ಸೆಲ್ಫಿ ಕೇಳಲು ಬಂದ ಭೂಪ, ಮಾಡಿದ ಕೆಲಸ ನೋಡಿ ಗಾಬರಿಯಾಗಿ ನಿಂತ್ರಂತೆ ಈ ಸ್ಟಾರ್ ನಟ...?!!!

29 Apr 2019 10:37 AM | Entertainment
2388 Report

ಇತ್ತೀಚೆಗೆ ಸರಿಗಮಪ ಖ್ಯಾತಿಯ ಹನುಮಂತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಆತನ ಮೊಬೈಲ್ ಕಳವು ಆಗಿದ್ದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈಗ ಇದೇ ರೀತಿ ಇನ್ನೊಂದು ಘಟನೆ ನಡೆದಿದೆ. ಸ್ಯಾಂಡಲ್ ವುಡ್ ನ ಖ್ಯಾತ ನಟರೊಬ್ಬರು ಮೊಬೈಲ್ ಕಳೆದುಕೊಂಡು ಪರದಾಡಿರುವ ಘಟನೆ ವರದಿಯಾಗಿದೆ. ಸ್ಟಾರ್ ನಟನ ಬಳಿ ಸೆಲ್ಫಿ ಕೇಳಲು ಬಂದ ಆತ ಸೆಲ್ಫಿ ಜೊತೆಗೆ ಮಾಡಿದ ಕೆಲಸ ಏನ್ ಗೊತ್ತಾ..? ಅವನ ಕರಾಮತ್ತು ಕಂಡು ಕ್ಷಣ ಕಕ್ಕಾಬಿಕ್ಕಿಯಾದ್ರಂತೆ ಅಲ್ಲಿನವರು..ಆತ ಮಾಡಿದ ಕೆಲಸ ಏನ್ ಗೊತ್ತಾ..?

ನಟ ಶಶಿ ಕುಮಾರ್ ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ವೇಳೆ ಮೊಬೈಲ್ ಕಳೆದುಕೊಂಡು ಪರದಾಡಿದ್ದಾರೆ. ಮೊಬೈಲ್ ಸಿಗೋ ತನಕ ಶಶಿ ಕುಮಾರ ಜಾಗ ಬಿಟ್ಟು ಕದಲಿಲ್ಲವಂತೆ.  ನಗರದ ಐಯುಡಿಪಿ ಲೇ ಔಟ್ ನಲ್ಲಿ ಬೇಸಿಗೆ ಮಕ್ಕಳ ಶಿಬಿರ ಕಾರ್ಯಕ್ರಮ ಉದ್ಘಾಟನೆಗೆ ಶಶಿ ಕುಮಾರ್ ಆಗಮಿಸಿದ್ರು. ಕಾರ್ಯಕ್ರಮ ಮುಗಿದ ಬಳಿಕ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಅಪರಚಿತ ಯುವಕನೊಬ್ಬ ಅವರ ಮೊಬೈಲ್ ಎಗರಿಸಿದ್ದಾನೆ. ಇದರಿಂದ ಕಂಗಲಾದ ಶಶಿ ಕುಮಾರ್ ಮೊಬೈಲ್ ಗಾಗಿ ಅರ್ಧ ಗಂಟೆ ಕಾಲ ಪರದಾಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿನಿಸಿದ ಪೊಲೀಸರು ನಡೆದ ಘಟನೆಯನ್ನು ವಿಚಾರಿಸಿದ್ದಾರೆ.ಕಳವು ಮಾಡಿದ್ದ ದೃಶ್ಯ ಅಲ್ಲಿದ್ದ ವಿಡಿಯೋ ಸ್ಕ್ರೀನ್ನಲ್ಲಿ ಸೆರೆಯಾಗಿತ್ತು. ನಂತ್ರ ಆರೋಪಿ ಮೊಬೈಲ್ ನೀಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ರೀತಿ ಘಟನೆಗಳು ನಡೆಯುತ್ತಿರುತ್ತವೆ. ಬಹಳ ಹುಷಾರಾಗಿಯೂ ಇರಬೇಕಾಗುತ್ತದೆ ನಟ-ನಟಿಯರು.

Edited By

Kavya shree

Reported By

Kavya shree

Comments