ದೊಡ್ಡಬಳ್ಳಾಪುರದ ತೂಬಗೆರೆಯ ಪ್ರಸಿದ್ಧ ಹಲಸಿನ ಹಣ್ಣು!

13 May 2019 7:53 AM |
551 Report

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ಪ್ರಸಿದ್ದಿಯಾಗಿರುವುದು ಹಲಸಿಗೆ! ಹಸಿದು ಹಸಲು ತಿನ್ನು, ಉಂಡು ಮಾವು ತಿನ್ನು ಎಂಬ ಮಾತಿನಂತೆ ಹಸಿವನ್ನು ನೀಗಿಸುವ ಸಾಮರ್ಥ್ಯ ಹಲಸಿನ ಹಣ್ಣಿಗಿದೆ. ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ. ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಬೆಳೆದರೆ ರೈತರಿಗೆ ಲಾಭ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚುಲಾಭದಾಯಕ.

ಕಸಿ ಮಾಡಿದ ಸಸಿಗಳಿಗೆ ಬೇಡಿಕೆ ಜಾಸ್ತಿ. ಮೇಳಗಳಲ್ಲಿ ಹಲಸಿನ ಸಸಿಗಳನ್ನು ಮಾರಾಟ ಮಾಡಿ ರಾಜ್ಯದ ವಿವಿದೆಡೆ ತೂಬಗೆರೆ ಹಲಸಿನ ವೈಶಿಷ್ಟ್ಯತೆಯನ್ನು ಪರಿಚಯಿಸಲಾಗಿದೆ.  ಹಲಸು ಹೆಚ್ಚು ಮಳೆಯಾಗುವ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳಲ್ಲಾದರೂ ಸರಿಯೇ, ಒಣ ಪ್ರದೇಶದಲ್ಲಾದರೂ ಸರಿಯೇ, ಬೆಳೆಯುತ್ತದೆ.  ಆದರೆ ರುಚಿಯಲ್ಲಿ ಅಧಿಕ ಮಳೆಯಾಗುವ ಹಾಗೂ ಎತ್ತರದ ಪ್ರದೇಶದ ಹಣ್ಣುಗಳು ಸಪ್ಪೆ.  ಒಣ ಮೈದಾನಗಳಲ್ಲಿನ ಹಣ್ಣುಗಳು ಸಿಹಿಯಿರುತ್ತವೆ.  ಒಂದು ಮರ ಬೆಳೆದು ಚೊಚ್ಚಲ ಫ‌ಸಲು ನೀಡಲು 6-7 ವರ್ಷ ಬೇಕು.

ಹಲಸು ಸಾವಯವ ಕೃಷಿಗೆ ಉತ್ತಮ:-
ಕಸಿ ಮಾಡಿದ ಸಸಿಯನ್ನು ನಾಟಿ ಮಾಡುವ ಸಮಯದಲ್ಲಿ ಚೆನ್ನಾಗಿ ಉಳುಮೆ ಮಾಡಿ ಸಿದಟಛಿಪಡಿಸಿರುವ ಭೂಮಿಯಲ್ಲಿ ಒಂದು ಘನ ಮೀಟರ್‌ ಅಳತೆಯ ಗುಣಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರವನ್ನು ಸಮಾನ ಪ್ರಮಾಣದಲ್ಲಿ ಬೆರಸಿ ನಾಟಿ ಮಾಡಬೇಕು. ಇದಕ್ಕೆ ಕೋಲಿನ ಆಸರೆ ಬೇಕೇ ಬೇಕು. ಮರಗಳು ಬೃಹದಾಕಾರವಾಗಿ ಬೆಳೆಯುವುದರಿಂದ ಕನಿಷ್ಠ 40 ಅಡಿ ಅಂತರವಿದ್ದರೆ ಒಳಿತು.  ನಾಟಿ ಮಾಡುವುದಕ್ಕೆ ಏಪ್ರಿಲ್‌-ಜೂನ್‌ ತಿಂಗಳು ಸೂಕ್ತ. ಆರಂಭದಲ್ಲಿ ಒಳ್ಳೆ ಆರೈಕೆ ಮಾಡಿದರೆ ಸಾಕು ಒಣ ಭೂಮಿಯಲ್ಲಿಯೂ ಬುಡದಿಂದ ತಲೆಯವರೆಗೆ ಕಾಯಿಗಳು ಬಿಡುತ್ತವೆ.  ಸಾಧಾರಣವಾಗಿ ಕನಿಷ್ಠ 50 ಹಣ್ಣುಗಳಿಂದ 250 ಹಾಗೂ ಕೆಲವು ಅಪರೂಪದಮರಗಳು 500 ಹಣ್ಣುಗಳು ನೀಡುತ್ತವೆ.

ಎಳೆ ಕಾಯಿಗಳು ಪೌಷ್ಟಿಕ ತರಕಾರಿಯಾದರೆ ಪಕ್ವಗೊಂಡ ಹಣ್ಣಿನ ತೊಳೆಗಳು ತಿನ್ನಲು ಉಪಯುಕ್ತ.  ಇದರೊಂದಿಗೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಹ ತಯಾರಿಸಬಹುದು. ಹಲಸಿನ ಯಾವ ಭಾಗವೂ ನಿರುಪಯೋಗವಲ್ಲ.  ಒಂದು ವೇಳೆ ಹಣ್ಣು ಬಿಡದಿದ್ದರೂ ಹಲಸಿನ ಸೊಪ್ಪು ಹಾಕಿ ಐದಾರು ಆಡುಗಳನ್ನು ಬೆಳೆಸಿದರೆ ಸಾವಿರಾರು ರೂ. ಗಳಿಸಬಹುದು.  ಅಂದ ಹಾಗೆ ಭಾರತ ಹಲಸಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ.  ನಮ್ಮ ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಅದರಲ್ಲಿ ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿಗಂತೂ ವಿಶಿಷ್ಟ ಸ್ಥಾನ.

From face Book

Edited By

Ramesh

Reported By

Ramesh

Comments