250 ಮಂದಿ ಶ್ರೀ ಕೃಷ್ಣ ರಾಧೆಯರ ವೇಷಧಾರಿಗಳ ಕಲರವ.......

24 Aug 2019 5:39 AM |
998 Report

ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 8 ವರ್ಷದೊಳಗಿನ ಮಕ್ಕಳಿಗೆ ಶ್ರೀ ಕೃಷ್ಣ ರಾಧೆಯರ ವೇಷಧಾರಿಗಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಆರು ತಿಂಗಳ ಮುಗುವಿನಿಂದ ಎಂಟು ವರ್ಷದ ವರೆಗಿನ 250 ಮಕ್ಕಳು ಭಾಗವಹಿಸಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ವತಿಯಿಂದ ದಿನಾಂಕ 22-8-2019 ರ ಗುರುವಾರ ನಗರದ ಕನ್ನಡ ಜಾಗೃತ ಭವನದಲ್ಲಿ ಬೆಳಿಗ್ಗೆ 11 ಘಂಟೆಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯ ಬ್ಯಾಂಕ್ ವ್ಯವಸ್ಥಾಪಕ ಸನಾತನ್ ಕುಮಾರ್ ನೆರವೇರಿಸಿದರು. ಸಂಜೆ ನಾಲ್ಕು ಘಂಟೆಗೆ ನೆಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅದ್ಯಕ್ಷ ಸುರೇಶ್ ವಹಿಸಿದ್ದರು, ಸರ್ಕಲ್ಇನ್ಸ್ಪೆಕ್ಟರ್ ರಾಘವ ಎಸ್ ಗೌಡ, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಟಿಎಪಿಎಂಸಿ ಅಧ್ಯಕ್ಷ ಆನಂದ್, ಕೆಪಿಎ ರಾಜ್ಯಾಧ್ಯಕ್ಷ ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದವರು-

ಶ್ರೀ ಕೃಷ್ಣ ವೇಷಧಾರಿಯಾಗಿ ಸ್ಪರ್ಧಿಸಿದ್ದ ಚರಿತ ಮೊದಲನೆ ಬಹುಮಾನ, ಮನಸ್ವಿನಿ ಎರಡನೆ ಬಹುಮಾನ ಹಾಗೂ ವಿದ್ವತ್ ಮೂರನೇ ಬಹುಮಾನ ಪಡೆದರೆ, ರಾಧೆ ವೇಷಧಾರಿಯಾಗಿ ಸ್ಪರ್ದಿಸಿದ್ದ ಬಿ.ಸಿ.ಪರಿಣಿತ ಮೊದಲ ಬಹುಮಾನ, ಸಾಯಿಸೃಷ್ಠಿ ಎರಡನೇ ಬಹುಮಾನ ಹಾಗೂ ಸೌಜನ್ಯ ಮೂರನೆ ಬಹುಮಾನ ಪಡೆದರು.  ವತ್ಸಲ ಸತ್ಯನಾರಾಯಣ, ಕೆ.ಸಂಪತ್ ಕುಮಾರ್, ಹೆಚ್.ಆರ್.ಗದಗಯ್ಯ ತೀರ್ಪುಗಾರರಾಗಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಗೌರವ ಅಧ್ಯಕ್ಷ ಬಸವರಾಜಯ್ಯ, ಉಪಾಧ್ಯಕ್ಷರಾದ ಬಿ.ಎನ್.ಉಮಾಶಂಕರ್,ಬಿ.ಎಸ್.ನಿರಂಜನ್, ಪ್ರಧಾನ ಕಾರ್ಯದರ್ಶಿ ಜಿ.ಅರುಣ್ ಕುಮಾರ್, ಖಜಾಂಚಿ ಸಿ.ಎಚ್.ಗುರುಶಂಕರ್, ಸಲಹೆಗಾರರಾದ ಎಚ್.ಎಸ್.ನಾಗೇಶ್, ಕೆ.ಸಂಪತ್ ಕುಮಾರ್, ಸಹಕಾರ್ಯದರ್ಶಿಗಳಾದ ಪಿ.ರಾಜು,ಶಿವಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಕೆ.ಸಿ.ಲೋಕೇಶ್, ಆನಂದ್, ಕಾರ್ಯನಿರ್ವಹಣಾಕಾರಿ ಎಸ್.ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿಪತ್ರ, ಬಹುಮಾನ ಹಾಗೂ ಮಗುವಿನ ಛಾಯಾಚಿತ್ರ ನೀಡಲಾಯಿತು.

 

Edited By

Ramesh

Reported By

Ramesh

Comments