81 ನೇ ವರ್ಷದ ನಂದಿ ಗಿರಿ ಪ್ರದಕ್ಷಿಣೆ ಆರು ಸಾವಿರಕ್ಕೂ ಹೆಚ್ಚು ಭಕ್ತರಿಂದ

29 Jul 2019 5:08 PM |
785 Report

ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠ ಮಹಾ ಸಂಸ್ಥಾನಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಮತ್ತು ಪುಷ್ಪಾಂಡಜ ಮಹರ್ಷಿ ಆಶ್ರಮ, ತಪಸೀಹಳ್ಳಿಯ ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ತಹಸೀಲ್ದಾರ್ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳು, ಶ್ರೀ ಯೋಗಾ ಮತ್ತು ಭೋಗಾ ನಂದೀಶ್ವರಸ್ವಾಮಿ ದೇವಾಲಯದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಸಮಿತಿ ಹಾಗೂ ದೊಡ್ಡಬಳ್ಳಾಪುರದ ನಂದಿ ಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ ದಿನಾಂಕ 29-7-2019 ರ ಸೋಮವಾರ ಬೆಳಿಗ್ಗೆ 6-30 ಕ್ಕೆ 81 ನೇ ವರ್ಷದ ನಂದಿಗಿರಿ ಪ್ರದಕ್ಷಿಣೆಯನ್ನು ಏರ್ಪಡಿಸಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮುನೇಗೌಡ, ಜಿಲ್ಲಾ ಪಂಚಾಯತ್ ಸದಸ್ಯೆ ಪದ್ಮಾವತಿ ಮುನೇಗೌಡ ಕಾರ್ಯಕಮಕ್ಕೆ ಮುಖ್ಯ ಆತಿಥಿಗಳಾಗಿ ಆಗಮಿಸಿ ಶ್ರೀ ಭೋಗ ನಂದೀಶ್ವರಸ್ವಾಮಿಯವರಿಗೆ ಅಭಿಷೇಕ, ಪೂಜೆ ಸಲ್ಲಿಸುವುದರೊಂದಿಗೆ ಗಿರಿ ಪ್ರದಕ್ಷಿಣೆ ಪ್ರಾರಂಭಿಸಿದರು.  ಗಿರಿಪ್ರದಕ್ಷಿಣೆಗೆ ದೊಡ್ಡಬಳ್ಳಾಪುರ, ಗೌರೀಬಿದನೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ವಿಜಯಪುರ, ಬೆಂಗಳೂರು ನಗರ, ಯಲಹಂಕ, ಬಾಗಲೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಿದ್ದರು.

ಪ್ರತೀ ವರ್ಷ ಆಷಾಡಮಾಸದ ಕಡೆಯ ಸೋಮವಾರ ನೆಡೆಯುವ ಈ ಗಿರಿಪ್ರದಕ್ಷಿಣೆಯು ಕಳೆದ ಎಂಬತ್ತು ವರ್ಷಗಳಿಂದ ನೆಡೆಯುತ್ತಾ ಬಂದಿದ್ದು, ಗಿರಿ ಪ್ರದಕ್ಷಿಣೆಯಲ್ಲಿ ಈ ಕಣಿವೆಯಲ್ಲಿರುವ ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿಗಳ ದರ್ಶನವೂ ದೊರೆಯುತ್ತದೆ, ಹದಿನಾಲ್ಕು ಕಿಲೋಮೀಟರ್ ಉದ್ದದ ಪ್ರದಕ್ಷಿಣೆಯಲ್ಲಿ ಭಕ್ತಾದಿಗಳು ದೇವರ ನಾಮ ಜಪಿಸುತ್ತಾ, ಭಜನೆಗಳನ್ನು ಹಾಡುತ್ತಾ ಸಾಗಿದರೆ, ದಾರಿಯುದ್ದಕ್ಕೂ ಚಿಕ್ಕಬಳ್ಳಾಪುರದ ವರ್ತಕರು, ಹೆಗ್ಗಡಳ್ಳಿ ಹಾಲು ಉತ್ಪಾದಕರ ಸಂಘ, ಸರ್.ಎಂ.ವಿ.ವಾಯು ವಿಹಾರ ತಂಡ, ದೊಡ್ಡಬಳ್ಳಾಪುರದ ಎಸ್.ಎಲ್.ಎನ್ ಟೆಂಟ್ ಹೌಸ್, ಶಾಂತಿನಗರ ಭಕ್ತಾದಿಗಳು, ದೇವರಾಜನಗರ, ಕಾಲೇಜುರಸ್ತೆ ಭಕ್ತಾದಿಗಳು ಭಕ್ತರಿಗೆ ಬಿಸ್ಕತ್, ಕಾಫಿ, ಟಿ. ಬಾದಾಮಿ ಹಾಲು, ಕರ್ಜೂರ, ಕಲ್ಲುಸಕ್ಕರೆ, ಕಡಲೆ ಹುಸಲಿ, ಮಜ್ಜಿಗೆ, ಚಿತ್ರಾನ್ನ, ಮೊಸರನ್ನ ಹಂಚಿದರು. ಕಾರ್ಯಕ್ರಮ ಆಯೋಜಕರಾದ ನಂದಿ ಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳೂ ಹಾಜರಿದ್ದು ಆಗಮಿಸಿದ್ದ ಭಕ್ತಾದಿಗಳಿಗೆ ಬೆಳಿಗ್ಗೆ ತಿಂಡಿ, ಮಧ್ಯಾನ್ಹ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. 

Edited By

Ramesh

Reported By

Ramesh

Comments