ಮೋದಿಯವರೇನೂ ಬಂದು ಸರ್ದಾರ್ ಪ್ರತಿಮೆಯ ಬಳೀ ಟಿ ಮಾರೋಲ್ಲ! ಅಲ್ಲಿ ನೀವೇ ಟೀ ಅಂಗಡಿ ಹಾಕಬಹುದು!

01 Apr 2019 9:55 AM |
374 Report

ಅದು ಒಂದು ದಾರವಾಡದ ವಿಶ್ವವಿದ್ಯಾಲಯ, ಟಿವಿ ಚಾನಲ್ ವರದಿಗಾರ ವಿದ್ಯಾರ್ಥಿಗಳಿಂದ ಮುಂದಿನ ಪ್ರಧಾನಿ ಯಾರಾಗ ಬೇಕು? ಎಂದು ಕೇಳುತ್ತಿದ್ದ, ವಿದ್ಯಾರ್ಥಿಗಳ ಉತ್ತರ ಕೇಳಿ ಒಂದು ಕ್ಷಣ ಅವಾಕ್ಕಾದೆ…… ಪ್ರಶ್ನೆ.. 2019 ರ ಲೋಕಸಭಾ ಚುನಾವಣೆ ಬರುತ್ತಾ ಇದೆ ಮುಂದಿನ ಪ್ರಧಾನಿ ಯಾರಾದರೆ ಉತ್ತಮ ಎಂದು ನಿಮ್ಮ ಅಭಿಪ್ರಾಯ? ವಿದ್ಯಾರ್ಥಿ 1… ನಾವು ಓಟು ಯಾರಿಗೆ ಹಾಕ್ತೀವಿ ಅಂತಾ ಹೇಳೊಕಾಗಲ್ಲ,ಆದರೆ ಈಗಿನ ಪ್ರಧಾನಿ ಮೋದಿ ಬರೀ ಉದ್ಯಮಿಗಳಿಗೇ ಸಹಾಯ ಮಾಡುತ್ತಾರೆ, ನಮ್ಮಂತಾ ಬಡ ವಿದ್ಯಾರ್ಥಿಗಳಿಗೆ ಏನೂ ಸಹಾಯ ಮಾಡಿಲ್ಲ, ರಾಹುಲ್ ಗಾಂದಿ ಆದರೆ ನಮಗೆ ಅನುಕೂಲ…..ವಿದ್ಯಾರ್ಥಿ 2.. ಮೋದಿ ಬರೀ ಮಾತುಗಾರ ಅಷ್ಟೇ, ಯಾವಾಗ ನೋಡಿದರೂ ಉದ್ಯಮಿಗಳ ಪರವಾಗೇ ಮಾತು, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಅಂತಾರೆ, ಅದರಿಂದ ನಮಗೆ ಉದ್ಯೋಗ ಸಿಕ್ಕಿದೆಯಾ? ರಾಹುಲ್ ಆದರೆ ಏನಾದರೂ ಮಾಡಬಹುದು.

ವಿದ್ಯಾರ್ಥಿ 3… ಈಗಿನ ಪರಿಸ್ಥಿತಿಯಲ್ಲಿ ಮಹಾಘಟಬಂದನದ ಮಾಯಾವತಿ ಆದರೆ ಉತ್ತಮ, ನಮ್ಮಂತ ಹಿಂದುಳಿದವರಿಗೆ ಅನುಕೂಲ.

ವಿದ್ಯಾರ್ಥಿ 4… ಮೋದಿ ಬರೀ ಸುಳ್ಳು ಹೇಳೊದರಲ್ಲೇ ಐದು ವರ್ಷ ಕಳೆದಿದ್ದಾರೆ, ಏನೂ ಪ್ರಯೋಜನವಿಲ್ಲ, ಅಲ್ಲಾ ಒಂದು ಪ್ರತಿಮೆಗೆ ಮೂರೂವರೆ ಸಾವಿರ ಕೋಟಿ ಸುರಿದಿದ್ದಾರೆ, ಅದರಿಂದ ಯಾರಿಗೆ ಉಪಯೋಗ? ದುಡ್ಡು ಹಾಳು ಅಷ್ಟೇ, ಅದೇ ಹಣವನ್ನು ನಮಗೆ ಕೋಟ್ಟಿದ್ದರೆ ಏನಾದರೂ ಉಪಯೋಗ ಆಗುತ್ತಿತ್ತು. ನನಗೇನೋ ರಾಹುಲ್ ಪ್ರಧಾನಿಯಾದರೆ ಒಳ್ಳೆಯದು.

