ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳಿಂದ ಸಂಭ್ರಮಾಚರಣೆ

31 May 2019 6:13 AM |
410 Report

ದೊಡ್ಡಬಳ್ಳಾಪುರ ನಗರದಲ್ಲಿ ಇಂದು ನರೇಂದ್ರ ದಾಮೋದರದಾಸ್ ಮೋದಿ ಅಭಿಮಾನಿಗಳು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಹಬ್ಬದ ವಾತಾವರಣ, ದೇಶ ಕಂಡ ಧೀಮಂತ ನಾಯಕ, ದಿಟ್ಟ ನೆಡೆಯ ನೇರ ನುಡಿಯ ಅಭಿವೃದ್ಧಿಯ ಹರಿಕಾರ, ಭಯೋತ್ಪಾದಕರ ಪಾಲಿನ ಸಿಂಹಸ್ವಪ್ನ, ಭಾರತ ಮಾತೆಯ ಹೆಮ್ಮೆಯ ಪುತ್ರ ನರೇಂದ್ರ ಮೋದಿ ಎರಡನೆ ಬಾರಿಗೆ ಭವ್ಯ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಸಂಜೆ ಏಳು ಘಂಟೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನೆರವೇರುತ್ತಿರುವ ಸಲುವಾಗಿ ಸಂಭ್ರಮಾಚರಣೆ ನೆಡೆಸಿದರು. ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಸಿದ್ದಲಿಂಗಯ್ಯ ವೃತ್ತದಲ್ಲಿ ಬೃಹತ್ ಎಲ್.ಇ.ಡಿ ಯಲ್ಲಿ ಪ್ರಮಾಣವಚನದ ನೇರಪ್ರಸಾರದ ವ್ಯವಸ್ಥೆಯನ್ನು ಯುವ ಮೋರ್ಚಾ ವತಿಯಿಂದ ಮಾಡಲಾಗಿತ್ತು, ಸ್ಥಳದಲ್ಲಿದ್ದ ಎಲ್ಲಾ ಸಾರ್ವಜನಿಕರಿಗೂ ಲಾಡು ಹಂಚಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ನಗರದ ವಿವಿಧ ಕಡೆಗಳಲ್ಲಿ ಸಂಭ್ರಮಾಚರಣೆ-

ನಗರದ ವೀರಭದ್ರನಪಾಳ್ಯದಲ್ಲಿರುವ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿ ನೆರೆದಿದ್ದ ನಾಗರೀಕರಿಗೆ ಪ್ರಸಾದ ಮತ್ತು ಸಿಹಿ ಹಂಚುವುದರ ಮೂಲಕ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಶ್ರೀ ನರೇಂದ್ರ ಮೋದಿ ಅವರಿಗೆ ಶುಭವಾಗಲಿ ಎಂದು ಯುವ ಮುಖಂಡ ಶಿವು ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಇಸ್ಲಾಂಪುರದಲ್ಲಿ ಮೊದಿ ಅಭಿಮಾನಿಗಳು ಮೈಸೂರ್ ಪಾಕ್, ಪಕೋಡ ಮತ್ತು ಚಹಾ ಹಂಚಿ ಸಂಭ್ರಮಿಸಿದರು.

ಕುಚ್ಚಪ್ಪನ ಪೇಟೆಯ ಶ್ರೀ ಕೇಸರಿ ಮಿತ್ರ ಬಳಗ, ನಮೋ ಸೇನೆ ಮತ್ತು ಬಿಜೆಪಿ ಅಭಿಮಾನಿಗಳ ಸಂಘದ ಹರೀಶ್ ಸಿ.ಎಂ. ದೀಪಕ್.ರವಿ, ಆನಂದ್ ಕುಮಾರ್, ಭಾಸ್ಕರ್, ಹರೀಶ್ ವೈ, ನವೀನ್ ಕುಮಾರ್, ಗೌತಮ್ ವೆಂಕಟರಾಜು, ಮುನಿಸ್ವಾಮಿ, ಅನಿಲ್, ವಿಜಯಕುಮಾರ್ ಮತ್ತಿತರ ಗೆಳೆಯರು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಶುಭ ಸಂದರ್ಭದಲ್ಲಿ ಕುಚ್ಚಪ್ಪನಪೇಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸಂಜೆ ಆರು ಘಂಟೆಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನಗರಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ ನೇತೃತ್ವದಲ್ಲಿ ಮತದಾರರು, ಸಾರ್ವಜನಿಕರು, ಬಿಜೆಪಿ ಪಕ್ಷದ ಅಭಿಮಾನಿಗಳಿಗೆ ಸಿಹಿ ವಿತರಿಸುವ ಸಲುವಾಗಿ 10000 ಲಾಡುಗಳನ್ನು ಸಿದ್ದಪಡಿಸಲಾಗಿತ್ತು, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಕೆ.ಎಂ. ಹನುಮಂತ ರಾಯಪ್ಪ, ನಾರಾಯಣ ಶರ್ಮ, ಜೋನ ಮಲ್ಲಿಕಾರ್ಜುನ್, ನಗರ ಅಧ್ಯಕ್ಷ ರಂಗರಾಜು, ಹಿರಿಯ ವಕೀಲ ರವಿ ಮಾವಿನಕುಂಟೆ, ನಗರ ಸಭೆ ಸದಸ್ಯ ವೆಂಕಟರಾಜು, ಕಂಬಿ ನಂಜಪ್ಪ, ಚಂದ್ರಶೇಖರ್, ಎಂ.ಕೆ. ರಮೇಶ್, ಪುಷ್ಪ ಶಿವಶಂಕರ್, ನಗರ ಮಹಿಳಾ ಅಧ್ಯಕ್ಷೆ ಗಿರಿಜಾ, ಜಿಲ್ಲಾ ಉಪಾಧ್ಯಕ್ಷೆ ಉಮಾ ಮಹೇಶ್ವರಿ, ಕಾರ್ಯದರ್ಶಿ ದಾಕ್ಷಾಯಣಿ, ಖಜಾಂಚಿ ಕಮಲಾಕ್ಷಿ ಶ್ರೀನಿವಾಸ್, ಮುಖಂಡರಾದ ಶಿವು, ಗೋಪಿನಾಥ್, ಮುನಿರಾಜು, ವೆಂಕಟೇಶ್ ಬಂತಿ, ರಾಮಕೃಷ್ಣ, ಮಹದೇವ್ ಶ್ರೀನಿವಾಸ್, ವೆಂಕಟೇಶ್, ಹುಂಗಿ ನಿತಿನ್, ವಾಣಿ, ವತ್ಸಲಮನು, ಟಿ.ಜಿ. ಮಂಜುನಾಥ್ ಹಾಜರಿದ್ದರು.

 

Edited By

Ramesh

Reported By

Ramesh

Comments