ದೊಡ್ಡಬಳ್ಳಾಪುರದಲ್ಲಿ 5 ನೇ ಬಾರಿ ಶ್ರೀ ಚೌಡೇಶ್ವರಿ ಖತ್ತಿ ಹಬ್ಬ….ದೇವಾಂಗ ಕುಲ ಬಾಂಧವರಿಂದ

ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠ ಮಹಾ ಸಂಸ್ಥಾನದ ಜಗದ್ಗುರುಗಳಾದಂತಹ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಸ್ವಾಮಿಗಳ ಆಶೀರ್ವಾದದೊಂದಿಗೆ ದೊಡ್ಡಬಳ್ಳಾಪುರ ನಗರದ ಚೌಡೇಶ್ವರಿ ಗುಡಿಬೀದಿಯಲ್ಲಿರುವ ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 4-5-2019 ಶನಿವಾರದಿಂದ 7-5-2019 ಮಂಗಳವಾರದವರೆಗೆ ಶ್ರೀ ಚೌಡೇಶ್ವರಿ ಖತ್ತಿ ಹಬ್ಬವನ್ನು ದೇವಾಂಗ ಕುಲಬಾಂಧವರಿಂದ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ವಿವರ….ದಿನಾಂಕ 28-4-2019 ಭಾನುವಾರ ಬೆಳಿಗ್ಗೆ 10-30 ಕ್ಕೆ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಬಾಗದಲ್ಲಿ ದ್ವಜಾರೋಹಣ ನೆರವೇರಿಸಲಾಗುವುದು, 4-5-2019 ರ ಶನಿವಾರ ಬೆಳಿಗ್ಗೆ 10-30 ಕ್ಕೆ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ರಾಮಣ್ಣ ಬಾವಿ ತೀರ್ಥಕೊಳದಿಂದ ಶಕ್ತಿ ಮೆರವಣಿಗೆ ಸಮಸ್ತ ದೇವಾಂಗ ಕುಲಬಾಂಧವರಿಂದ, ದಿನಾಂಕ 5-5-2019 ಭಾನುವಾರ ಬೆರ್ಳಿಗ್ಗೆ 10-30 ಕ್ಕೆ ರಾಮಣ್ಣ ಬಾವಿ ತೀರ್ಥಕೊಳದಿಂದ ಚಾಮುಂಡಿ ಮೆರವಣಿಗೆ, ದಿನಾಂಕ 6-5-2019 ಸೋಮವಾರ ಸಂಜೆ ತೇರಿನ ಬೀದಿಯಲ್ಲಿರುವ ಶಂಕರ ಮಠ ದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಜ್ಯೋತಿ ಮೆರವಣಿಗೆ ಹಾಗೂ ದಿನಾಂಕ 7-5-2019 ಮಂಗಳವಾರ ಬೆಳಿಗ್ಗೆ ಚೌಡೇಶ್ವರಿ ದೇವಸ್ಥಾನದ ಬೀದಿಗಳಲ್ಲಿ ವಸಂತೋತ್ಸವ ಏರ್ಪಡಿಸಲಾಗಿರುತ್ತದೆ.
Comments