ಛಾಯಾಗ್ರಹಣ ಕಲಿಸಿದ ಗುರುವಿಗೆ ಗುರು ವಂದನೆ.....

13 Aug 2019 9:34 AM |
617 Report

ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ವತಿಯಿಂದ ದಿನಾಂಕ 12-8-2019 ರ ಸೋಮವಾರ ನಗರದ ಒಕ್ಕಲಿಗರ ಭವನದಲ್ಲಿ ಛಾಯಾಗ್ರಹಣ ವಿಧ್ಯೆ ಕಲಿಸಿದಂತಹ ಗುರುಗಳಿಗೆ ಗುರುವಂದನೆ ಹಾಗೂ ಛಾಯಾಗ್ರಾಹಕ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಫೋಟೋ ತೆಗೆಯುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಟಿ.ವೆಂಕಟರಮಣಯ್ಯ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ, ಉಪ ಆರಕ್ಷಕ ನಿರೀಕ್ಷಕ ಕೆ.ವೆಂಕಟೇಶ್, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷ ಬಿ.ಎನ್.ರವಿಕುಮಾರ್ ಭಾಗವಹಿಸಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಬಸವರಾಜಯ್ಯ, ಉಪಾಧ್ಯಕ್ಷರಾದ ಬಿ.ಎನ್.ಉಮಾಶಂಕರ್ ಮತ್ತು ಬಿ.ಎನ್.ನಿರಂಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೆಂಕಟರಮಣಯ್ಯ ನಮ್ಮ ಊರಿನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಛಾಯಾಗ್ರಹಕರಿರುವುದು ಹೆಮ್ಮೆಯ ಸಂಗತಿ, ಡಿಜಿಟಲ್ ತಂತ್ರಜ್ಞಾನದಿಂದಾಗಿ ಛಾಯಾಗ್ರಹಕರಿಗೆ ಎಷ್ಟು ಅನುಕೂಲವಾಗಿದೆಯೋ ಅಷ್ಟೇ ತೊಂದರೆಗಳೂ ಇದೆ, ನೀವುಗಳ ಎದುರಿಸುತ್ತಿರುವ ಸಮಸ್ಯೆಗಳ ವಿಚಾರ ಗಮನದಲ್ಲಿದೆ, ಅವುಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಕಡೆ ಗಮನ ಹರಿಸಲಾಗುವುದು ಎಂದರು.   ಎಸ್.ಎಸ್.ಎಲ್.ಸಿ. ಪಿಯೂ.ಸಿ. ಮತ್ತು ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿದಂತ ಕುಮಾರಿ.ಮಾನಸ, ಎಂ.ಜಿ.ಚೈತ್ರ, ಪಲ್ಲವಿ, ಹೆಚ್.ವೈಷ್ಣವಿ, ಜಿ.ಎಸ್.ಅನನ್ಯ, ಆರ್.ಲೋಹಿತ್, ಎಸ್.ಯು.ಸುಬ್ರಮಣ್ಯ ಮತ್ತು ಕೆ.ಎಲ್, ಮೋನಿಕ [ರಾಷ್ಟ್ರ ಮಟ್ಟದ ಯೋಗ ಪಟು] ಛಾಯಾಗ್ರಹಕ ಕುಟುಂಬದ ಮಕ್ಕಳಿಗೆ ಶಾಸಕರು ಪ್ರತಿಭಾ ಪುರಸ್ಕಾರ ನೀಡಿದರು.

ಒಬ್ಬ ವ್ಯಕ್ತಿ ಛಾಯಾಗ್ರಹಣ ವೃತ್ತಿಗೆ ಬರಬೇಕೆಂದರೆ ಗುರುವಿನ ಆಶೀರ್ವಾದ, ಮಾರ್ಗದರ್ಶನ ಇರಲೇಬೇಕು, ಛಾಯಾಗ್ರಹಣ ಕಲಿಸಿದ ಗುರುಗಳಾದಂತಹ ವಿರೂಪಾಕ್ಷ, ಹೆಚ್.ಎ.ನಾಗೇಶ್, ಕೆ.ಆರ್.ಆಂಜನೇಯುಲು, ಎಸ್.ಎನ್.ಉಮಾಶಂಕರ್, ಎಸ್.ಎಲ್.ಎನ್.ಗೋಪಿ, ಬಸವರಾಜಯ್ಯ, ಶಿವರಾಂ, ರಘುಪತಿ, ಸೇರಿದಂತೆ ಹಲವಾರು ಗುರುಗಳಿಗೆ ಶಿಷ್ಯರಿಂದ ಗುರುವಂದನೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನೆಡೆಯಿತು. ಕೃಷ್ಣ ಬಲಬದ್ರಿ ತಂಡದಿಂದ ಗೀತಗಾಯನ ಮತ್ತು ಛಾಯಾಗ್ರಾಹಕ ಕುಟುಂಬದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಿತು.

ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅರುಣ್ ಕುಮಾರ್, ಖಜಾಂಚಿ ಸಿ.ಎಸ್. ಗುರುಶಂಕರ್, ಸಹ ಕಾರ್ಯದರ್ಶಿಗಳಾದ ಪಿ.ರಾಜು, ಶಿವಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಕೆ.ಸಿ.ಲೋಕೇಶ್, ಆನಂದ್, ಕಾರ್ಯ ನಿರ್ವಹಣಾಧಿಕಾರಿ ಎಸ್.ರವಿಕುಮಾರ್, ಕ್ರೀಡಾ ನಿರ್ವಾಹಕ ಜಿ.ರಾಜು ನಿರ್ದೇಶಕರುಗಳಾದ ಎ.ಎಸ್.ರಾಮು, ಗೋಪಿ, ರಘು, ರಾಮಲಿಂಗಮೂರ್ತಿ, ಮಂಜುನಾಥ್, ಎಸ್.ಮುರಳಿ, ಶಿವಪ್ರಸಾದ್, ಮುರಳಿ, ಸುನಿಲ್, ಬೀಡಿಕೆರೆ ಕೃಷ್ಣ, ಮನು, ಜಗ್ಗೇಶ್, ರಾಮು, ಸಲಹೆಗಾರ ಕೆ.ಸಂಪತ್ ಕುಮಾರ್ ಹಾಜರಿದ್ದರು, ಗೌರವ ಸಲಹೆಗಾರ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. 

Edited By

Ramesh

Reported By

Ramesh

Comments