73 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಮೆಡಿಕಲ್ ಕ್ಯಾಂಪ್







ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ವತಿಯಿಂದ ಇಂದು 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ದೇವರಾಜ ಅರಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಕೆ.ಆರ್. ರವಿಕಿರಣ್, ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಎನ್. ನಾಗರಾಜ್, ಕಾರ್ಯದರ್ಶಿ ಸುಧಾಕರ್ ಮತ್ತು ಕರ್ನಾಟಕ ವಿದ್ಯಾರ್ಥಿ ವೇದಿಕೆಯ ರಾಜ್ಯಾಧ್ಯಕ್ಷ ಡಾ. ಎಸ್ ಶಿವಶಂಕರ, ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಗಂಗೇಶ್ವರ ಮತ್ತು ಹಿರಿಯ ಗುರುಗಳಾದ ಸಿದ್ದಲಿಂಗಯ್ಯ, ಸಂಘದ ರಾಜ್ಯಾಧ್ಯಕ್ಷೆ ರಾಜೇಶ್ವರಿ, ಖಜಾಂಚಿ ಗೌರಮ್ಮ, ನಾಗವೇಣಿ, ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಗಿರೀಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಸಿಹಿ ಹಂಚಿಕೆ ಮತ್ತು ಮೆಡಿಕಲ್ ಕ್ಯಾಂಪ್ ನೆಡೆಯಿತು, ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಅಭಿನಂದಿಸಲಾಯಿತು. ಸಂಘದ ಎಲ್ಲಾ ಪದಾಧಿಕಾರಿಗಳು, ಶಾಲಾ ಮಕ್ಕಳು, ನಾಗರೀಕರು ಭಾಗವಹಿಸಿದ್ದರು.
Comments