ವಯಸ್ಸಿನ ಅಂತರವನ್ನು ಮರೆತು ಇಟಲಿ ಮೇಡಂ ಮುಂದೆ ಬಗ್ಗಿ ನಿಲ್ಲುತ್ತಿದ್ದ ಹೆಮ್ಮೆಯ ಕನ್ನಡಿಗ



ಸೈದ್ಧಾಂತಿಕವಾಗಿ ಎಷ್ಟೇ ಟೀಕೆ ಮಾಡಿದ್ರು ದೊಡ್ಗೌಡ್ರ ಮೇಲೆ ಸ್ವಲ್ಪ ಮಟ್ಟಿನ ಅಭಿಮಾನ ಇತ್ತು, ಮೋದಿ ಪ್ರಧಾನಿಯಾಗಿ ಮೊದಲ ಬಾರಿಗೆ ಸಂಸತ್ತಿಗೆ ಕೈ ಮುಗಿದು ನಮಸ್ಕರಿಸಿ ಒಳಗೆ ಹೋಗಿದ್ದನ್ನ ಇವತ್ತು ದೊಡ್ಗೌಡ್ರು ಅಣಕಿಸಿದ್ದನ್ನ ನೋಡಿ ತುಂಬಾ ಬೇಜಾರಾಯ್ತು...2014 ರ ಚುನಾವಣೆಯ ಸಮಯದಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಟ್ ಹೋಗ್ತೀನಿ ಅಂತ ಇದೇ ದೊಡ್ಗೌಡ್ರು ಹೇಳಿದ್ದಾಗ ನರೇಂದ್ರ ಮೋದಿಯವರು ನೀವೆಲ್ಲೂ ಹೋಗ್ಬೇಡಿ ನಮ್ಮ ಮನೆಗೆ ಬನ್ನಿ ತಂದೆಯಂತೆ ನೋಡಿಕೊಳ್ತೀನಿ ಅಂತ ಹೇಳಿದ್ರು, ಬಹುಶಃ ಇದು ಎಷ್ಟು ಜನರಿಗೆ ನೆನಪಿದ್ಯೊ ಇಲ್ವೊ ಗೊತ್ತಿಲ್ಲ, ಇದೇ ದೊಡ್ಗೌಡ್ರು ಒಂದು ಮಾತ್ ಹೇಳಿದ್ರು, ಮೋದಿ ಪ್ರಧಾನಿಯಾದ ತಕ್ಷಣವೇ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡಲು ಹೋಗಿದ್ದೆ ಆಗ ಮೋದಿಯವರು ರಾಜೀನಾಮೆ ಕೊಡ್ಬೇಡಿ ನಿಮ್ಮಂಥ ಹಿರಿಯರ ಸಲಹೆ ನನಗೆ ಬೇಕು ಅಂತ ನನ್ನ ನಿರ್ಧಾರ ಬದಲಾಯಿಸಿದ್ರು.
ಎರಡು ವರ್ಷಗಳ ಹಿಂದೆ ಸಂಸತ್ತಿನ ಒಳಗೆ ಹೊಸ ತೆರಿಗೆ ಪದ್ಧತಿ GST ಯನ್ನು ಅನುಮೋದಿಸಲು ಎಲ್ಲರನ್ನೂ ಆಹ್ವಾನಿಸಿದ್ದಾಗ ಸಾಮಾನ್ಯರಂತೆ ಕೂತಿದ್ದ ದೊಡ್ಗೌಡ್ರನ್ನ ಕರೆದ ಮೇಲೆ ಕೂರಿಸಿ ಗೌರವ ಕೊಟ್ಟಿದ್ದು ಇದೇ ನರೇಂದ್ರ ಮೋದಿ...ಪ್ರತಿ ಬಾರಿ ರಾಜ್ಯದ ಸಮಸ್ಯೆಯನ್ನ ಪ್ರಧಾನಿಗಳ ಗಮನಕ್ಕೆ ತರಲು ದೊಡ್ಗೌಡ್ರು ಹೋದಾಗ ಅವರನ್ನು ಕೂರಿಸಿ ಗೌರವ ಕೊಟ್ಟು ಸಮಸ್ಯೆ ಬಗ್ಗೆ ಚರ್ಚಿಸಿ ಕಳುಹಿಸಿದ್ದು ಇದೇ ನರೇಂದ್ರ ಮೋದಿ...ವಯಸ್ಸಿನ ಅಂತರವನ್ನು ಮರೆತು ಇಟಲಿ ಮೇಡಂ ಮುಂದೆ ಬಗ್ಗಿ ನಿಲ್ಲುತ್ತಿದ್ದ ಹೆಮ್ಮೆಯ ಕನ್ನಡಿಗನಿಗೆ ತಂದೆಯ ಸ್ಥಾನ ಕೊಟ್ಟು ಗೌರವಿಸಿದ ವ್ಯಕ್ತಿ ನಮ್ಮ ಮೋದಿ...
ಇಂತಹ ಶ್ರೇಷ್ಠ ವ್ಯಕ್ತಿ ಪ್ರಜಾಪ್ರಭುತ್ವದ ದೇಗುಲ ಸಂಸತ್ತಿಗೆ ಕೈ ಮುಗಿದು ನಮಸ್ಕಾರ ಮಾಡಿ ಒಳಗೆ ಹೋಗಿದ್ದನ್ನ ರಾಜಕೀಯ ದ್ವೇಷಕ್ಕಾಗಿ ಇವತ್ತು ವ್ಯಂಗ್ಯ ಮಾಡಿದ್ರಲ್ಲ ಈ ದೊಡ್ಗೌಡ್ರು, ಅದನ್ನ ನೋಡಿದ ಮೇಲೆ ನಿಜಕ್ಕೂ ಮನುಷ್ಯ ಸ್ವಾರ್ಥಕ್ಕಾಗಿ ಹಳೆಯದನ್ನೆಲ್ಲಾ ಇಷ್ಟು ಬೇಗ ಮರೆತುಬಿಡ್ತಾನ ಅಂತ ಅನ್ನಿಸುತ್ತದೆ...ದೊಡ್ಗೌಡ್ರಿಗೆ ಸ್ವಂತ ಮಕ್ಕಳು ಕೂಡ ಮೋದಿಯಂತೆ ಗೌರವ ಕೊಟ್ಟಿದ್ರೊ ಇಲ್ವೊ ಆದ್ರೆ ಮೋದಿ ಮಾತ್ರ ಬಹಳ ಗೌರವ ಕೊಟ್ಟಿದ್ರು ,ಏನ್ ಕೊಟ್ರೆ ಏನ್ ಪ್ರಯೋಜನ ಅದನ್ನ ಸ್ವೀಕರಿಸುವ ಯೋಗ್ಯತೆಯನ್ನು ಕೆಲವರು ಕಳ್ಕೊಂಡ್ಬಿಡ್ತಾರೆ...ದೊಡ್ಗೌಡ್ರದ್ದು ಬಿಟ್ಟಾಕಿ, ವಿರೋಧಿಗಳು ಇಷ್ಟೆಲ್ಲಾ ಅವಮಾನ ಮಾಡಿದ್ರೂ ಎಲ್ಲೂ ಸಹ ಅವರ ಮೇಲೆ ಕೆಟ್ಟ ಮಾತುಗಳಿಂದ ದಾಳಿ ಮಾಡದೆ ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಮತ್ತೆ ವೈಯಕ್ತಿಕವಾಗಿ ಗೌರವ ಕೊಡುವ ಇಂತಹ ಪ್ರಧಾನಿಯನ್ನ ಸಮರ್ಥಿಸಿಕೊಳ್ಳೋದಿಕ್ಕೆ ಹೆಮ್ಮೆ ಅನ್ಸುತ್ತೆ...
ಮೋದಿಜಿ ನಿಮ್ಮನ್ನ ಯಾರು ಎಷ್ಟಾದರೂ ದ್ವೇಷಿಸಲಿ ಆದ್ರೆ ಸಾಗರದಷ್ಟು ಪ್ರೀತಿ ಕೊಡುವ ಕೋಟ್ಯಾಂತರ ಅಭಿಮಾನಿಗಳು ನಿಮ್ಮ ಜೊತೆಗೆ ಯಾವಾಗಲೂ ಇರ್ತೀವಿ...
- ಇಂಗೇ ಉಗಿ ಅಂತ, Shrinivas KB ಗ್ ಈ ಸಲ ಕಿವಿಮಾತ್ ಹೇಳಿದ್ ಮಾತ್ರ ನಮ್ಮೂರ್ ಹೈದ ಸಿದ್ದು
Comments