ಮಳೆನೀರು ಸಂಗ್ರಹಿಸಿ ಕುಡಿಯದೇ ಹೋದರೆ ಆರೋಗ್ಯ ಸುಧಾರಣೇ ಸಾಧ್ಯವೇ ಇಲ್ಲ...






ನಗರದ ಸೋಮೇಶ್ವರ ಬಡಾವಣೆಯ ಸಿದ್ಧಿಪ್ರಿಯ ರಸ್ತೆಯಲ್ಲಿರುವ ಗದಗಯ್ಯ ಹಿರೇಮಠ ಅವರ ಮನೆಯಲ್ಲಿ ಶನಿವಾರ ಮೇಲ್ಚಾವಣಿ ಮಳೆ ನೀರು ಸಂಗ್ರಹ ತೊಟ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಾ ನೀರಿನ ಸಮಸ್ಯೆಗೆ ನಗರ, ಗ್ರಾಮಾಂತರ ಎನ್ನುವ ವೆತ್ಯಾಸವೇ ಇಲ್ಲವಾಗಿದೆ, ನಗರಸಭೆಯಾಗಲಿ, ಗ್ರಾಮ ಪಂಚಾಯತಿಯವರಾಗಲಿ ಯಾರಿಂದಲೂ ಕೂಡ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವೇ ಇಲ್ಲ, ಮುಂದಿನ ದಿನಗಳಲ್ಲಿ ಹಣ ಕೂಡಿಟ್ಟಂತೆ ಮನೆಯಲ್ಲಿ ನೀರು ಸಂಗ್ರಹ ಇದ್ದರೆ ಮಾತ್ರ ನೆಮ್ಮದಿಯ ಜೀವನ ನೆಡೆಸಬಹುದು ಎಂದು ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.
ಗದಗಯ್ಯ ಹಿರೇಮಠ ಮಳೆ ನೀರು ಸಂಗ್ರಹದ ಕುರಿತು ಮಾಹಿತಿ ನೀಡುತ್ತಾ, ಕಳೆದ ಮೇ ತಿಂಗಳಲ್ಲಿ ಜಿಲ್ಲಾಧಿಕಾರಿ ಕರೀಗೌಡ ಅವರ ಮುಂದೆ 26 ವಾಕಿಂಗ್ ಬ್ಯಾಚ್ ಸ್ನೇಹಿತರು ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳುವೆವು ಎಂದು ಪ್ರತಿಜ್ಞೆ ಮಾಡಿದ್ದೆವು, ಅದರಂತೆ ಮಧುಗಿರಿ ತಾಲ್ಲೂಕಿನ ಪುರವರ ಗ್ರಾಮಕ್ಕೆ ವಾಕಿಂಗ್ ಬ್ಯಾಚ್ ಸದಸ್ಯರನ್ನು ಜಿಲ್ಲಾಧಿಕಾರಿಗಳು ಕರೆದುಕೊಂಡು ಹೋಗಿ ಕುಡಿಯಲು ಮಳೆ ನೀರು ಸಂಗ್ರಹ ಸೌಲಭ್ಯ ಹೊಂದಿರುವ ಕುಟುಂಬ ಸದಸ್ಯರನ್ನು ಭೇಟಿ ಮಾಡಿಸಿದ್ದರು, ಇದರಿಂದ ಸ್ಪೂರ್ತಿ ಪಡೆದು ಕಾರು ನಿಲ್ಲಿಸುವ ಸ್ಥಳದಲ್ಲಿ 30 ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ನಿರ್ಮಿಸಿರುವುದಾಗಿ ತಿಳಿಸಿದರು. ಮುಖಂಡರಾದ ವಡ್ಡರಹಳ್ಳಿ ರವಿ, ಪದ್ಮನಾಭ್, ಗೋಪಾಲ್, ನಿರಂಜನ್, ಗಂಗಮುತ್ತಯ್ಯ, ಹನುಮಂತಯ್ಯ, ರೇಣುಕ ಹಿರೇಮಠ್, ಪ್ರಿಯಾಂಕ ಹಿರೇಮಠ್ ಮತ್ತಿತರರು ಹಾಜರಿದ್ದರು.
Comments