ಹೀಗೇ ಪುಂಕಾನುಪುಂಕವಾಗಿ ವಿದ್ಯಾಥಿಗಳು ಹೇಳುತ್ತಿದ್ದರು,  ಹೌದು ಮೋದಿ ಉದ್ಯಮಿಗಳಿಗೆ ಪ್ರೋತ್ಸಾಹನೀಡುತ್ತಾರೆ, ಅವರ ಪರವಾಗೇ ಮಾತನಾಡುತ್ತಾರೆ, ಸರಿ ಇದರಲ್ಲಿ ತಪ್ಪೇನು? ಯಾರಾದರೂ ಒಂದು ಉದ್ಯಮ ಶುರು ಮಾಡಿದರೆ ತಾನೆ ಉದ್ಯೋಗಗಳು ಸೃಷ್ಠಿಯಾಗೋದು? ಎಲ್ಲಾ ಕೆಲಸ ಸ್ಥಾಪಿಸಿದವನೇ ಮಾಡಿಕೊಳ್ಳುತ್ತಾನಾ? ಇಲ್ಲವಲ್ಲ?  ಕಾರ್ಖಾನೆ ಮಾಡಬೇಕಾದರೆ ಮೊದಲು ಕಟ್ಟಡ ಕಟ್ಟಬೇಕು, ಇದರಿಂದಾಗಿ ಕಟ್ಟಡ ನಿರ್ಮಾಣದಲ್ಲಿ ಅವಲಂಬಿತವಾಗಿರುವ ಎಷ್ಟು ಮಂದಿಗೆ ಉದ್ಯೋಗ ದೊರೆಯಿತು, ನಂತರ ಅದರಲ್ಲಿ ಹಾಕುವ ಮಿಷಿನರಿ, ಅದನ್ನು ನೆಡೆಸುವ ಕಾರ್ಮಿಕರು, ಅವರ ಸಹಾಯಕರು, ಹಾಗೇ ಈ ಕಾರ್ಮಿಕರನ್ನು ನಂಬಿ ನೆಡೆಯುವ ಟೀ ಅಂಗಡಿಗಳು, ಸಣ್ಣಪುಟ್ಟ ಕಿರಾಣಿ ಅಂಗಡಿಗಳು, ಆಟೋರಿಕ್ಷಾ ನೆಡೆಸುವವರು, ಇವೆಲ್ಲಾ ಒಂದು ಉದ್ಯಮ ಅಥವಾ ಉದ್ಯಮಿಯನ್ನು ನಂಬಿ ಸೃಷ್ಠಿ ಯಾಗುವ ಉದ್ಯೋಗಗಳಲ್ಲವಾ? ಎಲ್ಲರಿಗೂ ಎಸಿ ಕೋಣೆಯಲ್ಲೇ ಉದ್ಯೋಗ ದೊರಕಲಿ ಎಂದು ಕಾಯುವುದು ಅಥವ ಕೇಳುವುದು ಮೂರ್ಖತನ! ನಾನು ಇಂಜಿನಿಯರ್ ನನಗೆಲ್ಲೂ ಕೆಲಸ ಸಿಗುತ್ತಿಲ್ಲಾ? ಕೊಡುತ್ತಿಲ್ಲಾ ಅಂದರೆ ಅದು ಅವರ ತಪ್ಪಲ್ಲಾ…. ಅವರಿಗೆ ಬೇಕಾದಂತೆ ಕೆಲಸ ಮಾಡುವ ಅರ್ಹತೆ ನಿನ್ನಲ್ಲಿಲ್ಲ ಅಂತಾ! 

