ಪ್ರತಿಯೊಂದು ಸಮಸ್ಯೆಗಳಿಗೂ ಮೋದಿ ಮತ್ತು GST ಕಾರಣ......

27 Aug 2019 5:49 AM |
495 Report

ಪಾರ್ಲೇಜಿ-ಗುಡ್ಡೇ, ನೋಕಿಯ - ಸ್ಯಾಮ್ಸಂಗ್, ಬಿಎಸ್ ಎನ್ ಎಲ್ - ಏರ್ಟೆಲ್, ಜಿಯೊ, ಹಿಂದೂಸ್ತಾನ್ ಮೋಟಾರ್ಸ್ - ಮಾರುತಿ, ಹುಂಡೈ, ಎಚ್.ಎಮ್.ಟಿ - ಟೈಟಾನ್ ಇದು ಸುಮ್ನೆ ಉದಾಹರಣೆಗೆ ಹಾಕಿದ್ದು, ಈ ತರ ಅನೇಕ ಕಂಪನಿಗಳು ಕಾಲಕ್ಕೆ ತಕ್ಕಂತೆ ಬದಲಾಗದೆ ಮತ್ತೊಂದು ಕಂಪನಿಗಳ ಹೊಡೆತಕ್ಕೆ ಸಿಲುಕಿ ಇತಿಹಾಸದ ಪುಟ ಸೇರಿದ್ದಾವೆ, ಕೆಲವೊಂದು ಇನ್ನೇನು ಮುಚ್ಚುವ ಪರಿಸ್ಥಿತಿಗೆ ಬಂದಿವೆ, ಎಲ್ಲದಕ್ಕೂ GST ಅನ್ನೋದು ಮೂರ್ಖತನ, ಯಾಕಂದ್ರೆ GST ಬರುವ ಮುನ್ನವೇ HMT ವಾಚ್ ಕಂಪನಿ ಅವನತಿಯ ಹಾದಿ ಹಿಡಿದಿತ್ತು, ಇನ್ನು BSNL ಕಥೆ ಹಳೇ ಸರ್ಕಾರ ಇದ್ದಾಗ್ಲಿಂದಲೂ ಇದೇ ಸಮಸ್ಯೆ, ಐದತ್ ರುಪಾಯಿಗೆ ರುಚಿಯಾದ ಗುಡ್ಡೇ ಬಿಸ್ಕತ್ ಸಿಗುವಾಗ ಪಾರ್ಲೇಜಿ ಕಡೆ ಯಾರ್ ಹೋಗ್ತಾರೆ, ಕೊನೆ ಪಕ್ಷ ಪಾರ್ಲೇಜಿ ಗುಡ್ಡೇ ರೀತಿಯ ಬಿಸ್ಕತ್ ತಯಾರಿಸುವ ಪ್ರಯತ್ನವನ್ನ ಮಾಡಿದ್ದಿದ್ರೆ ಇವತ್ ಈ ಪರಿಸ್ಥಿತಿ ಬರ್ತಿರ್ಲಿಲ್ಲ.

ಒಂದು ಕಾಲದಲ್ಲಿ ಭಾರತ ಸೇರಿದಂತೆ ವಿಶ್ವ ಮೊಬೈಲ್ ಮಾರುಕಟ್ಟೆಯನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ ನೋಕಿಯ ಬರು ಬರುತ್ತಾ ಆಂಡ್ರಾಯ್ಡ್ ಸಿಸ್ಟಮ್ ಅಳವಡಿಸಿಕೊಳ್ಳದೆ ತನ್ನ ಸಮಾದಿಗೆ ತಾನೆ ಗುಂಡಿ ತೋಡ್ಕೊಂಡ್ ಬಂತು, ಸ್ಯಾಮ್ಸಂಗ್ ಸೇರಿದಂತೆ ಅನೇಕ ಕಂಪನಿಗಳು ಹೊಸತನದ ಗೂಗಲ್ ಆಂಡ್ರಾಯ್ಡ್ ಪರಿಚಯಿಸಿ ಮಾರುಕಟ್ಟೆಯಲ್ಲಿ ಹಿಡಿತ ಸಾದಿಸಿದ್ವು, ನೋಕಿಯ ನೌಕರರು ಮನೆ ದಾರಿ ಹಿಡ್ಕೊಂಡು ಹೋದ್ರು, ಹಂಗಾದ್ರೆ ತಪ್ಪು ಯಾರದ್ದು ಸರ್ಕಾರದ್ದ ಅಥ್ವಾ GST ದ?

