ಹೆಣ್ಣುಮಕ್ಕಳಿಗೆ ರಕ್ಷಣೆ ಕಲ್ಪಿಸುವಂತೆ ಒತ್ತಾಯಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದವತಿಯಿಂದ ಪ್ರತಿಭಟನೆ...

18 May 2019 7:03 AM |
251 Report

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬುಲೆಟ್ ಜಿಮ್ ಮಾಲಿಕ ಹಾಗು ತರಬೇತುದಾರ ಗೌತಮ್ ಎಂಬ ಕಾಮುಕ ನಿಂದ ನಡೆದ ದುರ್ಘಟನೆಯಿಂದ ತಾಲ್ಲೂಕಿನ ಪೋಷಕರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ನಾಯಿಕೊಡೆಗಳಂತೆ ಯಾವುದೇ ಮಾನದಂಡ ಗಳನ್ನು ಹೊಂದಿರದೆ ಮತ್ತು ಮಹಿಳೆರಿಗೆ ತರಬೇತಿ ನೀಡಲು ಅಧಿಕೃತ ಪರವಾನಗಿ ಹೊಂದಿರದೆ, ಮಹಿಳಾ ಸುರಕ್ಷತೆ ನೀಡದೆ ನಡೆಯುತ್ತಿರುವ ಜಿಮ್,ಕರಾಟೆ ಶಾಲೆ, ವಾಹನ ತರಬೇತಿ ಶಾಲೆ, ಬ್ಯೂಟಿಪಾರ್ಲರ್, ಪೀಜಿಗಳು, ನೃತ್ಯ ತರಬೇತಿ ಶಾಲೆಗಳು, ಮನೆ ಪಾಠ ಸೇರಿದಂತೆ ಎಲ್ಲಾ ತರಬೇತಿ ಕೇಂದ್ರಗಳ ಮಾಲಿಕರು ಅವರ ಹಿನ್ನೆಲೆ ಅವರ ಪೂರ್ವಾ ಪರಗಳನ್ನ ತರಬೇತುದಾರರ ಪರಿಣಿತಿ ಅವರ ಅನುಭವ ಅವರ ಹಿನ್ನೆಲೆ ಹಾಗು ಶಾಲೆಗಳ ವಾತವರಣ ಪರಿಶೀಲಿಸಲು ಕೆಲವು ಮಾನದಂಡ ಗಳನ್ನ ನಿಗಧಿಗೊಳಿಸಲು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿತ್ತು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ರಮೇಶ್, ಎಸ್ ಕೆ ಸತೀಶ್, ಪು.ಮಹೇಶ್, ಬಷೀರ್, ಸೇರಿದಂತೆ ಕಾರ್ಯಕರ್ತರ ನೇಕರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments