ದಕ್ಷಿಣ ಕೊರಿಯಾದಲ್ಲಿ ಬೆಳಗಿದ ನಮ್ಮೂರ ಪ್ರತಿಭೆಗಳು

09 Sep 2019 7:52 AM |
665 Report

ದಕ್ಷಿಣ ಕೊರಿಯಾದ ಯೋಸೋ ನಗರದಲ್ಲಿ ಸೆಪ್ಟಂಬರ್ 4 ರಿಂದ 8 ರ ವರೆಗೆ ನೆಡೆದ 9 ನೇ ಏಷಿಯನ್ ಯೋಗ ಚಾಂಪಿಯನ್ ಶಿಪ್- 2019 ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ನಮ್ಮ ಊರಿನ ಪ್ರತಿಭೆಗಳಾದ ಜಾಹ್ನವಿ ಬೆಳ್ಳಿ ಮತ್ತು ಕಂಚಿನ ಪದಕದೊಂದಿಗೆ ಎರಡು ಪದಕ ಪಡೆದರೆ ವರ್ಷಿಣಿ ಐದನೇ ಸ್ಥಾನ ಪಡೆದು ಕೊಂಡಿದ್ದಾರೆ. 8 ರಿಂದ 11 ವರ್ಷದ ವಿಭಾಗದಲ್ಲಿ ಸ್ಪರ್ಧಿಸಿದ್ದ ರವಿಕುಮಾರ್ ಮತ್ತು ರತ್ನ ದಂಪತಿಗಳ ಪುತ್ರಿ ಎಂ.ಆರ್. ಜಾಹ್ನವಿ ನಗರದ ಎಂ.ಎಸ್.ವಿ. ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದು, ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾಳೆ, ಏಷಿಯನ್ ಯೋಗ ಚಾಂಪಿಯನ್ ಶಿಪ್- 2019 ರ ಯೋಗಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ರಿಧಮಿಕ್ ಯೋಗಾದಲ್ಲಿ ಕಂಚಿನ ಪದಕ ಪಡೆದಿದ್ದಾಳೆ.

ವೆಂಕಟೇಶ್ ಮತ್ತು ಪುಷ್ಪ ದಂಪತಿಗಳ ಮಗಳಾದ ಪಿ.ವಿ ವರ್ಷಿಣಿ 11 ರಿಂದ 14 ವರ್ಷದ ವಿಭಾಗದ ಯೋಗಾ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದು ಕೊಂಡಿದ್ದಾಳೆ. ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಷಿಣಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಹಲವಾರು ಪದಕಗಳನ್ನು ಪಡೆದಿದ್ದಾಳೆ, ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ ಐದು ವರ್ಷಗಳಿಂದ ಯೋಗ ತರಬೇತಿ ಪಡೆಯುತ್ತಿದ್ದಾಳೆ.

ಸಾಧನೆಗೈದ ಯೋಗ ಪಟುಗಳಿಗೆ ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ನಟರಾಜ್, ಖಜಾಂಚಿ ಶ್ಯಾಮಸುಂದರ್, ಅಮೆಚೂರ್ ಯೋಗ ಸಂಸ್ಥೆಯ ಕಾರ್ಯದರ್ಶಿ ಎಂ,ಜಿ,ಅಮರನಾಥ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮಿನಾರಾಯಣ್, ಕಾರ್ಯದರ್ಶಿ ಆರೂಡಿ ರಮೇಶ್ ಅಭಿನಂಧಿಸಿದ್ದಾರೆ.

Edited By

Ramesh

Reported By

Ramesh

Comments