ಯಾವುದೇ ಒಂದು ಕಂಪನಿ ಮುಚ್ಚುವ ಪರಿಸ್ಥಿತಿಗೆ ಬಂದರೆ ಅದಕ್ಕೆ ಕಾರಣ ಸರ್ಕಾರದ ತೆರಿಗೆ ಪದ್ಧತಿ ಪ್ರಮುಖ ಕಾರಣ ಆಗೋದಿಲ್ಲ, ಹಾಗೊಂದ್ ವೇಳೆ ಸರ್ಕಾರದ ತೆರಿಗೆ ಪದ್ಧತಿಯೇ ಪ್ರಮುಖ ಕಾರಣ ಅನ್ನೋದಾದ್ರೆ ಎಲ್ಲಾ ಕಂಪನಿಗಳು ಮುಚ್ಬೇಕಿತ್ತು, ಕೆಲವು ಮಾತ್ರ ಮುಚ್ಚುತ್ತವೆ ಅಂದ್ರೆ ಆ ಕಂಪನಿಗಳು ಮತ್ತಿನ್ನೇನೊ ಸಮಸ್ಯೆಗಳನ್ನ ಎದುರಿಸುತ್ತಿರುತ್ತವೆ, ಪ್ರತಿಯೊಂದಕ್ಕೂ ಮೋದಿ ಹೆಸರು ಬಿಟ್ರೆ ಬೇರೇನೂ ಸಿಗೋದಿಲ್ಲ ಅನ್ಸುತ್ತೆ ಕೆಲವರಿಗೆ, ವಿದೇಶಿ ಬಂಡವಾಳ ಹರಿಯುವಂತೆ ಮಾಡಿದ್ರೆ ಮೋದಿ ಸ್ವದೇಶಿ ಕಂಪನಿಗಳನ್ನ ತುಳೀತವ್ರೆ ಅಂತ ಗಂಟ್ಲು ಹರ್ಕೋತಾರೆ, ಆಕಸ್ಮಾತ್ ವಿದೇಶಿ ಕಂಪನಿಗಳು ಇಲ್ಲಿಂದ ವಾಪಾಸ್ ಹೋದ್ರೆ ಮೋದಿಯ ಆರ್ಥಿಕ ನೀತಿಗಳು ದೇಶವನ್ನು ಅಳಿವಿನಂಚಿಗೆ ಕೊಂಡೊಯ್ಯುತ್ತಿವೆ ಅಂತ ಬೊಬ್ಬೆ ಹೊಡಿತಾರೆ, ಒಟ್ನಲ್ಲಿ ದೇಶದಲ್ಲಿ ಏನೇ ಸಮಸ್ಯೆಯಾದ್ರು ಅದನ್ನ ಮೋದಿ ತಲೆಗೆ ಕಟ್ಟೋದು ಅಷ್ಟೇ.

