ಟೆನ್ಷನ್'ನಲ್ಲಿ ನಟಿ ಪಿಗ್ಗಿ ಏನ್ ಮಾಡಿದ್ದಾರೆ ಗೊತ್ತಾ..? ಪ್ಲೀಸ್ ನನ್ನ ಫಾಲೋ ಮಾಡಬೇಡಿ ಎಂದ ವಿಡಿಯೋ ವೈರಲ್..?!!!

22 Mar 2019 5:19 PM | Entertainment
503 Report

ಖ್ಯಾತ ನಟಿ ಪಿಗ್ಗಿ ಅಲಿಯಾಸ್ ಪ್ರಿಯಾಂಕ ಚೋಪ್ರಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ತಾನು ಪ್ರೀತಿಸಿದವನನ್ನೇ ಕೈ ಹಿಡಿದಿರುವ ಪಿಗ್ಗಿಯ ವಿಡಿಯೋವೊಂದು ವೈರಲ್ ಆಗಿದೆ.  ಕೆಲವೊಮ್ಮೆ ಆಕೆ ಕೊಡೋ ಸ್ಟೇಟ್ ಮೆಂಟ್’ನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ  ಟ್ರೋಲ್ ಆಗ್ತಾ ಇರ್ತಾರೆ. ಈ ಬಾರಿ  ಪ್ರಿಯಾಂಕ ಪಾಸಿಟೀವ್ ಆಗಿಯೇ ಟ್ರೋಲ್  ಆಗಿದ್ದಾರೆ. ಪಿಗ್ಗಿ ಈ ರೀತಿಯೆಲ್ಲಾ  ಮಾಡ್ತಾರಾ ಅಂತಾ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.  ದೇಸಿ ಗರ್ಲ್ ಅಂತಾ ಫೇಮಸ್ ಆಗಿರುವ ಪಿಗ್ಗಿ ಮಾಡಿದ ಸಾಹಸದ ವಿಡಿಯೋವೊಂದು ವೈರಲ್ ಆಗಿದೆ.

 ಅದು ಏನು ಅಂತಿರಾ…? ಬೋಲ್ಡ್ ಬೇಬಿ ಪ್ರಿಯಾಂಕ ,ತಲೆಗೆ ವೈನ್ ಗ್ಲಾಸ್ ಹೊಡೆದುಕೊಂಡು ಬಾಟಲಿಯನ್ನು ಪೀಸ್ ಪೀಸ್ ಮಾಡಿದ್ದಾರೆ. ಅಂದಹಾಗೇ ಪ್ರಿಯಾಂಕ ಮಾಡಿರುವ ಕಸರತ್ತು ನೋಡಿ ಅಭಿಮಾನಿಗಳು ಬೋಲ್ಡ್ ಬ್ಯೂಟಿಗೆ ಫಿದಾ ಆಗಿದ್ದಾರೆ. ಜೊತೆಗೆ ಕಿವಿಮಾತು ಕೂಡ ಹೇಳಿದ್ದಾರೆ. ಆಕೆ ಹೀಗೆಲ್ಲಾ ಮಾಡಿಕೊಂಡಿದ್ದು ಯಾಕೆ ಗೊತ್ತಾ..?ಪಿಗ್ಗಿ ಈ ರೀತಿ ಮಾಡಿಕೊಳ್ಳಲು ಕೆಲಸದ ಒತ್ತಡ ಕಾರಣವಂತೆ. ಆಕೆ ಈ ಪರಿ ಟೆನ್ಷನ್ ಯಾಕೆ ಮಾಡ್ಕೊಳ್ತಳೋ ಗೊತ್ತಿಲ್ಲ ಎಂದಿದ್ದಾರೆ ಆಕೆಯ ಫಾಲೋಯರ್ಸ್.

ವೈನ್ ಬಾಟಲಿಯಲ್ಲಿದ್ದ ವೈನ್ ನ ಕೊನೆಯ ಗುಟುಕು ಕುಡಿದು, ಪಿಗ್ಗಿ ಅದೇ ಗ್ಲಾಸ್’ನ್ನು ತಲೆಯ ಮೇಲೆ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ಪಿಗ್ಗಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಿಗ್ಗಿ ಫ್ಯಾನ್ಸ್ ಕಿವಿಮಾತು ಹೇಳಿದ್ದಾರೆ. ಇಷ್ಟೊಂದು  ಕೆಲಸದ ಒತ್ತಡ ಒಳ್ಳೆದಲ್ಲ. ಬ್ರೇಕ್ ತೆಗೆದುಕೊಳ್ಳಿ, ಬಾಲಿವುಡ್ ಗೆ ವಾಪಸ್ ಬಂದ್ ಬಿಡಿ ಎಂದು ಕಮೆಂಟ್ ಮಾಡಿದ್ದಾರೆ. ಅಂದಹಾಗೇ ಪಿಗ್ಗಿ ಈ ವಿಡಿಯೋ ಹಾಕಿ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ. ನಾನು ಹತಾಶೆಯಿಂದ ಹೀಗೆ ಮಾಡುತ್ತಿದ್ದೇನೆ. ನೀವ್  ಯಾರು ಹೀಗೆ ಪ್ರಯತ್ನಿಸ ಬೇಡಿ ಎಂದು ತಮ್ಮ ಇನ್ಸ್’ಟ್ರಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೇ ಹಾಲಿವುಡ್'ನಲ್ಲಿ ಟಿವಿ ಸೀರಿಸ್ ನಲ್ಲಿ ಪಾಲ್ಗೊಂಡಿರುವ ಆಕೆ ಅಲ್ಲಿ-ಇಲ್ಲಿ ಓಡಾಡುತ್ತಿದ್ದಾಳೆ. ಈ ಟೆನ್ಷನ್ ನಡುವೆ ಹೀಗ್ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Edited By

Kavya shree

Reported By

Kavya shree

Comments