ಎಡಚರು, ಕಮ್ಯೂನಿಷ್ಟರು, ಗುಲಾಮರು, ಗಂಜಿ ಗಿರಾಕಿಗಳು, ತುಕಡೆ ಗ್ಯಾಂಗ್ ಸದಸ್ಯರ ತಳ ಸುಟ್ಟ ವಾಸನೆಯೇ ಜಾಸ್ತಿ ಇರುತ್ತೆ ಅಲ್ವಾ?

23 May 2019 6:49 AM |
506 Report

ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಇಂದು ಸಂಭ್ರಮಾಚರಣೆ ನಡೆಯಲಿದೆ. ವಾದ್ಯ, ಕುಣಿತ, ಸಿಹಿ ವಿತರಣೆ, ಪಟಾಕಿ ಅಬ್ಬರ ಕಾಣಬಹುದು. ದಯವಿಟ್ಟು ಎಲ್ಲೂ ಪಟಾಕಿ ಸುಡಬೇಡಿ. ಯಾಕೆಂದರೆ ಸೋತವರ ತಳದಿಂದ ಸುಟ್ಟ ವಾಸನೆ, ಹೊಗೆ ಸ್ವಲ್ಪ ಹೆಚ್ಚೇ ಬಂದು ಸಾಕಷ್ಟು ಪರಿಸರ ಮಾಲಿನ್ಯ ಹೇಗೂ ಆಗಲಿದೆ!! ನಮ್ಮ ಕೆಂಗೇರಿಯ ನಾಗೇಶ ಹೆಗಡೆಯವರು "ಪಟಾಕಿ ಸುಡಬೇಡಿ. ಆದರೆ ಬಸ್ ನಿಲ್ದಾಣ ಚೊಕ್ಕಟ ಮಾಡುತ್ತೇವೆ, ರಕ್ತದಾನ ಮಾಡುತ್ತೇವೆ, ಕೆರೆ ಹೂಳೆತ್ತುತ್ತೇವೆ, ನೂರು ಗಿಡ ನೆಡುತ್ತೇವೆ, ಪಠ್ಯಪುಸ್ತಕ ಹಂಚುತ್ತೇವೆ, ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತೇವೆ, ಗ್ರಂಥಾಲಯಕ್ಕೆ ಪುಸ್ತಕ ಹಂಚುತ್ತೇವೆ, ಬೀದಿತ್ಯಾಜ್ಯ ನಿರ್ಮೂಲನೆ ಮಾಡುತ್ತೇವೆ, ಸರ್ಕಾರಿ ಕಟ್ಟಡಗಳಲ್ಲಿ ಮಳೆಸಂಗ್ರಹ ಮಾಡುತ್ತೇವೆ - ಎಂದೆಲ್ಲ ಪ್ಲಕಾರ್ಡ್ ಹಿಡಿದು ಕುಣಿಯಿರಿ" ಎಂಬ ದಿವ್ಯ ಉಪದೇಶ ಮಾಡಿದ್ದಾರೆ.

ಉಪದೇಶ ಮಾಡುವುದಕ್ಕೇನು! ಒಂದೊಂದು ಸಲಹೆ ಕೊಟ್ಟುಬಿಡಿ ಎಂದು ಹೇಳಿದರೆ ಇಲ್ಲೇ ನೂರಕ್ಕೂ ಹೆಚ್ಚು ಸಲಹೆಗಳು ಬಂದಾವು! ಆದರೆ ಹೀಗೆಲ್ಲ ಮಾಡಿ ಎಂದು ಹೇಳುವವರು ತಾವೆಷ್ಟು ಕೆಲಸ ಮಾಡಿದ್ದಾರೆ? ನಾಗೇಶ್ ಹೆಗಡೆ ಎಷ್ಟು ಬಸ್ ನಿಲ್ದಾಣ ಚೊಕ್ಕಟ ಮಾಡಿದ್ದಾರೆ? ಎಷ್ಟು ಕೆರೆಗಳ ಹೂಳೆತ್ತಿದ್ದಾರೆ? ಎಷ್ಟು ಬಡಮಕ್ಕಳಿಗೆ ಪಠ್ಯಪುಸ್ತಕ ಹಂಚಿದ್ದಾರೆ? ಎಷ್ಟು ಬೀದಿತ್ಯಾಜ್ಯ ನಿರ್ಮೂಲನೆ ಮಾಡಿದ್ದಾರೆ?

