ನಮ್ಮ ದೇಶದ ಸಂವಿಧಾನವನ್ನು ದುರುಪಯೋಗ ಪಡಿಸಿಕೊಂಡಿದ್ದೇ ಕಾಂಗ್ರೆಸ್ …ಶಾಸಕ ಸುರೇಶ್ ಕುಮಾರ್

05 Apr 2019 3:05 PM |
309 Report

ಇತ್ತೀಚೆಗೆ ಬಿಜೆಪಿಯ ಮೇಲಿನ ಕಾಂಗ್ರೆಸ್ ಪಕ್ಷದ ಆರೋಪ ಕೇಂದ್ರದಲ್ಲಿ ಮತ್ತೊಂದು ಬಾರಿ ಬಿಜೆಪಿ ಸರ್ಕಾರ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ, ಮೊನ್ನೆ ಪರಮೇಶ್ವರ್ ಕೂಡಾ ಹೇಳಿದ್ದಾರೆ, ಇದಕ್ಕೆ ಉದಾಹರಣೆ ಎಂದರೆ ಶ್ರೀಮತಿ ಇಂದಿರಾಗಾಂಧಿಯವರಿಗೆ ರಕ್ಷಣೆಕೊಡುವುದಕ್ಕಾಗಿ ತುರ್ತುಪರಿಸ್ಥಿತಿಯಲ್ಲಿ ಯಾವರೀತಿ ತಿದ್ದುಪಡಿ ಮಾಡಿದರು, ದೇಶದ ಲಕ್ಷಾಂತರ ಜನರನ್ನು ಜೈಲಿಗೆ ಹಾಕಿದ್ದರು, ಮಾದ್ಯಮಗಳಮೇಲೆ, ವ್ಯಕ್ತಿ ಸ್ವಾತಂತ್ರಕ್ಕೆ ಯಾವರೀತಿ ಕಡಿವಾಣ ಹಾಕಿದ್ದರು ಎಂದು ಎಲ್ಲರಿಗೂ ಗೊತ್ತಿರುವಂತದ್ದೆ, ಅವರೀಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

ಎರಡನೆಯದು ಶಾಬಾನು ಪ್ರಕರಣ ಆದಮೇಲೆ ಒಬ್ಬ ಮಹಿಳೆಗೆ ಮಾಶಾಸನ ಕೊಡಬೇಕು ಎಂದು ಅದನ್ನೂ ಕೂಡ ತಲಾಖ್ ಗೆ ಒಳಗಾದ ಮಹಿಳೆಗೆ ಎಂದು ಸುಪ್ರಿಂ ಕೋರ್ಟ್ ಹೇಳಿದಾಗ ಕೋರ್ಟ್ ನಿರ್ದೇಶನವನ್ನು ದಿಕ್ಕರಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಾರೆ, ನಮ್ಮ ಸಂವಿಧಾನ ಯಾರೋ ಯಾವಾಗಲೋ ಬದಲಾಯಿಸುವಷ್ಟು ದುರ್ಬಲ ಅಲ್ಲ, ನಮ್ಮ ಪ್ರಧಾನಿ ನರೇಂದ್ರಮೋದಿ ಸಂಸತ್ತಿನಲ್ಲಿ ಒಂದು ಮಾತು ಹೇಳಿದ್ದಾರೆ, ನನ್ನ ಧರ್ಮ ಗ್ರಂಥ ನಮ್ಮ ದೇಶದ ಸಂವಿಧಾನ, ಕಳೆದ ಐದು ವರ್ಷಗಳಲ್ಲಿ ಸಂವಿಧಾನಕ್ಕೆ ಅಪಚಾರ ಎಸಗುವಂತಹ ಒಂದೇ ಒಂದು ಕೆಲಸ ಭಾರತೀಯ ಜನತಾ ಪಕ್ಷ ಮಾಡಿಲ್ಲ. ಸಂವಿಧಾನದ ಆಶೋತ್ತರವನ್ನು ಈಡೇರಿಸುವಂತಹ ಕೆಲಸ ಮಾಡಿದೆ, ಅದನ್ನು ಬದಲಾವಣೆ ಮಾಡೋ ಉದ್ದೇಶವೂ ಇಲ್ಲ ಅದು ನಮ್ಮ ಗುರಿಯೂ ಅಲ್ಲ, ಸಂವಿಧಾನದ್ದೇ ಒಂದು ಅಂಶ ತೆಗೆದುಕೊಂಡು ಮಾಡಿರುವುದೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿದರು.

ದೊಡ್ಡಬಳ್ಳಾಪುರ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಇಂದು ನೆಡೆದ ವಕೀಲರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಾದ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು, ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ರವರಿಗೆ ಪುಷ್ಪ ನಮನ ಸಲ್ಲಿಸಿದರು. ಕೆ.ಎಂ.ಹನುಮಂತರಾಯಪ್ಪ, ನಗರ ಅಧ್ಯಕ್ಷ ರಂಗರಾಜು, ಪ್ರಧಾನಕಾರ್ಯದರ್ಶಿ ಶ್ರೀನಿವಾಸ್, ಜೋ.ನಾ.ಮಲ್ಲಿಕಾರ್ಜುನ್, ಮೋಹನ್ ಕುಮಾರ್, ಅಮರ್, ತಾ.ಉಪಾಧ್ಯಕ್ಷ ಮಹದೇವ್, ವಕೀಲರಾದಂತಹ ರವಿ ಮಾವಿನಕುಂಟೆ, ಜಿ.ಟಿ.ರವಿಕುಮಾರ್ ಮತ್ತಿತರ ವಕೀಲರು ಹಾಜರಿದ್ದರು.    

 

Edited By

Ramesh

Reported By

Ramesh

Comments