ಇದೆಲ್ಲಾ ಬಿಡಿ ಅತ್ಲಾಗೆ… ಈಗ ಮುಖ್ಯವಾಗಿ ಕೈ ಪಕ್ಷದೋರು ಅಥವಾ ಅವರ ಹಿಂಬಾಲಕರು  ಮಾಡುತ್ತಿರೋ ಪ್ರಮುಖ ಆರೋಪ ನರ್ಮದಾ ನದೀ ತೀರದಲ್ಲಿ ನಿಲ್ಲಿಸಿರೋ ಸರ್ದಾರ್ ಪ್ರತಿಮೆ, ಅದಕ್ಕೆ ಮೋದಿ ಹಾಕಿರೋ ಬಂಡವಾಳ, ಸರಿ ಮೂರೂವರೆ ಸಾವಿರ ಕೋಟಿನಾ? ವೇಷ್ಟ್…. ಒಂದು ಪ್ರತಿಮೆ, ಮೂರೂವರೆ ಸಾವಿರ ಕೋಟಿ, ಒಂದು ಸಾರಿ ಹಾಕೋ ಬಂಡವಾಳ! ಆ ಪ್ರತಿಮೆ ಈಗ ತಾಜ್ ಅಷ್ಟೇ ಪ್ರಖ್ಯಾತ, ಪ್ರವಾಸೋದ್ಯಮದ ಬಂಡವಾಳ ಆ ಪ್ರತಿಮೆ! ಅದರಿಂದ ಆಗೋ ವ್ಯವಹಾರ, ಗುಜರಾತ್ ಪ್ರವಾಸೋದ್ಯಮ ಮತ್ತಷ್ಟು ಗಟ್ಟಿಯಾಗುತ್ತೆ, ಅದನ್ನು ನಂಬಿ ಹೋಟೆಲ್ ಉದ್ಯಮ ಬೆಳೆಯುತ್ತೆ, ದಾರಿಯುದ್ದಕ್ಕೂ ಸಣ್ಣ ಪುಟ್ಟ ಅಂಗಡಿಗಳು ಶುರುವಾಗುತ್ತೆ, ಕಾರು, ಆಟೋ, ಬಸ್ ಗಳ ಸಂಖ್ಯೆ ಜಾಸ್ತಿಯಾಗುತ್ತೆ, ಪ್ರತಿಮೆಯ ಸಣ್ಣ ಸಣ್ಣ ಪ್ರತಿರೂಪಗಳ ಉದ್ಯಮ ಸ್ಥಾಪನೆ, ರೆಸ್ಟೋರೆಂಟ್, ಊಟ ಮತ್ತು ವಸತಿ ಹೀಗೇ ಇನ್ನೂ ಎಷ್ಟು ತರಹ ಉದ್ಯಮಗಳು ಅದರಿಂದ ಬೆಳೆಯುತ್ತವೆ, ಮಾಡಲು ಕೆಲಸಗಳು ಬೇಕಾದಷ್ಟಿವೆ ಮೋದಿಯವರೇನೂ ಬಂದು ಸರ್ದಾರ್ ಪ್ರತಿಮೆಯ ಬಳೀ ಟಿ ಮಾರೋಲ್ಲ! ಅಲ್ಲಿ ನೀವೇ ಟೀ ಅಂಗಡಿ ಹಾಕಬಹುದು! ಆದರೆ ಮಾಡಲು ಮನಸ್ಸಿರಬೇಕಷ್ಟೇ.

ಪಕೋಡಾ ಮಾರಿ ಕೂಡಾ ಮರ್ಯಾದೆ ಇಂದ ಜೀವನ ಮಾಡಬಹುದು ಎಂದು ಹೇಳಿದರೆ ಅದನ್ನೂ ಹಿಯಾಳಿಸುವವರಿಗೆ, ರಾಹುಲ್ ಅಂಥಾ ಮೂರ್ಖನನ್ನು ಪ್ರಧಾನಿಯನ್ನಾಗಿ ನೋಡುವ ಅಥವಾ ಮಾಡಲು ಕಾಯುತ್ತಿರುವವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ…..

Edited By

Ramesh

Reported By

Ramesh

Comments