ಗುರು ಶಿಷ್ಯರಿಂದ ರೋಡ್ ಶೋ…. ಕಾಣೆಯಾದ ಮೊಯಿಲಿ ಪರ ಮತ ಯಾಚನೆ, ಕಾಣೆಯಾದ ಸಮನ್ವಯತೆ



ದಿನಾಂಕ 09-04-2019 ಇಂದು ಮಧ್ಯಾನ್ಹ 1-00 ಗಂಟೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್-ಪಕ್ಷದ ಮೈತ್ರಿ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಅವರ ಪರವಾಗಿ ಚುನಾವಣಾಪ್ರಚಾರ ಕೈಗೊಳ್ಳಲು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದರು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಾತನಾಡಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ನಾವಿಬ್ಬರು ಒಂದಾಗಿದ್ದೇವೆ, ಮೋದಿ ಈ ರಾಷ್ಟ್ರಕ್ಕೆ ಏನು ಮಾಡಿದ್ದಾರೆ? ಬರೀ ಮಾತಿನಲ್ಲೇ ಮನೆ ಕಟ್ಟುತ್ತಾರೆ, ರಾಹುಲ್ ಗಾಂಧಿ ಪ್ರಧಾನಿ ಮಾಡಲು ಮೊಯಿಲಿಗೆ ಓಟು ನೀಡಿ ಎಂದು ಕೇಳಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ ಸ್ಥಳೀಯ ಶಾಸಕ ವೆಂಕಟರಮಣಯ್ಯರನ್ನು ಕೊಂಡಾಡಿದ್ದು ಜೆಡಿಎಸ್ ಕಾರ್ಯಕರ್ತರಿಗೆ ಬೇಸರ ತರಿಸಿತು, ನೇಕಾರರಿಗೆ ನಾನು ಮಾಡಿರುವಷ್ಟು ಅನುಕೂಲ ಬೇರಾವ ಸರ್ಕಾರವೂ ಮಾಡಿಲ್ಲ, ಎರಡು ಬಾರಿ ನೇಕಾರರ ಸಾಲಮನ್ನಾ ಮಡಿದ್ದೇನೆ, ಕರೆಂಟ್ ರೇಟ್ ಒಂದೂಕಾಲು ರೂ. ಮಾಡಿದ್ದೇನೆ, ಯಡಿಯೂರಪ್ಪ ಬರೀ ಬುರುಡೆ ಬಿಡುವುದಷ್ಟೇ ಒಂದೂ ಸಹಾಯ ಮಾಡುವುದಿಲ್ಲಾ, ಮುಖ್ಯಮಂತ್ರಿ ಹತ್ತಿರ ಮಾತನಾಡಿ ನೇಕಾರರಿಗೆ ಉಚಿತವಾಗಿ ಕರೆಂಟ್ ನೀಡಲು ಹೇಳುತ್ತೇನೆ ಎಂದರು. ನಗರದ ಅರಳುಮಲ್ಲಿ ವೃತ್ತದಿಂದ ಡಿ.ಕ್ರಾಸ್ ವರೆಗೆ ಇದ್ದ ರೋಡ್ ಶೋ ಕೊನೆಕ್ಷಣದಲ್ಲಿ ಸಮಯಾಬಾವದಿಂದ ರದ್ದು ಮಾಡಿದರು, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಜೆಡಿಎಸ್ ಬೆಂ.ಗ್ರಾ. ಜಿಲ್ಲಾಧ್ಯಕ್ಷ ಮುನೇಗೌಡ,ನಗರ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್, ಸಚಿವ ಟಿ.ಬಿ,ನಾಗರಾಜ್, ಮುಖಂಡ ಎಂ.ಜಿ.ಶ್ರೀನಿವಾಸ್, ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ಕಂಟನಕುಂಟೆ ಕೃಷ್ಣಮೂರ್ತಿ, ಮತ್ತಿತರರು ಹಾಜರಿದ್ದರು,
Comments