ಮುಸ್ಲಿಂ ಭಯೋತ್ಪಾದಕರ ವಿರುದ್ಧ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ನೆಡೆದ ಪ್ರತಿಭಟನೆ

02 Jul 2019 7:47 AM |
917 Report

ತಾಲ್ಲೂಕು ಆಡಳಿತದ ವೈಪಲ್ಯ, ಉಗ್ರರಿಗೆ ಆಶ್ರಯ ಕೊಟ್ಟಿದ್ದ ಮೌಲ್ವಿಯ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ, ಹೊಸಬರನ್ನ ಕಂಡಾಗ ಯಾವುದೇ ಮುಲಾಜಿಲ್ಲದೇ ತನಿಖೆ ಮಾಡುವುದು, ದೊಡ್ಡಬಳ್ಳಾಪುರದ ಮುಸ್ಲಿಮರೇ ಹೇಳಿರುವಂತೆ ಚಿಕ್ಕಪೇಟೆಯಲ್ಲಿರುವ ಅನಧಿಕೃತ ಪ್ರಾರ್ಥನಾ ಮಂದಿರವನ್ನು ಮುಚ್ಚುವುದು ಹಾಗೂ ಉಗ್ರರಿಗೆ ಆಶ್ರಯ ಕೊಡುವ ಹಾಗೂ ಅಂತಹವರ ಬೆಂಬಲಿಸಿವರು ಯಾರಿಗಾದರೂ ಸರಿಯೇ ಶಿಕ್ಷೆ ನೀಡಬೇಕೆಂದು, ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು, ಸಮಾಜದ ಶಾಂತಿಯನ್ನ ಕದಡುವ ಶಕ್ತಿಗಳನ್ನ ಮಟ್ಟ ಹಾಕಲು ಕಠಿಣ ಕಾನೂನು ಕ್ರಮಗಳನ್ನ ಜಾರಿಗೆ ತರಲು ಆಗ್ರಹಿಸಿ ನಗರದ ಸರ್ವಧರ್ಮ, ಎಲ್ಲಾ ಪಕ್ಷಗಳ ನಾಯಕರು, ಎಲ್ಲಾ ಸಂಘಟನೆಗಳು ಮತ್ತು ಸಾರ್ವಜನಿಕರು ಪಕ್ಷ ಭೇದ ಮರೆತು ಜಾತಿಭೇದ ಮರೆತು ಹೊಲಸುಗಳ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುವ ಸಲುವಾಗಿ ಪ್ರತಿಭಟನೆಯನ್ನ ದಿನಾಂಕ 1-7-2019 ಸೋಮವಾರ ಬೆಳಿಗ್ಗೆ 9.30ಕ್ಕೆ ನೆಲದಾಂಜನೇಯ ಸ್ವಾಮಿ ದೇವಸ್ಥಾನದಿಂದ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಮೆರವಣಿಗೆಯು ಹಳೇ ಬಸ್ ನಿಲ್ದಾಣದ ಮುಖಾಂತರ, ಸೌಂದರ್ಯ ಮಹಲ್ ಸರ್ಕಲ್, ದರ್ಜಿ ಪೇಟೆ, ದೇಶದ ಪೇಟೆ ಮೂಲಕ ಸಾಗಿ ತಾಲ್ಲೂಕು ಕಛೇರಿ ವೃತ್ತದ ಮೂಲಕ ತಹಸೀಲ್ದಾರ್ ಕಛೇರಿ ತಲುಪಿತು. ದಾರಿಯುದ್ದಕ್ಕೂ ಮೆರವಣಿಗೆಯಲ್ಲಿ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಹಾಗೂ ಸ್ಥಳೀಯ ಆಡಳಿತ ವೈಪಲ್ಯದ ದಿಕ್ಕಾರ ಕೂಗಲಾಯಿತು. ಮುಖ್ಯ ಭಾಷಣಕಾರರಾಗಿ ಬೆಂಗಳೂರಿನಿಂದ ಸಾಮಾಜಿಕ ಕಾರ್ಯಕರ್ತ ಪ್ರಕಾಶರಾಜ ಮತ್ತು ಬಜರಂಗದಳ ಸಂಚಾಲಕ ರಘು