ಒಂದು ಮೊಬೈಲ್ ಸಂಗೀತಾ ಶೋ ರೂಮ್ನಲ್ಲಿ 20,000 ರುಪಾಯಿ ಇದ್ರೆ ಆ ಮೊಬೈಲ್ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ನಲ್ಲಿ ಒಂದೆರಡ್ ಸಾವ್ರ ಕಮ್ಮಿ ಸಿಗುತ್ತೆ, ತರಕಾರಿ ಎರಡ್ ರುಪಾಯಿ ಕಮ್ಮಿ ಸಿಗುತ್ತೆ ಅಂದ್ರೆ ಪಕ್ಕದ್ ಅಂಗಡಿಗೆ ಹೋಗೋ ನಾವು ಇನ್ನು ಮೊಬೈಲ್ ಎರಡ್ ಸಾವ್ರ ಕಮ್ಮಿ ಸಿಗುತ್ತೆ ಅಂದ್ರೆ ಸಹಜವಾಗಿ ಆನ್ ಲೈನ್ ಖರೀದಿ ಮಾಡ್ತೀವಿ, ಆಮೇಲೆ ಬಂದು ಈ ದೈತ್ಯ ಕಂಪನಿಗಳಿಂದ ಸಣ್ಣ ಸಣ್ಣ ಉದ್ದಿಮೆದಾರರು ನಷ್ಟ ಅನುಭವಿಸುತ್ತಿದ್ದಾರೆ ಅಂತ ನಾವೇ ಫೇಸ್ಬುಕ್ ಪೋಸ್ಟ್ ಹಾಕ್ತೀವಿ. ಹಂಗಂತ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ನಲ್ಲಿ ವಸ್ತುಗಳನ್ನ ಖರೀದಿ ಮಾಡೋದ್ ತಪ್ಪು ಅಂತ ಹೇಳ್ತಿಲ್ಲ, ಮನುಷ್ಯನ ಗುಣವೇ ಹಾಗೆ ಒಂದು ವಸ್ತು ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತೊ ಅದನ್ನು ಅಲ್ಲೇ ಕೊಂಡುಕೊಳ್ಳಲು ಬಯಸುತ್ತಾನೆ, ನಾನು ಸಹ ಚಿಕ್ಕವನಿದ್ದಾಗ ಪಾರ್ಲೇಜಿ ತಿಂತಿದ್ದೆ ಈಗ ಗುಡ್ಡೇ ಅಂದ್ರೆ ತುಂಬಾ ಇಷ್ಟ, ಅದು ನನ್ನ ವೈಯಕ್ತಿಕ ಆಯ್ಕೆ ಬಿಡಿ, 

ಹಂಗಾದ್ರೆ ಇಲ್ಲಿ ತಪ್ಪು ಯಾರದ್ದು? ಹೊಸ ರೀತಿಯ ಬಿಸ್ಕತ್ ತಯಾರಿಸಿದ ಬ್ರಿಟಾನಿಯಾ ಗುಡ್ಡೆಯದ್ದ ಅಥ್ವಾ ರುಚಿ ಚನಾಗಿದೆ ಅಂತ ಗುಡ್ಡೇಯನ್ನು ತಿನ್ನುತ್ತಿರುವ ನಮ್ಮಂತ ಸಾಮಾನ್ಯರದ್ದ, ಅಥ್ವಾ ಹೊಸ ರುಚಿಯನ್ನು ಪರಿಚಯಿಸದೇ ದಶಕಗಳ ಕಾಲ ಅದೇ ಉತ್ಪನ್ನವನ್ನ ಜನರಿಗೆ ತಿನಿಸಲು ಮುಂದಾಗಿ ಈಗ ಮುಚ್ಚುವ ಹಂತಕ್ಕೆ ಬಂದಿರುವ ಪಾರ್ಲೇ ಕಂಪನಿಯದ್ದ? ಯಾವುದೇ ಒಂದು ಕಂಪನಿ ಅಷ್ಟು ಸುಲಭವಾಗಿ ಮುಚ್ಚೋದಿಲ್ಲ, ಅದಕ್ಕೆ ಆದಂತ ನೂರಾರು ಕಾರಣಗಳು ಇರುತ್ತವೆ, ಎಲ್ಲದಕ್ಕೂ ಮೋದಿ ಕಾರಣ ಅಂದ್ರೆ ಏನರ್ಥ ? ಕೊನೆಯದಾಗಿ ಈಗಲೂ ನಮ್ಮನೆ ನಾಯಿ ಪಾರ್ಲೆಜಿನೇ ಇಷ್ಟ ಪಡೋದು

ಬರಹ-Srinivas KB.

Edited By

Ramesh

Reported By

Ramesh

Comments