12 ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ







ದೊಡ್ಡಬಳ್ಳಾಪುರ ನಗರದ ಕೋಟೆರಸ್ತೆಯಲ್ಲಿರುವ ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ವತಿಯಿಂದ 12 ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಯನ್ನು ದಿನಾಂಕ 21-7-2019 ರ ಭಾನುವಾರ ಬೆಳಿಗ್ಗೆ 12 ಘಂಟೆಗೆ ನೆಲಮಂಗಲ ರಸ್ತೆಯಲ್ಲಿರುವ ಗುಂಡಪ್ಪನವರ ಬಯಲಿನಲ್ಲಿ ಆಯೋಜಿಸಲಾಗಿತ್ತು. ಮಹಿಳೆಯರು, ಪುರುಷರು ಮತ್ತು ತಂಡಗಳಲ್ಲಿ ಗಾಳಿಪಟ ಹಾರಿಸುವಂತೆ ಸ್ಪರ್ಧೆಯನ್ನು ಮೂರು ವಿಭಾಗಗಳಗಿ ವಿಂಗಡಿಸಿ, ವಿಶೇಷ ವಿನ್ಯಾಸದ ಹಾಗೂ ವಿಶೇಷ ಆಕಾರದ ಗಾಳಿಪಟಗಳಿಗೆ ಆದ್ಯತೆ ನೀಡಲಾಗಿತ್ತು. ಸ್ಪರ್ಧೆಗೆ ನಗರದ ಮಹಿಳೆಯರು, ಮಕ್ಕಳು ಮತ್ತು ಯುವಕರು ಆಸಕ್ತಿಯಿಂದ ಭಾಗವಹಿಸಿದ್ದರು, ರಾಜ್ಯದ ಬೆಳಗಾವಿ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಿ ಸ್ಪರ್ಧೆಗೆ ಕಳೆ ಕಟ್ಟಿಸಿದ್ದರು.
ಕಾರ್ಯಕ್ರಮವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಗಾಳಿಪಟ ಕಲಾಸಂಘದ ಅಧ್ಯಕ್ಷ ಎಸ್.ಸಿ.ಜಗದೀಶ್ ವಹಿಸಿದ್ದರು, ಅತಿಥಿಗಳಾಗಿ ದೊಡ್ಡಬಳ್ಳಾಪುರ ನಗರಸಭೆ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯೆ ಮಂಜುಳ, ದೇವಾಂಗ ಮಂಡಲಿ ಹಂಗಾಮಿ ಅಧ್ಯಕ್ಷ ಕೆ.ಜಿ.ದಿನೇಶ್ ಆಗಮಿಸಿದ್ದರು. ಸಂಜೆ ನೆಡೆದ ಸಮಾರೋಪ ಸಮಾರಂಭದಲ್ಲಿ ಜಯಗಳಿಸಿದ ಸ್ಪರ್ಧಿಗಳಿಗೆ ಬಹುಮಾನ ನೀಡಲಾಯಿತು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಂ.ಗ್ರಾ.ಜಿಲ್ಲೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ತ.ನ.ಪ್ರಭುದೇವ್ ಮತ್ತು ಕೆ.ಬಿ.ಮುದ್ದಪ್ಪ, ಡಾ.ಎಂ.ಶಂಕರನಾಯಕ್ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷೆ ಪಂಕಜಾ ನಾಯಕ್, ಮಾಜಿ ನಗರಸಭಾ ಸದಸ್ಯ ಹೆಚ್.ಎಸ್. ಶಿವಶಂಕರ್, ಅಂತರಾಷ್ಟ್ರೀಯ ಗಾಳಿಪಟ ಸ್ಪರ್ಧಿ ಸಂದೇಶ್ ಕಡ್ಡಿ ಆಗಮಿಸಿದ್ದರು.
ಜಯಗಳಿಸಿದ ಸ್ಪರ್ಧಿಗಳ ವಿವರ- ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ 2೦ ಮಂದಿ ಭಾಗವಹಿಸಿದ್ದು, ರಕ್ತಾಕ್ಷಿ ಪಟ ಹಾರಿಸಿದ್ದ ಕಾವ್ಯಶ್ರೀ ಮೊದಲನೆ ಬಹುಮಾನ ಪಡೆದರೆ, ಗೋಹತ್ಯೆ ನಿಷೇಧಿಸಿ ಪಟಹಾರಿದ್ದ ಮೋನಿಕಾ ಹೆಚ್.ಎಂ.ಗೌಡ ದ್ವಿತೀಯ ಹಾಗೂ ಲಾಂಡ ಪಟ ಹಾರಿಸಿದ್ದ ಮೈತ್ರಿ ತೃತೀಯ ಬಹುಮಾನ ಗಳಿಸಿದರು. ಹಿತೈಷಿಣಿ, ಶಿಲ್ಪಶ್ರೀ, ಮೋನಿಶ ಸಮಾಧಾನ ಬಹುಮಾನ ಪಡೆದರೆ, ಬಾಕ್ಸ್ ಪಟ ಹಾರಿಸಿದ್ದ ವೀಣಾ ವಿಶೇಷ ಬಹುಮಾನಪಡೆದರು.