ಸಕಲೇಶಪುರ ಆಗಮಿಸಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಂದಾಜು ಐದು ಸಾವಿರಕ್ಕೂ ಹೆಚ್ಚು ಮಂದಿ ಬಂಗ್ಲಾದೇಶಿ ಮುಸ್ಲಿಮರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ, ಅವರಿಗೆಲ್ಲಾ ಆಧಾರ್ ಮತ್ತು ರೇಷನ್ ಕಾರ್ಡ್ ದೊರೆತಿದೆ, ಇದರ ಬಗ್ಗೆ ಸ್ಥಳೀಯ ಪೋಲೀಸರು ಮಾಹಿತಿ ಕಲೆಹಾಕಿದ್ದಾರೆಯೆ? ಉಗ್ರನಿಗೆ ಆಶ್ರಯ ನೀಡಿದ್ದ ಮೌಲ್ವಿಯನ್ನು ಬಂದಿಸಿ ತನಿಖೆ ನೆಡೆಸದೇ ಇರುವುದು ನಾಗರೀಕರಲ್ಲಿ ಅನುಮಾನ ಮೂಡಿಸುತ್ತಿದೆ ಎಂದು ಪ್ರಕಾಶ್ ರಾಜ್ ಪೋಲೀಸರ ಮೇಲೆ ಕಿಡಿಕಾರಿದರು. ಕೇವಲ ಹಿಂದೂಗಳು ಮತ್ತು ಹಿಂದೂ ಪರ ಸಂಘಟನೆಗಳ ಮೇಲೆ ವಿನಾಕಾರಣ ಕೇಸುಗಳನ್ನು ಹಾಕುವ ಪೋಲೀಸರು, ಇಲ್ಲೇ ಮಸೀದಿಯಲ್ಲಿ ಅಡಗಿದ್ದ ಉಗ್ರನನ್ನು ಎನ್.ಐ.ಎ. ಬಂದು ಬಂಧಿಸುವವರೆಗೂ ಗೊತ್ತಾಗದಿರುವುದು ಅವರ ವೈಫಲ್ಯವನ್ನು ಎತ್ತಿತೋರಿಸುತ್ತದೆ, ಈ ವಿಷಯದಲ್ಲಿ ಕಠಿಣಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆಯನ್ನು ಬಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ರಘು ನೀಡಿದರು.ಮನವಿ ಪತ್ರವನ್ನು ರಾಜ್ಯಪಾಲರು, ಗೃಹ ಮಂತ್ರಿಗಳು ಹಾಗೂ ಡೈರೆಕ್ಟರ್ ಜನರಲ್ ಆಫ್ ಪೋಲೀಸ್ ರವರಿಗೆ ತಲುಪಿಸಲು ತಹಸೀಲ್ದಾರ್ ರವರಿಗೆ ನೀಡಲಾಯಿತು.

ಪ್ರತಿಭಟನೆಯನ್ನ ಸಂಘ ಪರಿವಾರದ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ, ಕನ್ನಡ ಜಾಗೃತ ವೇದಿಕೆ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಮತ್ತು ಎಲ್ಲಾ ಕನ್ನಡ ಪರ, ಪ್ರಗತಿ ಪರ, ರೈತ ಪರ ಸಂಘಟನೆಗಳ ಪದಾಧಿಕಾರಿಗಳ ಸಹಕಾರದೊಂದಿಗೆ ನಡೆಸಲಾಯಿತು. ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗೈರು ಹಾಜರಾಗಿ ತಮ್ಮ ಓಟ್ ಬ್ಯಾಂಕ್ ಕಾಪಾಡಿಕೊಂಡಿದ್ದೇವೆ ಅಂತ ಅಂದುಕೊಂಡಿದ್ದರೆ ಅದು ಅವರ ಭ್ರಮೆ!

Edited By

Ramesh

Reported By

Ramesh

Comments