ಮಾಜಿ –ಹಾಲಿ ಲವ್ವರ್ ಗಳ ಮಧ್ಯೆ ವಿಲನ್ ಆದ್ರು ನಟಿ ರಾಗಿಣಿ : ಅಂದು ನಡೆದಿದ್ದೇನು ಗೊತ್ತಾ..?!!!

19 Mar 2019 10:31 AM | Entertainment
290 Report

ಅಂದಹಾಗೇ ನಟಿ ರಾಗಿಣಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾರೆ. ಗ್ಲಾಮರ್ ಬ್ಯೂಟಿಯಿಂದ ಬಹಳ ಹೆಸರು ಮಾಡಿದ ನಟಿ ರಾಗಿಣಿ ಅಷ್ಟೇ ಗಾಸಿಪ್’ಗೂ ಒಳಗಾಗಿದ್ದರು. ಗಾಂಧಿನಗರದ ಕೆಲ ಸ್ಟಾರ್ ನಟರ, ನಿರ್ದೇಶಕರ ಹೆಸರುಗಳ ಜೊತೆ ರಾಗಿಣಿ ಹೆಸರು ಜೋರಾಗಿ ತಳುಕು ಹಾಕಿಕೊಂಡಿತ್ತು. ಸದ್ಯ ರಾಗಿಣಿ ದ್ವಿವೇದಿ ಇತ್ತೀಚೆಗೆ ಲವ್ವರ್’ಗಳ ಕಾದಾಟದಲ್ಲಿ ಸುದ್ದಿಯಾಗಿದ್ದಾರೆ.

ಹಾಲಿ ಮತ್ತು ಮಾಜಿ ಬಾಯ್ ಫ್ರೆಂಡ್ಗಳ ಹೊಡೆದಾಟಕ್ಕೆ ನಟಿ ರಾಗಿಣಿಯೇ ವಿಲನ್ ಆಗಿದ್ದಾರೆ. ಅಂದಹಾಗೇ ಆ ಹೋಟೆಲ್ ನಲ್ಲಿ ನಡೆದಿದ್ದೇನು ಎಂಬ ಸತ್ಯವನ್ನು ರಾಗಿಣಿ ಮಾಜಿ ಗೆಳೆಯ ಶಿವ ಪ್ರಕಾಶ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ಅಲ್ಲಿ ಬಡಿದಾಟಕ್ಕೆ ಮುಖ್ಯ ಕಾರಣ ಆ ರಾಗಿಣಿಯೇ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಸದ್ಯ ಪೊಲೀಸರ ಮುಂದೆ ಶಿವಪ್ರಕಾಶ್ ಹೇಳಿಕೆ ಕೊಟ್ಟಿರುವ ಹಿನ್ನಲೆ ರಾಗಿಣಿ ಮುಜುಗರಕ್ಕೆ ಒಳಗಾಗುವಂತೆ ಆಗಿದೆ.  ತುಪ್ಪದ ಬೆಡಗಿಗೆ ಇದೀಗ ಈ ವಿಚಾರ ಬಿಸಿತುಪ್ಪವಾಗಿ ಪರಿಣಮಿಸಿದೆ. ಅಷ್ಟುಕ್ಕೂ ಬಡಿದಾಟಕ್ಕೆ ಕಾರಣವಾಗಿದ್ದು ಯಾರು ಅನ್ನೋದನ್ನ ಮಾಜಿ ಪ್ರಿಯಕರ ಶಿವಪ್ರಸಾದ್ ಪೊಲೀಸರ ಮುಂದೆ ರಿವೀಲ್ ಮಾಡಿರುವ ಹೇಳಿಕೆ ತುಪ್ಪದ ಹುಡ್ಗಿಗೆ ಮತ್ತಷ್ಟು ತಲೆನೋವು ತರಿಸಿದೆ.

ಹೋಟೆಲ್ ನಲ್ಲಿ ಮಾಜಿ ಮತ್ತು ಹಾಲಿ ಬಾಯ್ ಫ್ರೆಂಡ್ಗಳ ಹೊಡೆದಾಟದ ನಂತರ ಹಾಲಿ ಪ್ರಿಯಕರ ರವಿ ಎಂಬುವವರು ರಾಗಿಣಿಯ ಹಳೆ ಲವ್ವರ್ ಶಿವ ಪ್ರಕಾಶ್ ವಿರುದ್ಧ ಹಲ್ಲೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದರು. ಸದ್ಯ ಶಿವಪ್ರಕಾಶ್ ರನ್ನು ತನಿಖೆಗೆ ಒಳಪಡಿಸಿದಾಗ ಹೋಟೆಲ್ ನಲ್ಲಿ ನಡೆದಿದ್ದನ್ನು ರಿವೀಲ್ ಮಾಡಿದ್ದಾರೆ. ಬಿಯರ್ ಬಾಟಲ್ ನಿಂದ ಹಲ್ಲೆ ಮಾಡುವಂತೆ ಪ್ರಚೋದನೆ ಮಾಡಿದ್ದು ರಾಗಿಣಿ ಮತ್ತು ರವಿ. ಪಕ್ಕದ ಟೆಬಲ್ ನಲ್ಲಿ ಕೂತಿದ್ದನ್ನ ನೋಡಿ ಬಿಯರ್ ಬಾಟಲ್ ಹಿಡಿದು ರಾಗಿಣಿ ಮತ್ತು ರವಿ ಚಿಯರ್ಸ್.. ಚಿಯರ್ಸ್ ಎಂದು ಕಿಚಾಯಿಸಿದ್ದಾಕ್ಕೆ ಹಲ್ಲೆ ಮಾಡಲು ಯತ್ನಿಸಿದೆ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ. ಸದ್ಯ ಈ ಘಟನೆ ಆಗುತ್ತಿದ್ದಂತೇ ರಾಗಿಣಿ ಎಲ್ಲಿ ಹೋಗಿದ್ದಾರೆಂಬ ಮಾಹಿತಿ ಇಲ್ಲ. ಎಲ್ಲಿಯೂ ಕೂಡ ಘಟನೆ ಕುರಿತಾಗಿ ರಾಗಿಣಿ ಕಡೆಯಿಂದ ಯಾವ ಪ್ರತಿಕ್ರಿಯೆ ಇಲ್ಲ. ರಾಗಿಣಿಗೆ ಪೊಲೀಸರು ನೋಟಿಸ್ ನೀಡುವ ಸಾದ್ಯತೆಗಳಿವೆ. ಘಟನೆ ನಡೆದ ಬಳಿಕ ಯಾರ ಕೈಗೂ ಹಾಗೂ ಸಂಪರ್ಕಕ್ಕೂ ನಟಿ ರಾಗಿಣಿ ಸಿಗುತ್ತಿಲ್ಲ. ನೋಟೀಸ್ ನೀಡಿದ್ರೆ ರಾಗಿಣಿ ಎಲ್ಲಿಯೇ ಇದ್ರೂ ವಿಚಾರಣೆಗೆ  ಹಾಜರಾಗಲೇ ಬೇಕು.

Edited By

Kavya shree

Reported By

Kavya shree

Comments