ದೊಡ್ಡಬಳ್ಳಾಪುರ ಕ್ಷೇತ್ರದ ಬಮೂಲ್ ನಿರ್ದೇಶಕರಾಗಿ ಬಿ.ಸಿ.ಆನಂದ್ ಆಯ್ಕೆ

13 May 2019 7:26 AM |
253 Report

ದೊಡ್ಡಬಳ್ಳಾಪುರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿಂಕೆ ಬಚ್ಚಳ್ಳಿಯ ಬಿ.ಸಿ. ಆನಂದ್ ನೂರ ನಲವತ್ತು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ, ಚಲಾವಣೆಯಾದ 182 ಮತಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಅಪ್ಪಯ್ಯಣ್ಣ 40 ಮತಗಳನ್ನು ಪಡೆದು ಪರಾಭವಗೋಡಿದ್ದಾರೆ, ಎರಡು ಮತಗಳು ಕುಲಗೆಟ್ಟಿವೆ. ಸತತ ಮೂರು ಬಾರಿ ನಿರ್ದೇಶಕರಾಗಿದ್ದ ಅಪ್ಪಯ್ಯಣ್ಣ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ, ಕಾಂಗ್ರೆಸ್ ಬೆಂಬಲಿತ ಆನಂದ್ ರವರನ್ನು ಗೆಲ್ಲಿಸಿ ಕೊಳ್ಳಲು ಪ್ರಾತಿಷ್ಠೆಯಾಗಿ ಸ್ವೀಕರಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಜೆಡಿಎಸ್ ಪಕ್ಷದ ಬಿನ್ನಮತವನ್ನು ಹಾಗೂ ಬಿಜೆಪಿಯಿಂದ ಯಾರೂ ಅಭ್ಯರ್ಥಿಗಳು ಇಲ್ಲದ್ದನು ಸೂಕ್ತವಾಗಿ ಬಳಸಿಕೊಂಡು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡರು.

ಜೆಡಿಎಸ್ ಪಕ್ಷದಲ್ಲಿನ ಭಿನ್ನಮತ ಇಷ್ಟುದಿನ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ, ಬಮೂಲ್ ಚುನಾವಣೆ ಪಕ್ಷವನ್ನು ಎರಡು ಬಣಗಳನ್ನಾಗಿ ಮಾಡಿತು. ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಆನಂದ್ ರನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದರು.  ನೂತನವಾಗಿ ಆಯ್ಕೆಯಾದ ಬಿ.ಸಿ.ಆನಂದ್ ರವರನ್ನು ಶಾಸಕ ಟಿ.ವೆಂಕಟರಮಣಯ್ಯ, ಕೆ.ಪಿ.ಸಿ.ಸಿ ಸದಸ್ಯರಾದ ಆರ್.ಜಿ.ವೆಂಕಟಾಚಲಯ್ಯ, ಎಂಜಿ.ಶ್ರೀನಿವಾಸ್, ಜಿ.ಲಕ್ಷ್ಮೀಪತಿ, ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್ ಮತ್ತಿತರರು ಅಭಿನಂಧಿಸಿದ್ದಾರೆ.

Edited By

Ramesh

Reported By

Ramesh

Comments