ಸಸಿಕಾಂತ್ ಸೆಂಥಿಲ್ ದೇಶಕ್ಕೆ ಮಾಡಿದ ಅವಮಾನ...

08 Sep 2019 9:00 AM |
431 Report

ಸಸಿಕಾಂತ್ ಸೆಂಥಿಲ್ ರ ರಾಜೀನಾಮೆಯ ಹಿಂದಿದೆ ಅಸಲಿ ಸತ್ಯ! ಮೋದಿ ಸರ್ಕಾರವನ್ನೇ ಟಾರ್ಗೆಟ್ ಮಾಡಿರೋದ್ಯಾಕೆ ?! ದಕ್ಷಿಣ ಕನ್ನಡ ಡಿಸಿಯಾಗಿ 2017 ಅಕ್ಟೋಬರ್ ನಿಂದ ಸೇವೆ ಸಲ್ಲಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ರ ದಿಢೀರ್ ರಾಜೀನಾಮೆ ಎಲ್ಲರಲ್ಲೂ ದಿಗ್ಭ್ರಮೆಗೊಳಿಸಿದ್ದಂತೂ ಸತ್ಯ! ತನ್ನ ರಾಜೀನಾಮೆ ಪತ್ರದಲ್ಲಿ ನಾನು ಯಾವುದೇ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುತ್ತಿಲ್ಲ ಇದು ನನ್ನ ವಯಕ್ತಿಕ ಕಾರಣ ಎಂದವರು ರಾಜೀನಾಮೆಗೆ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳೇ ಕಾರಣ ಎಂದರು. ಕೇಂದ್ರದ ನಡೆ ಬೇಸರ ತರಿಸಿತ್ತಂತೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿದ್ದು ಸಹಿಸಲಾಗುತ್ತಿಲ್ಲವಂತೆ, ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸುವ ಹೇಳಿಕೆ, ತ್ರಿವಳಿ ತಲಾಖ್ ರದ್ಧತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇಂತಹ ಮೋದಿ ಸರ್ಕಾರದ ನಡೆ ಇವರಿಗೆ ಬೇಸರ ತಂದು ಇವರು ರಾಜೀನಾಮೆ ನೀಡಿದೆ ಎಂದು ಸ್ವತಃ ಅವರ ಬಾಯಿಯಿಂದನೇ ಬಂದಿದೆ.

ಇಡೀ ದೇಶವಲ್ಲದೆ ಇಡೀ ವಿಶ್ವವೇ ಮೋದಿಜೀಯ ಇಂತಹ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದರೆ ಸಸಿಕಾಂತ್ ಸೆಂಥಿಲ್ ಮಾತ್ರ ಮೋದಿ ಸರ್ಕಾರವನ್ನು ಟಾರ್ಗೆಟ್ ಮಾಡಿಯೇ ಈ ರೀತಿಯಾಗಿ ರಾಜೀನಾಮೆಗೆ ಕಾರಣ ನೀಡಿರುವುದರ ಹಿಂದೆ ಅನುಮಾನದ ಮೇಲೆ ಅನುಮಾನ ಕಾಡುತ್ತಿದೆ.

ಸಸಿಕಾಂತ್ ಸೆಂಥಿಲ್‍ರ ರಾಜೀನಾಮೆಯ ಹಿಂದಿದೆ ಅಸಲಿ ಸತ್ಯ!

ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿ ಮೋದಿ ಸರ್ಕಾರವನ್ನು ಟೀಕಿಸಿರುವುದರ ಹಿಂದೆ ಅಸಲಿ ಸತ್ಯ ಬೇರೇನೇ ಇದೆ. ಇವರು 2009ರ ಬ್ಯಾಚ್‍ನಲ್ಲಿ ಪಾಸ್ ಆಗಿ ಡಿಸಿಯಾಗಿ ಆಯ್ಕೆಯಾದವರು.  ಆ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್.  ಚಿದಂಬರಂ ಗೃಹಮಂತ್ರಿಯಾಗಿದ್ದ ಸಮಯದಲ್ಲೇ ಇವರು ಡಿಸಿಯಾಗಿ ಆಯ್ಕೆಯಾದವರು . ಇದೀಗ ಐಎನ್‍ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಪಿ ಚಿದಂಬರಂರನ್ನು ಬಂಧಿಸಿ ಜೈಲಿಗಟ್ಟುತ್ತಿದ್ದಂತೇ ಇತ್ತ ದಕ್ಷಿಣ ಕನ್ನಡ ಡಿಸಿ ಹಠಾತ್ತನೇ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.  ದಕ್ಷಿಣ ಕನ್ನಡ ಡಿಸಿ ಸಸಿಕಾಂತ್ ಸೆಂಥಿಲ್ ನಾವು ಕಂಡಂತೆ ಆತ ಒಬ್ಬ ಪ್ರಾಮಾಣಿಕ ಅಧಿಕಾರಿಯಲ್ಲ! ಬದಲಾಗಿ ಈತ ಒಬ್ಬ ಭ್ರಷ್ಟ ಅಧಿಕಾರಿಯೂ ಹೌದು… 2016ರಲ್ಲಿ ಈತನ ಹೆಂಡತಿಯ ಹೆಸರಲ್ಲಿ ಅನೇಕ ಆಸ್ತಿ ಪತ್ತೆಯಾಗಿದ್ದು ಅಲ್ಲದೆ ಈತನ ಕುಟುಂಬದ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಇದೆ ಎಂಬುವುದು ಪತ್ತೆಯಾಗಿದೆ.  ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಆಪ್ತ ಕೂಡಾ ಹೌದು… ಮೋದಿಜೀ ಅಧಿಕಾರವೇರುತ್ತಲೇ ಭ್ರಷ್ಟ ಅಧಿಕಾರಿಗಳನ್ನು ಎಡೆಮುರಿ ಕಟ್ಟುತ್ತನೇ ಬಂದಿದ್ದಾರೆ.  ಒಬ್ಬೊಬ್ಬರ ಆಟ ಈಗ ಬಯಲಾಗುತ್ತಿದ್ದನ್ನು ಕಂಡು ಇದೀಗ ರಾಜೀನಾಮೆ ನೀಡುವ ನಾಟಕವಾಡಿ ಅದರಲ್ಲೂ ಮೋದಿಜೀಯನ್ನೇ ಟಾರ್ಗೆಟ್ ಮಾಡಿ ರಾಜೀನಾಮೆ ನೀಡುತ್ತಿರುದನ್ನು ಗಮನಿಸಿದರೆ ಸಸಿಕಾಂತ್ ಸೆಂಥಿಲ್ ತನ್ನ ಗುಟ್ಟು ಎಲ್ಲಿ ರಟ್ಟಾಗುತ್ತೋ ಎಂಬ ಭಯದಿಂದ ರಾಜೀನಾಮೆ ನೀಡಿರುವುದು ಅಷ್ಟೇ ಸತ್ಯ!

ಮೋದಿ ಸರ್ಕಾರದ ಐತಿಹಾಸಿಕ ತೀರ್ಮಾನಗಳನ್ನು ಸಹಿಸಲಾಗುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದೇನೆ ಎನ್ನುವ ಅವರ ಹೇಳಿಕೆ ನಿಜಕ್ಕೂ ವಿಷಾದನೀಯ ಹಾಗೂ ಖಂಡನೀಯವಾಗಿದೆ.  ಜನರ ನಂಬಿಕೆಗಳಿಗೆ ಪಾತ್ರವಾಗಿರುವ ಹಾಗೂ ದೇಶದ ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಜಿಲ್ಲಾಧಿಕಾರಿ ಹೀಗೆ ದೇಶದ ಬಗ್ಗೆ ಮತ್ತು ಮೋದಿ ಸರ್ಕಾರದ ನಿಯಮಾವಳಿ ಹಾಗೂ ನೂತನ ಕಾನೂನು ಚೌಕಟ್ಟುಗಳ ಕುರಿತು ಸಾರ್ವತ್ರಿಕ ಪ್ರತಿಕ್ರಿಯೆ ನೀಡಿರುವುದು ರಾಷ್ಟ್ರಕ್ಕೆ ಮಾಡಿದ ಅವಮಾನ.  ಸುಖಾಸುಮ್ಮನೆ ಮೋದಿ ಸರ್ಕಾರದ ಬಗ್ಗೆಯೇ ಟೀಕಿಸಿ ರಾಜೀನಾಮೆ ನೀಡಿರುವುದರ ಹಿಂದೆ ಅಸಲಿ ಸತ್ಯ ಬೇರೆನೇ ಇದೆ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‍ರವರ ರಾಜೀನಾಮೆ ಹಿಂದೆ ಆಂತರಿಕಕವಾಗಿ ತನಿಖೆಯನ್ನು ಮಾಡಿ ಅಸಲಿ ಸತ್ಯ ಬಯಲಿಗೆಳೆಯಬೇಕು… ಇಂತಹವರಿಗೆ ತಕ್ಕ ಪಾಠ ಕಲಿಸಬೇಕು.  ದೇಶದ ಮಹಾನ್ ನಾಯಕ ತಂದ ಐತಿಹಾಸಿಕ ತೀರ್ಮಾನವನ್ನೇ ಮುಂದಿಟ್ಟುಕೊಂಡು ರಾಜೀನಾಮೆ ನೀಡಿದ ಜಿಲ್ಲಾಧಿಕಾರಿಯ ಅಸಲಿ ಸತ್ಯ ಬಯಲಿಗೆಳೆಯಬೇಕೆಂಬುವುದೇ ಎಲ್ಲರ ಆಶಯ.

From Face book

Edited By

Ramesh

Reported By

Ramesh

Comments