ಕರಗದ ಪ್ರಯುಕ್ತ 26 ನೇ ವರ್ಷದ ಅನ್ನಸಂತರ್ಪಣಾ ಕಾರ್ಯಕ್ರಮಕ್ಕೆ ಚಾಲನೆ

18 May 2019 3:08 PM |
113 Report

ನಗರದಲ್ಲಿರುವ ಲೋಕಸೇವಾನಿರತ ಶ್ರೀ ಡಿ.ಕೊಂಗಾಡಿಯಪ್ಪ ಹಳೇ ಬಸ್ ನಿಲ್ದಾಣದಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಕರಗದ ಪ್ರಯುಕ್ತ ಬಸ್ ಮಾಲೀಕರು, ಕಾರ್ಮಿಕರು ಹಾಗೂ ಬಸ್ ನಿಲ್ದಾಣದ ವರ್ತಕರು ಮತ್ತು ಪ್ರಮುಖ ದಾನಿಗಳ ನೆರವಿನೊಂದಿಗೆ ಯಶಸ್ವಿಯಾಗಿ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ನೆಡೆಸಿಕೊಂಡು ಬರುತ್ತಿದ್ದಾರೆ. ಈ ದಿನ ದ್ರೌಪದಮ್ಮನವರ ಕರಗದ ಅಂಗವಾಗಿ ಮಧ್ಯಾನ್ಹ 12-30 ಕ್ಕೆ ಇಪ್ಪತ್ತಾರನೇ ವರ್ಷದ ಪೂಜಾ ಕಾರ್ಯಕ್ರಮ ಸಂಬ್ರಮದಿಂದ ಜರುಗಿತು, ನಗರದ ವಾಣಿಜ್ಯೋದ್ಯಮಿ ಎಸ್.ಎನ್. ಬಸ್ ಮಾಲೀಕ ಪ್ರಶಾಂತ್ ಕುಮಾರ್ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು. ಸಂಘದ ಗೋವಿಂದರಾಜು, ರಾಜಣ್ಣ, ಚನ್ನೇಗೌಡ, ಬಸವರಾಜು, ಶ್ರೀಕಂಠಮೂರ್ತಿ, ಗುರು, ಚಂದ್ರು, ರಾಮಣ್ಣ ಹಾಗೂ ಬಸ್ ಮಾಲೀಕರ ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Edited By

Ramesh

Reported By

Ramesh

Comments