ಸಂಭ್ರಮ ಯಾವುದೇ ಇರಲಿ, ಹೀಗೆ ಮಾಡಬೇಡಿ, ಹಾಗೆ ಮಾಡಿ ಎಂದು ಹೇಳುವ ಬುದ್ಧಿವಂತರ, ಬುದ್ಧಿಜೀವಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಬಲೂನನ್ನು ಠಪ್ಪನ್ನಿಸಿ ಸಾಕು; ನಾಗರಪಂಚಮಿ ದಿನ ಬಡ ಮಕ್ಕಳಿಗೆ ಹಾಲು ಕೊಡಿ ಸಾಕು; ಗಣೇಶನನ್ನು ಬಕೆಟ್‍ನಲ್ಲಿ ಮುಳುಗಿಸಿ ಸಾಕು ಎಂದೆಲ್ಲ ಉಪದೇಶ ಕೊಡುವ ದೊಡ್ಡ ಪಡೆಯೇ ಹುಟ್ಟಿಕೊಂಡಿದೆ. ಹೀಗೆಲ್ಲ ಉಪದೇಶ ಮಾಡಿದರೆ ನಾವು ದೊಡ್ಡವರು, ಮಹಾತ್ಮರು ಎಂದು ಇವರು ಭಾವಿಸಿದಂತಿದೆ. ಯಾವುದೇ ಸಂಭ್ರಮವನ್ನು ಹಾಗಲ್ಲ ಹೀಗೆ ಮಾಡಿ ಎಂದು ಹೇಳಲು ನೀವು ಯಾರು? ಉಪದೇಶ ಮಾಡುವ ನೀವು ಎಷ್ಟು ಮಾಡಿದ್ದೀರಿ? ಎಷ್ಟು ಹಬ್ಬಗಳನ್ನು ಆಚರಿಸಿದ್ದೀರಿ? ಮಕ್ಕಳಿಗೆ ಹಾಲು ಕೊಡಿ ಎನ್ನುವವನು ತನ್ನ ಜೀವಮಾನದಲ್ಲಿ ಎಷ್ಟು ಗ್ಲಾಸ್ ಹಾಲು ಕೊಟ್ಟಿದ್ದಾನೆ? ಪಟಾಕಿ ಸುಡಬೇಡಿ - ರಕ್ತದಾನ ಮಾಡಿ ಎಂದು ಲೋಕೋಪದೇಶ ಕೊಡುವ ವ್ಯಕ್ತಿ ತಾನು ಎಷ್ಟು ಔನ್ಸ್ ರಕ್ತವನ್ನು ದಾನ ಮಾಡಿದ್ದಾನೆ? ಹುಡುಕುತ್ತ ಹೋದರೆ ಇವರೆಲ್ಲ ಉಪದೇಶಶೂರರು ಮಾತ್ರ ಎನ್ನುವುದು ಗೊತ್ತಾಗುತ್ತದೆ.

