಗಕ್ಕೆ ಹೊಸಬರು ಅಲ್ಲ… ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡ ಬ್ಯೂಟಿ ಈಕೆ.. ತಮಿಳು ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರ ಈಕೆದು ಹೊಸ ಎಂಟ್ರಿ. ಸದ್ಯ ತಾನ್ಯಾ ಮಹಾರಾಷ್ಟ್ರ ಮೂಲದ ಹುಡುಗಿ. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ..

2015ರ ಮಿಸ್‌ ಇಂಡಿಯಾ ಕೊನೆಯ ಸುತ್ತಿನವರೆಗೆ ಬಂದಿದ್ದ ಈ ಚೆಲುವೆ ಮಾಡಲಿಂಗ್‌ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.. ತಾನ್ಯ ಹೋಪ್ ಒಬ್ಬ ನಟಿ ಆಗುವುದಕ್ಕೂ ಮೊದಲು ಆಕೆ ಒಬ್ಬ ದೊಡ್ಡ ಬ್ಯುಸಿನೆಷನ್ ಮ್ಯಾನ್ ಮಗಳು. ಸಖತ್ ರಿಚ್​​ ಫ್ಯಾಮಿಲಿ. ಹೀಗಾಗಿ ಆಕೆ ಹಿಂದೆ ಮುಂದೆ ಗನ್​​ಮ್ಯಾನ್​, ಬಾಡಿಗಾರ್ಡ್ ದಂಡೇ ಇರುತ್ತೆ. ಬಹುಶ ಇಂಡಿಯನ್​ ಫಿಲ್ಟ್​ ಇಂಡಸ್ಡ್ರಿಯಲ್ಲಿ ಈ ರೆಂಜ್​ಗಿರೋ ಮತ್ತೊಬ್ಬ ನಾಯಕಿಯಿಲ್ಲ.ತಾನ್ಯಾ ಹೋಪ್​ ಹಿನ್ನಲೆ  ಕೇಳಿ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ದಂಗಾಗಿ ಬಿಟ್ಟಿದ್ದರಂತೆ . ತಾನ್ಯ ಹೋಪ್ ಅವರನ್ನು ನೋಡಿದ್ರೆ ಇಡೀ ಸ್ಯಾಂಡಲ್ ವುಡ್ ದಂಗಾಗುತ್ತಂತೆ..

ಇದೀಗ ಅಮರ್ ಸಿನಿಮಾದ ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಬಗ್ಗೆ ಮತ್ತೊಂದು ಸಂಗತಿಯನ್ನು ತಿಳಿಸಿದ್ದಾರೆ.. ಒಂದಿನ ಏರ್​ ಟಿಕೆಟ್​ ಬುಕ್​ ಮಾಡುವ ಸಲುವಾಗಿ ನಾಗಶೇಖರ್​ ತಾನ್ಯಾರ ಅಡ್ರೆಸ್​ ಕೇಳಿದರಂತೆ ನಿರ್ದೇಶಕರು. ಆಗ ಆ ನಟಿ ಪ್ಯಾನ್​ಕಾರ್ಡ್​ ಕೊಟ್ಟರಂತೆ  ಅದರಲ್ಲಿನ ಅಡ್ರೆಸ್​ ನೋಡಿದ ನಾಗಶೇಖರ್​ ಒಂದು ಕ್ಷಣ ಬೆರಗಾದ್ರಂತೆ. ಯಾಕಂದ್ರೆ ಅದರಲ್ಲಿ ತಾನ್ಯಾಹೋಪ್​​ ಪೂರ್ವಂಕರ​ ಅಂತ ಇತ್ತು. ಹೌದು ತಾನ್ಯಾ ದೇಶದ ಪ್ರತಿಷ್ಠಿತ ಡೆವೆಲಪರ್ ಪೂರ್ವಂಕರ ಮನೆತನದ ಹುಡುಗಿ. ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಿಲ್ಲಿ ಇಟ್ಟುಕೊಂಡು ಬೆಳೆದ ಹೆಣ್ಣುಮಗಳು. ಅದಕ್ಕಾಗಿಯೇ ಅವಳಿಗೆ ಅಷ್ಟೊಂದು ಸೆಕ್ಯೂರಿಟಿ ಎನ್ನುವುದು ಆಗ ನಿರ್ದೇಶಕ ನಾಗ ಶೇಖರ್ ಗೆ ತಿಳಿದಷೆ.. ತಾನ್ಯ ಹೋಪ್ ನಾಯಕಿಯಾಗಿ ಅಭಿನಯಿಸಿರುವ ಅಮರ್ ಸಿನಿಮಾ ಇದೇ ತಿಂಗಳು 31 ಕ್ಕೆ ಬಿಡುಗಡೆಯಾಗಲಿದೆ.

 

Edited By

Manjula M

Reported By

Manjula M

Comments