ಮಾನ್ಯ ಶಾಸಕ ವೆಂಕಟರಮಣಯ್ಯನವರೇ ಓಟ್ ಬ್ಯಾಂಕ್ ಪಾಲಿಟಿಕ್ಸ್ ಬಿಟ್ಟುಬಿಡಿ....

27 Jun 2019 3:58 PM |
1368 Report

ದೊಡ್ಡಬಳ್ಳಾಪುರ ನಗರದ ಮಸೀದಿಗಳು ಉಗ್ರರ ಆಶ್ರಯ ತಾಣಗಳಾಗುತ್ತಿವೆ. ಹಾಗೂ ಮಸೀದಿಯ ಮೌಲ್ವಿಯೇ ಶಂಕಿತ ಉಗ್ರನಿಗೆ ಆಶ್ರಯ ನೀಡಿರುವ ಕ್ರಮವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಯುವಮೋರ್ಚಾ ವತಿಯಿಂದ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲೂ ಉದ್ದೇಶಿಸಿದ್ದು, ಆ ವಿಚಾರವಾಗಿ ಚರ್ಚಿಸಲು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ದಿನಾಂಕ 27-06-2019 ರ ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಪಶ್ಚಿಮ ಬಂಗಾಳದ ಬುರ್ದ್ವನ್ ಖಗ್ರಾಗಡದಲ್ಲಿ 2014 ರಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ "ಜಮಾತ್ ಉಲ್ ಮುಜಾಹಿದೀನ್" ಉಗ್ರ ಸಂಘಟನೆಯ ಸದಸ್ಯ ಹಾಗೂ ಬಾಂಬ್ ಸ್ಪೋಟದ ಆರೋಪಿ ಉಗ್ರ ಹಬೀಬುಲ್ ರೆಹಮಾನ್ ನನ್ನು ರಾಷ್ಟ್ರೀಯ ತನಿಖಾ ದಳ(NIA) ಬಂಧಿಸಿದೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸದಲ್ಲಿಯೇ ಇಂತಹ ಘಟನೆ ಸಂಭವಿಸಿಲ್ಲ.  ಹೇಳಿ ಕೇಳಿ ಶಾಂತಿಗೆ ಹೆಸರಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಜನರು ನಿನ್ನೆಯ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.  ಈ ಕುರಿತು ಪಕ್ಷಾತೀತವಾಗಿ ಹೋರಾಟ ನೆಡೆಸಬೇಕಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಂ.ಗ್ರಾ.ಜಿಲ್ಲೆ.ಪುಷ್ಪ ಶಿವಶಂಕರ್ ಮಾತನಾಡಿ ಈ ವಿಷಯದಲ್ಲಿ ನಮ್ಮ ತಾಲ್ಲೂಕಿನ ಗೌರವಾನ್ವಿತ ಶಾಸಕ ಟಿ.ವೆಂಕಟರಮಣಯ್ಯ ಘಟನೆಯನ್ನು ಖಂಡಿಸಿಲ್ಲ ಹಾಗೂ ಯಾವುದೇ ರೀತಿಯ ಹೇಳಿಕೆಯನ್ನೂ ಕೊಟ್ಟಿಲ್ಲ, ಯಾಕೆ ಏನಾದರೂ ಹೇಳಿದರೆ ಓಟ್ ಬ್ಯಾಂಕ್ ಹಾಳಾಗುತ್ತದೆ ಅಂತಾನಾ? ತಾಲ್ಲೂಕಿನ ಪ್ರಥಮ ಪ್ರಜೆಯಾದ ಅವರಿಗೆ ಜವಾಬ್ದಾರಿ ಇಲ್ಲವೆ? ಹಾಗೆಯೇ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರೂ ಸುಮ್ಮನಿದ್ದಾರೆ, ಅಂದರೆ ಏನು ಅರ್ಥ? ಮುಸ್ಲಿಮರು ಯಾವ ರೀತಿಯಲ್ಲಿ ಹಿಂದೂಗಳನ್ನು ಮುಗಿಸಲು ಪಿತೂರಿ ನೆಡೆಸುತ್ತಿದ್ದಾರೆ ಅಂಥಾ ಗೊತ್ತಿಲ್ಲವಾ? ಅಯ್ಯೋ ಈ ವಿಷಯಗಳಲ್ಲಿ ಪ್ರತಿಭಟನೆ ಮಾಡಲು ಆರ್.ಎಸ್.ಎಸ್. ಬಿಜೆಪಿ, ಬಜರಂಗದಳ ಮುಂತಾದ ಹಿಂದೂ ಪರ ಸಂಘಟನೆಗಳಿವೆ ನಮಗ್ಯಾಕೆ? ಅವರ ಓಟ್ ಬಂದರೆ ಸಾಕು ಅಂತಾನಾ? ಎಲ್ಲೋ ಇದ್ದ ಉಗ್ರರು ಇಂದು ನಿಮ್ಮ ಊರಿಗೆ ಬಂದಿದ್ದಾರೆ, ನಾಳೆ ನಿಮ್ಮ ಮನೆ ಒಳಗೆ ಬರುತ್ತಾರೆ ಅನ್ನೋದು ತಿಳಿದಿರಲಿ ಎಂದು ಓಟಿನ ಆಸೆಗೆ ಬಾಯಿಗೆ ಬೀಗ ಹಾಕಿ ಕುಳಿತಿರುವ ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು,  ಎಲ್ಲರ ಅಭಿಪ್ರಾಯದಂತೆ ದಿನಾಂಕ 28-6-2019 ರ ಶುಕ್ರವಾರ ಸಂಜೆ ಐದು ಘಂಟೆಗೆ ತೇರಿನಬೀದಿಯಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಪರ ಸಂಘಟನೆಗಳ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳ ಸಭೆಯನ್ನು ಕರೆಯಲಾಗಿದೆ, ಅಲ್ಲಿ ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳ ಜೊತೆಗೂಡಿ ಹೋರಾಟ ನೆಡೆಸಲು ತೀರ್ಮಾ ತೆಗೆದುಕೊಳ್ಳಲಾಯಿತು.

ಸಭೆಗೆ ಆರ್.ಎಸ್.ಎಸ್. ಹಿಂದೂ ಜಾಗರಣ ವೇದಿಕೆ, ಭಜರಂಗದಳ ಮುಖಂಡರು ಸೇರಿದಂತೆ ಕೆ.ಎಂ. ವೆಂಕಟಾಚಲಯ್ಯ, ಮಹದೇವ್, ಮಾಜಿ ನಗರ ಸಭಾಧ್ಯಕ್ಷ ಮುದ್ದಪ್ಪ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲ, ಉಮಾಮಹೇಶ್ವರಿ, ವತ್ಸಲಾ ಮನು ಹಾಗೂ ತಾಲ್ಲೂಕು ಹಾಗೂ ನಗರ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ವಿವಿಧ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಬೂತ್ ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸದಸ್ಯರು, ಬಿಜೆಪಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹಾಜರಾಗಿದ್ದರು.

Edited By

Ramesh

Reported By

Ramesh

Comments