ಬಸ್ ನಿಲ್ದಾಣ ಚೊಕ್ಕಟ ಮಾಡಿ ಎನ್ನುವ ಹೆಗಡೆ ಮೋದಿಯವರ "ಸ್ವಚ್ಛ ಭಾರತ ಆಂದೋಲನ"ದ ಪರವಾಗಿ ಮಾತಾಡಿದ್ದನ್ನು ಎಲ್ಲಾದರೂ ನೋಡಿದ್ದೀರಾ? ಬಿರುಬೇಸಗೆಯಲ್ಲಿ "ನೂರು ಗಿಡ ನೆಟ್ಟರೆ" ಅವಕ್ಕೆ ನೀರು ಹಾಕುವವರು ಯಾರು ಎಂದೇನಾದರೂ ಹೆಗಡೆ ಹೇಳಿದ್ದಾರಾ? ಮೂಕ ಪ್ರಾಣಿಗಳಿಗೆ ನೀರು ಕೊಡಿ ಎಂದು ಹೇಳುವ ಇದೇ ಹೆಗಡೆ, ಹಸುವನ್ನು ಕೊಂದರೆ ಎಷ್ಟೆಲ್ಲ ಲಾಭ ಇದೆ ಎಂದು ಲೇಖನ ಬರೆದು ಪ್ರಚಾರ ಮಾಡಿದ್ದು ಯಾರಿಗಾದರೂ ಮರೆತು ಹೋಗಿದೆಯಾ? ಇನ್ನು, ಬೀದಿತ್ಯಾಜ್ಯ ನಿರ್ಮೂಲನೆ ಮಾಡುವುದು, ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವುದು - ಇವೆಲ್ಲ ಜನಸಾಮಾನ್ಯರ ಕೆಲಸವೋ ಅಥವಾ ಸರ್ಕಾರ ಮಾಡಬೇಕಾದ ಕೆಲಸವೋ? ರಕ್ತದಾನ ಮಾಡಿ ಎಂದು ಹೇಳುವ ಬುದ್ಧಿಜೀವಿಗಳು "ಹಬ್ಬದ ಹೆಸರಲ್ಲಿ ಎದೆ ಬಡಿದುಕೊಂಡು ರಕ್ತ ಬಸಿಯಬೇಡಿ, ಅದೇ ರಕ್ತವನ್ನು ದಾನ ಮಾಡಿ" ಎಂದು ಹೇಳಿದ್ದು ಎಲ್ಲಾದರೂ ದಾಖಲಾಗಿದೆಯಾ? ನೋಡುತ್ತ ಹೋದರೆ, "ವಿಜಯದ ಖುಷಿಯಲ್ಲಿ ಪಟಾಕಿ ಹಚ್ಚಬೇಡಿ, ಹೀಗೆ ಮಾಡಿ" ಎಂದು ಹೇಳಿದ ಸಲಹೆಗಳ ಪಟ್ಟಿಯಲ್ಲಿ ಎಷ್ಟೊಂದು ಚೂತ್ಯಪ್ಪ ಇದೆ ಎಂಬುದು ಗೊತ್ತಾಗುತ್ತದೆ. ನಾವೂ ಬೇಕಾದರೆ ಹೇಳಬಹುದು, "ಹೆಗಡೆಯವರೆ, ಚುನಾವಣಾ ಫಲಿತಾಂಶದ ದಿನ ನಿಮ್ಮದೇ ಊರಿನ ಮೋರಿಯನ್ನು ಸ್ವಚ್ಛಗೊಳಿಸಿ "ಕೆಂಗೇರಿ" ಎಂಬ ಹೆಸರಿಗೆ ಅಂಟಿರುವ ವಾಸನೆಯನ್ನು ಕಿತ್ತುಬಿಡಿ!" ಅದನ್ನು ಮೊದಲು ಮಾಡಿ ಆಮೇಲೆ ಬೇರೆಯವರಿಗೆ ಉಪದೇಶ ಕೊಡಲು ಹೊರಡಿ.

ಅಂದ ಹಾಗೆ, ಒಂದು ಗ್ರಾಂ ಚಿನ್ನ ತೆಗೆಯಲು ಹತ್ತು ಟನ್ ಮಣ್ಣು ಅಗೆಯಬೇಕು; ಹಾಗಾಗಿ ದೇವರಿಗೆ ಚಿನ್ನದ ರಥ ಬೇಡ ಎಂದು ಉಪದೇಶ ಕೊಡುವವರ ಪತ್ರಿಕೆಯಲ್ಲೇ ಇಡೀ ಮುಖಪುಟದಲ್ಲಿ ಚಿನ್ನದ ಆಭರಣಗಳ ಜಾಹೀರಾತು ಇರುತ್ತದೆ. "ಪಟಾಕಿ ಸುಡಬೇಡಿ" ಎಂದು ಉಪದೇಶ ಹೇಳುವ ಪತ್ರಿಕೆಯೇ ಚುನಾವಣಾ ಫಲಿತಾಂಶದ ಮರುದಿನ ಪಟಾಕಿ ಹಚ್ಚಿ ಸಂಭ್ರಮಿಸಿದವರ ಫೋಟೋ ಹಾಕಿ ಸಂಭ್ರಮಿಸುತ್ತದೆ. ಒಟ್ಟಾರೆ, ಶಾಸ್ತ್ರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ!

ಬರಹ- ರೋಹಿತ್ ಚಕ್ರತೀರ್ಥ...ಫೇಸ್ ಬುಕ್

 

Edited By

Ramesh

Reported By

Ramesh

Comments