ಎತ್ತಿನಹೊಳೆ..ದೊಡ್ಡಬಳ್ಳಾಪುರ ನಾಗರೀಕರಿಗೆ ಸಂಸದ ಮೊಯಿಲಿ ಉಂಡೆನಾಮ? ಆರ್ ಟಿ ಐ ನಿಂದ ಬಹಿರಂಗ

04 Apr 2019 5:29 PM |
290 Report

ಎತ್ತಿನಹೊಳೆ ನೀರು ಹರಿಸಿಯೇ ನಾನು ಸಾಯುತ್ತೇನೆ, ಅಂತ ವೀರಪ್ಪಮೋಯ್ಲಿಯವರು ಪ್ರತಿಜ್ಞೆ ಮಾಡಿಕೊಂಡು ತಿರುಗುತ್ತಿದ್ದಾರೆ. ಎತ್ತಿನಹೊಳೆ ಎಂದಿಗೆ ಬರುತ್ತೋ? ಅದು ಬಂದಾಗಲಾದರೂ ನಮ್ಮ ನೀರಿನ ಬವಣೆ ನೀಗಬಹುದು ಎಂಬ ಸಣ್ಣ ಆಶಾಭಾವನೆ ದೊಡ್ಡಬಳ್ಳಾಪುರದ ಜನತೆಗೆ ಇದೆ. ಆದರೆ, ಮೋಯ್ಲಿಯವರು ಈ ಯೋಜನೆಯಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ನಮ್ಮ ತಾಲ್ಲೂಕಿನ ಕೇವಲ 7ಕೆರೆಗಳಿಗೆ ಮಾತ್ರ ಎತ್ತಿನಹೊಳೆ ಲಭ್ಯ. ಅದೂ ಕೂಡ, ದೊಡ್ಡಬೆಳವಂಗಲ ಹೋಬಳಿಯ ಒಂದು ಕೆರೆ(ನೆಲಮಂಗಲ ಗಡಿಯಲ್ಲಿದೆ). ಸಾಸಲು ಹೋಬಳಿಯ ಆರು ಕೆರೆಗಳು. ಅವೂ ಕೂಡ ಗೌರಿಬಿದನೂರಿನ ಗಡಿಯಲ್ಲಿದ್ದು, ಉತ್ತರ ಪಿನಾಕಿನಿಯ ಪಾತ್ರದಲ್ಲಿ ನೀರು ಆರಾಮಾಗಿ ಅತ್ತ ಹರಿಯುವಂತೆ ಯೋಜನೆ ರೂಪಿಸಿದ್ದಾರೆ.

ಮೂಡ್ಲಕಾಳೇನಹಳ್ಳಿ-ದೊಡ್ಡಬೆಳವಂಗಲ(ಕೆರೆಯ ಹತ್ತಿರದಲ್ಲೇ ಬಿಬಿಎಂಪಿ ಡಂಪಿಂಗ್ ಯಾರ್ಡ್ ಇದೆ). ಶ್ರೀರಾಮನಹಳ್ಳಿ-ಸಾಸಲು, ಮಚ್ಚೇನಹಳ್ಳಿ-ಸಾಸಲು ಕೊಟ್ಟಿಗೆಮಾಚೇನಹಳ್ಳಿ-ಸಾಸಲು, ಆರೂಡಿ-ಸಾಸಲು, ಗುಂಡುಂಗೆರೆ-ಸಾಸಲು ಮಲ್ಲಹಳ್ಳಿ-ಸಾಸಲು ಒಟ್ಟಿಗೆ ಕೇವಲ 0.076 ಟಿ.ಎಂ.ಸಿ. ತಾಲ್ಲೂಕಿನ ಉಳಿದ ಭಾಗಗಳ ಜನರಿಗೆ ಕುಡಿಯೋದಕ್ಕೆ ಇರಲಿ, ತೊಳಕೊಳ್ಳೋಕು ನೀರಿಲ್ಲ. ಹೀಗಿರೋವಾಗ ತಾಲ್ಲೂಕಿನ ಬೇರೆ ಭಾಗಗಳಲ್ಲಿ ಎತ್ತಿನಹೊಳೆಯ ನೀರನ್ನು ಇಟ್ಟುಕೊಂಡು ಮೋಯ್ಲಿ ಮತ್ತು ಇಲ್ಲಿನ ಶಾಸಕರು ಏಕೆ ಪ್ರಚಾರ ಮಾಡುತ್ತಿದ್ದಾರೆ? ಬಿಜೆಪಿ ಸರ್ಕಾರ ರೂಪಿಸಿದ್ದ ಯೋಜನೆಯ ನಕ್ಷೆಯನ್ನ ಬೇಕಾಬಿಟ್ಟಿ ತಿದ್ದಿ, ನಮಗೆ ಇಷ್ಟೆಲ್ಲಾ ಅನ್ಯಾಯ ಮಾಡುತ್ತಿದ್ದರೂ, ಪ್ರಶ್ನಿಸದೇ ಸುಮ್ಮನಿರಬೇಕಾ? ಪ್ರಶ್ನಿಸಲು ಇದಕ್ಕಿಂತಾ ಉತ್ತಮ ಸಮಯ ಬೇಕಾ? ಇವರಿಗೆ ಮತ ನೀಡಿ ಗೆಲ್ಲಿಸಬೇಕಾ??

 

 

Edited By

Ramesh

Reported By

Ramesh

Comments