ಮಕ್ಕಳ ಕೈಯ್ಯಲ್ಲಿ ಅರಳಿದ ಮಣ್ಣಿನ ಗಣಪ.....ಪರಿಸರ ಸ್ನೇಹಿ ಗಣೇಶನ ತಯಾರಿ ಕಾರ್ಯಾಗಾರ

19 Aug 2019 6:50 AM |
481 Report

ದಿನಾಂಕ 18-8-2019 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾನ್ಹ 3 ರವರೆಗೆ ಸುಚೇತನಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಮತ್ತು ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದೊಡ್ಡಬಳ್ಳಾಪುರ ನಗರದ ಹೊರ ವಲಯದಲ್ಲಿರುವ ಅನಿ ಬೆಸೆಂಟ್ ಪಾರ್ಕ್ ನಲ್ಲಿ [ಸ್ಕೌಟ್ ಕ್ಯಾಂಪ್] ನಲ್ಲಿ ಮನೆ ಮನೆಗೂ ಮಣ್ಣಿನ ಗಣಪ ಎಂಬ ಅಭಿಯಾನದ ಅಡಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ತಯಾರಿಸುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು, ಮಾಗಡಿಯ ಗಣಪನ ಮೂರ್ತಿ ತಯಾರಕರಾದ ಬಸವರಾಜು ಕಾರ್ಯಾಗಾರವನ್ನು ನೆಡೆಸಿಕೊಟ್ಟರು. ಆರರಿಂದ ಅರವತ್ತರ ವಯೋಮಾನದ ಉತ್ಸಾಹಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಕೈಯ್ಯಾರೆ ಗಣಪ ಮೂರ್ತಿಯನ್ನು ತಯಾರಿಸಿದರು.

ದೊಡ್ಡಬಳ್ಳಾಪುರದ ಪ್ರಗತಿಪರ ರೈತ ಶಿವಪ್ಪ ಸುಚೇತನಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು, ಇಂದಿನ ದಿನಗಳಲ್ಲಿ ಪರಿಸರವನ್ನು ಹಾಳುಮಾಡಲೆಂದೇ ಹಲವಾರು ಯೋಜನೆಗಳು ಬರುತ್ತಿವೆ, ಮುಂದಿನ ಭವಿಷ್ಯತ್ತು ಕ್ರೂರವಾಗಿದೆ, ಪರಿಸರವನ್ನು ಹೀಗೆಯೇ ಹಾಳುಮಾಡುತ್ತಿದ್ದರೆ ಹಸಿರು ಮಾಯವಾಗಿ, ಜಲಕ್ಷಾಮ ಉಂಟಾಗುತ್ತದೆ, ಹಾಗಾಗದಂತೆ ತಡೆಯಲು ನಾವುಗಳು ಸಾಧ್ಯವಾದಷ್ಟು ಪರಿಸರಕ್ಕೆ ಹಾನಿಯಾಗದಂತೆ ನಮ್ಮ ಜೀವನಶೈಲಿ ರೂಪಿಸಿಕೊಳ್ಳ ಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಚೇತನಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಮಂಜುನಾಥ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ವರದಿಗಾರ ನಟರಾಜ್, ದೊಡ್ಡಬಳ್ಳಾಪುರ ವಾರ್ತೆ ವರದಿಗಾರ ಆರೂಡಿ ರಮೇಶ್ ಆಗಮಿಸಿದ್ದರು, ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಸುಚೇತನಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುನಿಲ್ ಗೌಡ ಭವಿಷ್ಯ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎಲ್.ಎನ್.ನಾಗರಾಜ್ ಹಾಜರಿದ್ದರು. ಬೆಂಗಳೂರು ರೋಟರಾಕ್ಟ್ ಕ್ಲಬ್ ಆಫ್ ವಿದ್ಯಾರಣ್ಯಪುರ ಸಂಸ್ಥೆ, ಜಾನ್ಸಿ ನೆಟ್ವರ್ಕಿಂಗ್ ಅಂಡ್ ಕಮ್ಯೂನಿಕೇಷನ್, ಜಿ.ಕೆ. ಹೈಸ್ಕೂಲ್, ಪ್ರಜಾವಾಣಿ ಮತ್ತು ಸಿವಿಕ್ ನ್ಯೂಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.  ಗಣಪನ ಮೂರ್ತಿ ಮಾಡುವ ಮಣ್ಣು ಹಾಗೂ ಮಧ್ಯಾನ್ಹದ ಊಟದ ವ್ಯವಸ್ಥೆಯನ್ನೂ ಆಯೋಜಕರೇ ಒದಗಿಸಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಸುಚೇತನಾ ಮತ್ತು ಪರಿಸರ ಸಂಸ್ಥೆಯ ಎಲ್ಲಾ ಸದಸ್ಯರೂ ಹಾಜರಿದ್ದರು.

Edited By

Ramesh

Reported By

Ramesh

Comments