ತಂಡ ವಿಭಾಗದಲ್ಲಿ ಆಂಜನೇಯ ಪಟ ಹಾರಿಸಿದ್ದ ಎನ್.ನವೀನ್ ಪ್ರಥಮ ಬಹುಮಾನ, ಸಿ.ಶಿವಕುಮಾರ್ ಭುವನೇಶ್ವರಿ ಪಟ ಹಾರಿಸಿ ದ್ವಿತೀಯ ಹಾಗೂ ಗಂಡಭೇರುಂಡ ಪಟ ಹಾರಿಸಿ ಮಾರುತಿ ತೃತೀಯ ಬಹುಮಾನ ಗಳಿಸಿದರು. ಮಹೇಶ್ ಬಿ. ಸೈನಿಕ ಪಟ, ಮುನಿರಾಜು ಎಂ. ಬಲೂನು ಪಟ, ದಯಾನಂದ್ ಸೈನಿಕ ಪಟ, ರಾಜ ರಾಬರ್ಟ್ ಪಟ, ಸಂತೋಷ್ ಸೈನಿಕ ಪಟ, ಅಭಿಲಾಷ್ ದಾಸಿಮಯ್ಯ ಪಟ, ಕಿರಣ್ ಕರ್ನಾಟಕ ಪಟ, ನರೇಂದ್ರ ಬಾಬು ನವಿಲು ಪಟ, ಮುನಿರಾಜು ಇಂಡಿಯಾ ಪಟ, ಅಜಯ್ ಆಪಲ್ ಪಟ, ಮುನಿರಾಜು ಆಂಜನೇಯ ಪಟ, ಟಿ.ಡಿ. ಹರೀಶ್ ಕುಮಾರ್ ವಿವೇಕಾನಂದ ಪಟ, ಹರೀಶ್ ಕೆ. ರಾಧಾಕೃಷ್ಣ ಪಟ, ಮಂಜುನಾಥ್ ಕೆ.ಎ. ಅಭಿನಂದನ್ ಪಟ, ವೆಂಕಟೇಶ್ ಎ. ಗಣೇಶ ಪಟಗಳನ್ನು ಕಟ್ಟಿ ತಂಡ ವಿಭಾಗದ ವಿಶೇಷ ಬಹುಮಾನವನ್ನು ಪಡೆದರು.
ಪುರುಷ ವಿಭಾಗದಲ್ಲಿ ಅಮ್ಮೋರು ಪಟ ಹಾರಿಸಿದ ಕುಶಲ್ ಆರ್. ಪ್ರಥಮ ಬಹುಮಾನ, ಆಂಜನೇಯ ಪಟ ಹಾರಿಸಿದ ಜಿ.ವಿ. ಮಹೇಶ್ ದ್ವಿತೀಯ ಹಾಗೂ ಬುಗುರಿ ಪಟ ಹಾರಿಸಿದ್ದ ಯಶ್ ಪಿ.ಜೆ. ತೃತೀಯ ಬಹುಮಾನ ಗಳಿಸಿದರೆ, ಬೋಟ್ ಪಟ ಕಟ್ಟಿದ್ದ ದರ್ಶನ್ ಕುಮಾರ್ ವಿಶೇಷ ಬಹುಮಾನ ಪಡೆದರು. ಜಿ.ಆರ್. ಮಂಜುನಾಥ್ ಸೇವ್ ಗರ್ಲ್ ಪಟ, ತರುಣ್ ಕುಮಾರ್ ರಾಜಕುಮಾರ್ ಪಟ, ವೇಣು ಹಾರ್ಟ್ ಪಟ, ಸುಮಂತ್ ಗೋ ರಕ್ಷಣೆ ಪಟ, ಅಕ್ಷಯ್ ಕುಮಾರ್ ಚೆಸ್ ಬೋರ್ಡ್ ಪಟ, ನಾಗಾರ್ಜುನ ಸ್ವಸ್ತಿಕ್ ಪಟ, ಧನುಷ್ ರಾಧಾಕೃಷ್ಣ ಪಟ, ತರುಣ್ ಕುಮಾರ್ ಸಂಗೊಳ್ಳಿ ರಾಯಣ್ಣ ಪಟ, ಚೇತನ್ ಪಬ್ ಜಿ ಪಟ, ಮುನಿರಾಜು ಗಡಿಯಾರ ಪಟ, ದೀಪಕ್ ಆರ್. ಗಣೇಶ ಪಟ, ಕುಲ್ ದೀಪ್ ಯಕ್ಷಗಾನ ಪಟ, ಆಕಾಶ್ ಇಂಡಿಯಾ ಪಟ, ಗಗನ್ ಸೈನಿಕ ಪಟ ಹಾರಿಸಿ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು. ಗಾಳಿ ಪಟ ಕಲಾಸಂಘದ ಎ.ಎಸ್.ಪ್ರಕಾಶ್, ಜಿ.ಆರ್. ವಿಶ್ವನಾಥ್, ಎಸ್.ಮುನಿರಾಜು, ಎಲ್.ಎನ್. ಶ್ರೀನಾಥ್, ಜೆ.ವಿ. ಸುಬ್ರಮಣಿ ಮತ್ತಿತರರು ಭಾಗವಹಿಸಿದ್ದರು.
Comments