ವಿಶ್ವ ಯೋಗ ದಿನಾಚರಣೆ ಪೂರ್ವಬಾವಿ ಸಭೆ



ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ದಿನಾಂಕ 6-5-2019 ರ ಸೋಮವಾರ ನಗರದ ಶ್ರೀ ರಾಮಾಂಜನೇಯ ಕಲ್ಯಾಣ ಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆಯ ಪೂರ್ವಬಾವಿ ಸಭೆ ನೆಡೆಸಲಾಯಿತು, ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಪರಮ ಪೂಜ್ಯ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ ಜೂನ್ 21 ರಂದು ನೆಡೆಯುವ ವಿಶ್ವ ಯೋಗ ದಿನಾಚರಣೆಗೆ ಈಗಾಗಲೆ ಭಗತ್ ಸಿಂಗ್ ಕ್ರೀಡಾಂಗಣವನ್ನು ಕಾಯ್ದಿರಿಸಲಾಗಿದೆ, ಅಂದು ಕ್ರೀಡಾಂಗಣದಲ್ಲಿ ಮಾಡಬೇಕಾಗಿರುವ ಕಾರ್ಯಗಳ ತಯಾರಿಗಾಗಿ ಈ ಪೂರ್ವಬಾವಿ ಸಭೆ ಕರೆಯಲಾಗಿದೆ, ಯೋಗವನ್ನು ಇಡೀ ವಿಶ್ವವೇ ಸಮ್ಮತಿಸಿದೆ, ಈ ದಿನಾಚರಣೆಯನ್ನು ಎಲ್ಲರೂ ಪಕ್ಷ ಬೇದ ಮರೆತು ಆಚರಿಸಬೇಕು, ತಾಲ್ಲೂಕಿನ ಎಲ್ಲಾ ಜನರೂ ಇದರಲ್ಲಿ ಭಾಗವಹಿಸಲು ನಾವು ಪ್ರೇರೇಪಣೆ ನೀಡಬೇಕಾಗಿದೆ ಎಂದರು.
ಪರಮ ಪೂಜ್ಯ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಆಶೀರ್ವಚನ ನೀಡಿ ವಿಶ್ವ ಯೋಗ ದಿನಾಚರಣೆಯಲ್ಲಿ ಒಂದೇ ಕಡೆ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಎಲ್ಲರೂ ತಮ್ಮ ತಮ್ಮ ಜಾಗಗಳಲ್ಲೇ ಚಿಕ್ಕ ಚಿಕ್ಕ ತಂಡಗಳಾಗಿ ಆಚರಿಸುತ್ತಿದ್ದಾರೆ, ಅವರನ್ನೆಲ್ಲಾ ಒಂದೇಕಡೆ ಕರೆತರಲು ಪ್ರಯತ್ನಿಸಬೇಕು, ಯೋಗ ದಿನಾಚರಣೆ ಪೂರ್ವಬಾವಿಯಾಗಿ ಜೂನ್ ತಿಂಗಳಲ್ಲಿ ದಿನಾಂಕ 12 ರಿಂದ 18 ರ ವರೆಗೆ ಒಂದು ವಾರಗಳ ಕಾಲ ಬೆಳಿಗ್ಗೆ 6 ರಿಂದ 7 ಘಂಟೆಯವರೆಗೆ ತರಬೇತಿ ಶಿಬಿರವನ್ನು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಯೋಗ ಪಡೆದೆಕೊಳ್ಳುವಂತೆ ಕರೆ ನೀಡಿದರು, ಡಾ.ವಿಜಯಕುಮಾರ್, ಯೋಗಶಿಕ್ಷಕ ಬಿ.ಜಿ.ಅಮರನಾಥ್, ಕಾರ್ಯದರ್ಶಿ ಲೋಕೇಶ್ ಮೂರ್ತಿ, ಡಿ.ವಿ. ಗಿರೀಶ್, ಪಿ.ಕೆ.ಶ್ರೀನಿವಾಸ್, ಬಿ.ಪಿ. ಸನಾತನಮೂರ್ತಿ,ಎಂ.ಕೆ.ವತ್ಸಲ, ಬಿ.ಎ. ಗಿರಿಜ, ವತ್ಸಲ ಸತ್ಯನಾರಾಯಣ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಟ್ರಸ್ಟೀ ಕೆ.ವಿ.ಸುಧಾಕರ್, ಪ್ರಭುದೇವ ಯೋಗಕೇಂದ್ರದ ಸದಸ್ಯರು, ಆರ್ಯ ವೈಶ್ಯ ಮಹಿಳಾ ಮಂಡಳಿ ಸದಸ್ಯರು, ವೇದಾದ್ರಿ ಧ್ಯಾನಕೇಂದ್ರ ಸದಸ್ಯರು ಭಾಗವಹಿಸಿದ್ದರು.
Comments